ಉಡುಪಿಯಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ: ಏರ್ ಇಂಡಿಯಾ ವಿರುದ್ಧ ಸಂತ್ರಸ್ತೆಯ ತಂದೆ ಆಕ್ರೋಶ

ಉಡುಪಿಯ ನೇಜಾರ್ ಬಳಿಯ ತ್ರಿಪಾಠಿ ನಗರದಲ್ಲಿ ಇತ್ತೀಚೆಗೆ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ ಸಂಬಂಧ ಸಂತ್ರಸ್ಥೆಯ ತಂದೆ ಮೊಹಮ್ಮದ್ ನೂರ್ ಅವರು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಟುಂಬದ ಜತೆ ಮೊಹಮ್ಮದ್ ನೂರ್
ಕುಟುಂಬದ ಜತೆ ಮೊಹಮ್ಮದ್ ನೂರ್

ಉಡುಪಿ: ಉಡುಪಿಯ ನೇಜಾರ್ ಬಳಿಯ ತ್ರಿಪಾಠಿ ನಗರದಲ್ಲಿ ಇತ್ತೀಚೆಗೆ ನಡೆದ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ ಸಂಬಂಧ ಸಂತ್ರಸ್ಥೆಯ ತಂದೆ ಮೊಹಮ್ಮದ್ ನೂರ್ ಅವರು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಸೀನಾ(48) ಮತ್ತು ಆಕೆಯ ಮಕ್ಕಳಾದ ಅಫ್ಸಾನ್(23), ಅಸೀಮ್ (12) ಮತ್ತು ಅಯ್ನಾಜ್ (21) ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಉದ್ಯೋಗಿ ಪ್ರವೀಣ್ ಅರುಣ್ ಚೌಗುಲೆಯನ್ನು ಪೊಲೀಸರು ಬಂಧಿಸಿದ್ದಾರೆ.

ಹತ್ಯೆಯಾದ ಅಯ್ನಾಜ್ ಸಹ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಗಗನಸಖಿಯಾಗಿದ್ದರು.

ಟಿವಿ ಚಾನೆಲ್‌ನೊಂದಿಗಿನ ಸಂವಾದದಲ್ಲಿ, ಅಯ್ನಾಜ್ ತಂದೆ ಮೊಹಮ್ಮದ್ ನೂರ್, ಬರ್ಬರ ಹತ್ಯೆಯ ನಂತರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಆಡಳಿತ, ತಮ್ಮ ಕುಟುಂಬವನ್ನು ನಡೆಸಿಕೊಂಡ ರೀತಿಯಿಂದ ತಮಗೆ ತುಂಬಾ ನೋವಾಗಿದೆ ಎಂದು ಹೇಳಿದ್ದಾರೆ.

'ಅವರು ನಮಗೆ ಕರೆ ಮಾಡಿಲ್ಲ ಅಥವಾ ಘಟನೆಯ ಬಗ್ಗೆ ತಮ್ಮ ದುಃಖವನ್ನು ಸಹ ವ್ಯಕ್ತಪಡಿಸಿಲ್ಲ. ಅವರು ಯಾವ ರೀತಿಯ ಉದ್ಯೋಗಿಯನ್ನು(ಪ್ರವೀಣ್ ಅರುಣ್ ಚೌಗುಲೆ) ನೇಮಕ ಮಾಡಿಕೊಳ್ಳುತ್ತಾರೆ? ಪ್ರವೀಣ್ ಚೌಗುಲೆ ಅವರನ್ನು ನೇಮಕ ಮಾಡಿಕೊಳ್ಳುವ ಮುನ್ನ ಅವರ ಹಿನ್ನೆಲೆ ಪರಿಶೀಲಿಸಿದ್ದೀರಾ? ಅವರು ಕಂಪನಿಯ ಹಿರಿಯ ಸಿಬ್ಬಂದಿಯಾಗಿರುವುದರಿಂದ ಪ್ರಯಾಣಿಕರಿಗೆ ವಿಮಾನದಲ್ಲಿ ಯಾವ ಸುರಕ್ಷತೆ ಇರುತ್ತಿತ್ತು'' ಎಂದು ಮೊಹಮ್ಮದ್ ನೂರ್ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com