ತಂತ್ರಜ್ಞಾನ, ಆನ್ ಲೈನ್ ಸೇವೆಯ ಜ್ಞಾನ ಕೊರತೆ: ಸೈಬರ್ ಅಪರಾಧಗಳಿಗೆ ಸುಲಭವಾಗಿ ಮೋಸ ಹೋಗುತ್ತಿರುವ ಹಿರಿಯ ನಾಗರಿಕರು!

ಟೆಕ್ ಅನಕ್ಷರತೆ ಜೊತೆಗೆ ಪ್ರತ್ಯೇಕತೆಯ ಭಾವನೆ, ಹೆಚ್ಚು ಬಿಡುವಿನ ಸಮಯಗಳಲ್ಲಿ ಒಬ್ಬಂಟಿ ಭಾವನೆ ಮತ್ತು ತಂತ್ರಜ್ಞಾನವನ್ನು ಅನ್ವೇಷಿಸಲು ಹೆಚ್ಚುತ್ತಿರುವ ಕುತೂಹಲವು ಹಿರಿಯ ನಾಗರಿಕರನ್ನು ಸೈಬರ್ ಅಪರಾಧಕ್ಕೆ ಗುರಿಯಾಗುವಂತೆ ಮಾಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಟೆಕ್ ಅನಕ್ಷರತೆ ಜೊತೆಗೆ ಪ್ರತ್ಯೇಕತೆಯ ಭಾವನೆ, ಹೆಚ್ಚು ಬಿಡುವಿನ ಸಮಯಗಳಲ್ಲಿ ಒಬ್ಬಂಟಿ ಭಾವನೆ ಮತ್ತು ತಂತ್ರಜ್ಞಾನವನ್ನು ಅನ್ವೇಷಿಸಲು ಹೆಚ್ಚುತ್ತಿರುವ ಕುತೂಹಲವು ಹಿರಿಯ ನಾಗರಿಕರನ್ನು ಸೈಬರ್ ಅಪರಾಧಕ್ಕೆ ಗುರಿಯಾಗುವಂತೆ ಮಾಡಿದೆ. 

ಇತ್ತೀಚಿನ ಪ್ರಕರಣವೊಂದರಲ್ಲಿ, ಕಳೆದುಹೋದ ವಿಮಾ ಪ್ರೀಮಿಯಂ ನವೀಕರಿಸಲು ಸಹಾಯ ಮಾಡುವ ನೆಪದಲ್ಲಿ ಹಿರಿಯ ನಾಗರಿಕರೊಬ್ಬರಿಗೆ 5.5 ಕೋಟಿ ರೂಪಾಯಿಯನ್ನು ಆನ್ ಲೈನ್ ನಲ್ಲಿ ವಂಚಕನೊಬ್ಬ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಆಗ್ನೇಯ ವಿಭಾಗದಲ್ಲಿ ವರದಿಯಾದ ಮತ್ತೊಂದು ಪ್ರಕರಣದಲ್ಲಿ, 65 ವರ್ಷದ ನಿವೃತ್ತ ವ್ಯಕ್ತಿಯೊಬ್ಬರು ಆನ್‌ಲೈನ್ ಉದ್ಯೋಗ ವಂಚನೆಯಿಂದ 39 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. 

ಹಿರಿಯ ನಾಗರಿಕರು ಸೈಬರ್ ಕ್ರೈಮ್ ಬಲೆಗೆ ಸುಲಭವಾಗಿ ಬಲಿಯಾಗುತ್ತಾರೆ, ಅವರು ಡಿಪೆಂಡೆನ್ಸಿ ಸಿಂಡ್ರೋಮ್‌ಗೆ ಒಳಗಾಗುತ್ತಾರೆ, ಇದು ಅಪರಿಚಿತರನ್ನು ಸುಲಭವಾಗಿ ನಂಬುವಂತೆ ಮಾಡುತ್ತದೆ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ ದಯಾನಂದ ಹೇಳುತ್ತಾರೆ. ಹೆಚ್ಚುತ್ತಿರುವ ಸೈಬರ್ ಅಪರಾಧ ಮತ್ತು ಹಿರಿಯ ನಾಗರಿಕರನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ವಂಚನೆಗಳು ನಡೆಯುತ್ತಿರುತ್ತವೆ. 

