ಉಡುಪಿಯಲ್ಲಿ ನಾಲ್ವರ ಹತ್ಯೆ ಪ್ರಕರಣ: ಸ್ನೇಹ, ಪ್ರೀತಿ, ಹಣದ ವಿಚಾರ ಕೊಲೆಗೆ ಕಾರಣ!

ಉಡುಪಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣವನ್ನು ಕರ್ನಾಟಕ ಪೊಲೀಸರು ಭೇದಿಸಿದ್ದು, ಮಹಾರಾಷ್ಟ್ರದ ಸಾಂಗ್ಲಿ ನಿವಾಸಿ 37 ವರ್ಷದ ಪ್ರವೀಣ್ ಅರುಣ್ ಚೌಗಲೆ ಎಂಬಾತನನ್ನು ಬಂಧಿಸಿದ್ದರು.
ಹತ್ಯೆಗೀಡಾದ ಒಂದೇ ಕುಟುಂಬದ ಸದಸ್ಯರು-ಉಡುಪಿ ಎಸ್‌ಪಿ ಕೆ ಅರುಣ್
ಹತ್ಯೆಗೀಡಾದ ಒಂದೇ ಕುಟುಂಬದ ಸದಸ್ಯರು-ಉಡುಪಿ ಎಸ್‌ಪಿ ಕೆ ಅರುಣ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣವನ್ನು ಕರ್ನಾಟಕ ಪೊಲೀಸರು ಭೇದಿಸಿದ್ದು, ಮಹಾರಾಷ್ಟ್ರದ ಸಾಂಗ್ಲಿ ನಿವಾಸಿ 37 ವರ್ಷದ ಪ್ರವೀಣ್ ಅರುಣ್ ಚೌಗಲೆ ಎಂಬಾತನನ್ನು ಬಂಧಿಸಿದ್ದರು.

ಮೃತ ಯುವತಿ 23 ವರ್ಷದ ಅಫ್ನಾನ್ ಜೊತೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರವೀಣ್ ಅರುಣ್ ಚೌಗಲೆ ಕೆಲಸ ಮಾಡುತ್ತಿದ್ದು ಆಕೆಯನ್ನು ಆತ ಪ್ರೀತಿಸುತ್ತಿದ್ದನು. ಇನ್ನು ಅಫ್ನಾನ್ ಮತ್ತು ಆಕೆಯ ತಾಯಿ ಹಸೀನಾ (46), ಐನಾಜ್ (21) ಮತ್ತು ಅಸೀಮ್ (12) ಅವರನ್ನು ಅವರ ಮನೆಯಲ್ಲೇ ಕೊಂದಿರುವುದಾಗಿ ಪ್ರವೀಣ್ ಚೌಗಲೆ ಒಪ್ಪಿಕೊಂಡಿದ್ದಾನೆ. ನವೆಂಬರ್ 12ರಂದು ಆಘಾತಕಾರಿ ಘಟನೆ ನಡೆದಿದ್ದು ಹಸೀನಾ ಅವರ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ.

ಪ್ರವೀಣ್ ಅರುಣ್ ಚೌಗಲೆ ನಾಲ್ಕು ಕೊಲೆಗಳನ್ನು ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ನೇಹ, ಅಫ್ನಾನ್ ಮೇಲಿನ ಪ್ರೀತಿ ಮತ್ತು ಹಣದ ವಿಷಯಗಳು ಈ ಘೋರ ಅಪರಾಧ ಮಾಡಲು ಕಾರಣ ಎಂದು ಪಾಗಲ್ ಪ್ರೇಮಿ ಪೊಲೀಸರಿಗೆ ತಿಳಿಸಿದ್ದಾನೆ. ಅಫ್ನಾನ್‌ಳನ್ನು ಕೊಲ್ಲುವುದು ಅವನ ಉದ್ದೇಶವಾಗಿತ್ತು. ಇನ್ನು ಆರೋಪಿ ತಪ್ಪಿಸಿಕೊಳ್ಳಲು ಮತ್ತು ಸಾಕ್ಷ್ಯವನ್ನು ನಾಶ ಮಾಡಲು ಇತರ ಮೂರು ಕೊಲೆಗಳನ್ನು ಮಾಡಿದ್ದಾನೆ ಎಂದು ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವೀಣ್ ಅರುಣ್ ಚೌಗಲೆಗೆ ಮದುವೆಯಾಗಿ ಮಕ್ಕಳೂ ಇದ್ದರು.  ಆದರೆ ಆತ ತನ್ನ ಸಹೋದ್ಯೋಗಿ ಅಫ್ನಾನ್ ನನ್ನು ಪ್ರೀತಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇಬ್ಬರಿಗೂ ಹಣದ ವಹಿವಾಟು ಇತ್ತು. ಈ ವಿಷಯ ಅವರ ಕುಟುಂಬಕ್ಕೆ ತಿಳಿಯಿತು. ಹೀಗಾಗಿ ಇಬ್ಬರೂ ಜಗಳವಾಡಿದರು. ಪ್ರವೀಣ್ ಅವರ ಪತ್ನಿ ಅಫ್ನಾನ್ ಮತ್ತು ಅವರ ಕುಟುಂಬದೊಂದಿಗೆ ಜಗಳವಾಡಿದ್ದರು.

ಈ ಘಟನೆಯ ನಂತರ ಅಫ್ನಾನ್ ಪ್ರವೀಣ್ ಜೊತೆಗಿನ ಎಲ್ಲಾ ಸಂವಹನವನ್ನು ನಿಲ್ಲಿಸಿದರು. ಇದನ್ನು ಸಹಿಸದ ಆರೋಪಿ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದನು. ಅಫ್ನಾನ್‌ನನ್ನು ಕೊಲ್ಲುವುದನ್ನು ತಡೆಯಲು ಪ್ರಯತ್ನಿಸಿದಾಗ ಇತರರನ್ನು ಕೊಂದಿರುವುದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರವೀಣ್‌ನನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದು ಕೊಲೆ ಪ್ರಕರಣವನ್ನು ಭೇದಿಸಲು ರಚಿಸಲಾಗಿದ್ದ ಐದು ವಿಶೇಷ ತಂಡಗಳು ಆರೋಪಿ ಆಟೋದಲ್ಲಿ ಸಂತ್ರಸ್ತರ ನಿವಾಸದ ಬಳಿ ಇಳಿದಿರುವ ಬಗ್ಗೆ ಮಾಹಿತಿ ಕಲೆಹಾಕಿದ್ದರು. ನಂತರ, ಬೆಳಗಾವಿ ಜಿಲ್ಲೆಯ ಕುಡಚಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಪ್ರವೀಣ್ ತಲೆಮರೆಸಿಕೊಂಡಿದ್ದನ್ನು ತಂಡಗಳು ಪತ್ತೆ ಹಚ್ಚಿ ನಂತರ ಆತನನ್ನು ಬಂಧಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com