ಆನೆ ಹಿಂಡಿನಿಂದ ಬೇರ್ಪಟ್ಟ ನವಜಾತ ಆನೆ ಮರಿ ಮರಳಿ ತಾಯಿ ಮಡಿಲಿಗೆ..

ಮನುಷ್ಯರ ವಾಸಪ್ರದೇಶದ ಬಳಿ ಜನಿಸಿ, ಹಿಂಡಿನಿಂದ ಬೇರ್ಪಟ್ಟ  ಆನೆ ಮರಿಯನ್ನು ಅರಣ್ಯ ಇಲಾಖೆ ಮರಳಿ ತಾಯಿ ಬಳಿ ಸೇರಿಸಿದೆ.
ಆನೆ ಹಿಂಡಿನಿಂದ ಬೇರ್ಪಟ್ಟ ನವಜಾತ ಆನೆ ಮರಿ
ಆನೆ ಹಿಂಡಿನಿಂದ ಬೇರ್ಪಟ್ಟ ನವಜಾತ ಆನೆ ಮರಿ
Updated on

ಕೊಡಗು: ಮನುಷ್ಯರ ವಾಸಪ್ರದೇಶದ ಬಳಿ ಜನಿಸಿ, ಹಿಂಡಿನಿಂದ ಬೇರ್ಪಟ್ಟ  ಆನೆ ಮರಿಯನ್ನು ಅರಣ್ಯ ಇಲಾಖೆ ಮರಳಿ ತಾಯಿ ಬಳಿ ಸೇರಿಸಿದೆ.

ವಿರಾಜಪೇಟೆ ತಾಲೂಕಿನ ನರಿಯಂದಡ ​​ಗ್ರಾ.ಪಂಚಾಯತ್ ವ್ಯಾಪ್ತಿಯ ಕರಡ ಗ್ರಾಮ ಮಿತಿಯಲ್ಲಿ ಈ ಘಟನೆ ವರದಿಯಾಗಿದೆ.

ಮೂರು ಹೆಣ್ಣಾನೆಗಳ ಜೊತೆಗೆ ಇದ್ದ ಒಂದು ಆನೆ ಮಂಗಳವಾರ ಬೆಳಿಗ್ಗೆ ಹೆಣ್ಣು ಆನೆ ಮರಿಯೊಂದಕ್ಕೆ ಜನ್ಮ ನೀಡಿತ್ತು. ಕರಡ ಗ್ರಾಮದ ಖಾಸಗಿ ಎಸ್ಟೇಟ್ ಒಂದರ ಬಳಿ ಆನೆಗಳ ಹಿಂಡು ಬಂದಿತ್ತು ಈ ಹಿಂಡಿನಲ್ಲಿದ್ದ ಗರ್ಭಿಣಿ ಆನೆ, ಮರಿಗೆ ಜನ್ಮ ನೀಡಿತ್ತು. ಆದರೆ ಮರಿಯಾನೆ ಮನುಷ್ಯ ವಾಸ ಪ್ರದೇಶದ ಬಳಿ ಬಂದು ಹಿಂಡಿನಿಂದ ಬೇರ್ಪಟ್ಟು ಮಂಜು ಎಂಬುವವರ ಮನೆಯ ಆವರಣ ಸೇರಿತ್ತು. ಈ ಬೆನ್ನಲ್ಲೇ, ಮರಿಯಾನೆಯನ್ನು ನೋಡಲು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಆರಂಭಿಸಿದರು.

ಮಾಹಿತಿ ತಿಳಿಯುತ್ತಿದ್ದಂತೆಯೇ, ವಿರಾಜಪೇಟೆಯ ಅರಣ್ಯ ಇಲಾಖೆಯ ವಿಭಾಗ ಹಾಗೂ ಆನೆ ಕಾರ್ಯಪಡೆಯ ಅಧಿಕಾರಿಗಳು, ಕಾರ್ಯಪ್ರವೃತ್ತರಾದರು ಎಂದು ಆರ್ ಎಫ್ಒ ಕಲ್ಲಿರ ದೇವಯ್ಯ ಹೇಳಿದ್ದಾರೆ.

ಅರಣ್ಯಾಧಿಕಾರಿಗಳು ನವಜಾತ ಆನೆ ಮರಿಗೆ ಪ್ರಥಮ ಚಿಕಿತ್ಸೆ ನೀಡಿ ಅದಕ್ಕೆ ಗ್ಲೂಕೋಸ್ ಮತ್ತು ಇತರ ಪೂರಕಗಳನ್ನು ನೀಡಿದರು. ತಂಡವು ನಂತರ ಆನೆ ಹಿಂಡನ್ನು ಪತ್ತೆ ಹಚ್ಚಿತು ಮತ್ತು ಹಿಂಡು ಘಟನೆಯ ಸ್ಥಳದಿಂದ ಸುಮಾರು ಏಳು ಕಿಲೋಮೀಟರ್ ದೂರದಲ್ಲಿರುವ ಮಾಕುಟ್ಟಾ ಅರಣ್ಯ ವ್ಯಾಪ್ತಿಯಲ್ಲಿ ಕಂಡುಬಂದಿದೆ. ಅರಣ್ಯಾಧಿಕಾರಿಗಳು ಆನೆ ಮರಿಯನ್ನು ನಿಧಾನವಾಗಿ ನಡೆಸಿ ಯಶಸ್ವಿಯಾಗಿ ತಾಯಿ ಮತ್ತು ಹಿಂಡಿನೊಂದಿಗೆ ಮತ್ತೆ ಸೇರಿಸಿದರು. "ಪಿಸಿಸಿಎಫ್ ಮನೋಜ್ ತ್ರಿಪಾಟಿ, ಡಿಸಿಎಫ್ ಶರಣಬಸಪ್ಪ ಮತ್ತು ಎಸಿಎಫ್ ನೆಹರು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಗ್ರಾಮದಲ್ಲಿ ಆನೆಗಳ ಓಡಾಟ ಹೆಚ್ಚಾಗಿದ್ದು, ಇಂತಹ ಘಟನೆಗಳನ್ನು ನಿಯಂತ್ರಿಸಲು ಕಾಡಿನ ಪ್ರದೇಶಗಳ ಮಾರ್ಗವನ್ನು ಜನವಸತಿ ಪ್ರದೇಶಗಳಿಗೆ ಮುಚ್ಚುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com