ಹಿರಿಯ ನಾಗರಿಕರು ಹೆಚ್ಚಾಗಿ ತಾಂತ್ರಿಕವಾಗಿ ಅಶಿಕ್ಷಿತರಾಗಿರುತ್ತಾರೆ. ಇದು ಸೈಬರ್ ವಂಚನೆಗೆ ಗುರಿಯಾಗುವಂತೆ ಮಾಡುತ್ತದೆ ಎಂದು ಆಯುಕ್ತರು ಹೇಳಿದರು. ಸೈಬರ್ ಅಪರಾಧಿಗಳು ಶಾಪಿಂಗ್ ಅಥವಾ ಅಪ್ಲಿಕೇಶನ್‌ಗಳನ್ನು ಭರ್ತಿ ಮಾಡುವಂತಹ ಆನ್‌ಲೈನ್ ಕಾರ್ಯಗಳಿಗೆ ಸಹಾಯವನ್ನು ನೀಡುವಾಗ ಮೋಸಗೊಳಿಸುತ್ತಾರೆ. ರೆಕಾರ್ಡ್ ಮಾಡಿದ ವಾಟ್ಸಾಪ್ ವೀಡಿಯೊ ಕರೆಗಳ ಮೂಲಕ ಹಿರಿಯ ನಾಗರಿಕರನ್ನು ಸುಲಿಗೆ ಮಾಡಲಾಗುತ್ತದೆ, ಅಲ್ಲಿ ಅವರನ್ನು ಲೈಂಗಿಕ ವಿಷಯಕ್ಕೆ ಆಮಿಷವೊಡ್ಡಲಾಗುತ್ತದೆ. ತಮ್ಮ ಹೆಸರು ಎಲ್ಲಿ ಹಾಳಾಗುತ್ತದೋ ಎಂಬ ಭೀತಿಯಿಂದ ವಂಚನೆಗೊಳಗಾದವರು ಭಯದಿಂದ ಪೊಲೀಸರಿಗೆ ವರದಿ ಮಾಡುವ ಬದಲು ವಂಚಕರಿಗೆ ಆನ್ ಲೈನ್ ನಲ್ಲಿ ಹಣ ಕಳುಹಿಸುತ್ತಾರೆ ಎಂದು ಹೇಳಿದರು. 

ಈ ಬಗ್ಗೆ TNIE ಯೊಂದಿಗೆ ಮಾತನಾಡಿದ ಪೊಲೀಸ್ ಉಪ ಕಮಿಷನರ್ (ಆಗ್ನೇಯ ವಿಭಾಗ) ಸಿ ಕೆ ಬಾಬಾ, ತಮ್ಮ ಮಕ್ಕಳು ಅಥವಾ ಮೊಮ್ಮಕ್ಕಳೊಂದಿಗೆ ಸಂಪರ್ಕ ಸಾಧಿಸಲು ಹಿರಿಯ ನಾಯಕರು ಕಷ್ಟಪಡುತ್ತಿರುತ್ತಾರೆ. ಅಲ್ಲದೆ ಹಿರಿಯ ನಾಗರಿಕರಿಗೆ ಬೇಕಾದಷ್ಟು ಸಮಯವಿರುತ್ತದೆ. ಈ ವೇಳೆ ಸೈಬರ್ ಅಪರಾಧಗಳ ಅರಿವಿಲ್ಲದೆ ಬಲಿಪಶುಗಳಾಗಲು ಕಾರಣವಾಗುತ್ತದೆ, ವಿಶೇಷವಾಗಿ ಆನ್‌ಲೈನ್ ಉದ್ಯೋಗ ವಂಚನೆಗಳು ದುರುದ್ದೇಶಪೂರಿತವಾಗಿ ಮೋಸ ಮಾಡುತ್ತವೆ ಎಂದು ಹೇಳಿದರು. 

ಬ್ಯಾಂಕ್‌ಗಳು, ವಿಮಾ ಕಂಪನಿಗಳು ಮತ್ತು ಹೂಡಿಕೆ ಸಂಸ್ಥೆಗಳಂತಹ ವಿಶ್ವಾಸಾರ್ಹ ಘಟಕಗಳನ್ನು ಸೋಗು ಹಾಕುವ ಮೂಲಕ ಸೈಬರ್ ಅಪರಾಧಿಗಳು ವಯಸ್ಸಾದವರನ್ನು ಗುರಿಯಾಗಿಸುತ್ತಾರೆ, ಈ ಘಟಕಗಳೊಂದಿಗೆ ಸಂಬಂಧ ಹೊಂದಿರುವ ಜನರು ನಿಜವಾದವರು ಎಂದು ಭಾವಿಸುವುದರಿಂದ ಸಹಾಯ ಪಡೆಯಲು ಅವರ ಒಲವಿನ ಲಾಭವನ್ನು ಪಡೆದುಕೊಳ್ಳುತ್ತಾರೆ, ಹಿರಿಯ ನಾಗರಿಕರು ಸುಲಭವಾಗಿ ಊಹಿಸಬಹುದಾದ ಪಾಸ್‌ವರ್ಡ್‌ಗಳನ್ನು ಬಳಸುತ್ತಾರೆ ಎಂದು ಹೇಗೆ ವಂಚನೆಗೊಳಗಾಗುತ್ತಾರೆ ಎಂಬುದನ್ನು ವಿವರಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com