ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಆನ್‌ಲೈನ್‌ನಲ್ಲಿ ಯುಜಿ, ಪಿಜಿ ಕೋರ್ಸ್‌ ಆರಂಭ

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿವಿಧ ವಿಷಯಗಳಲ್ಲಿ ಆನ್‌ಲೈನ್ ಕೋರ್ಸ್‌ಗಳನ್ನು ನೀಡಲಿದೆ. ಈ ಮೂಲಕ ಕೋರ್ಸ್ ಗಳನ್ನು ಆನ್ ಲೈನ್ ನಲ್ಲಿ ನೀಡುವ ದೇಶದ ಮೊದಲ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ.
ಕಲಬುರಗಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಟಿಯು ಪ್ರಾದೇಶಿಕ ಕೇಂದ್ರದ ಪ್ರಾಧ್ಯಾಪಕ ಬಸವರಾಜ ಗದುಗೆ
ಕಲಬುರಗಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಟಿಯು ಪ್ರಾದೇಶಿಕ ಕೇಂದ್ರದ ಪ್ರಾಧ್ಯಾಪಕ ಬಸವರಾಜ ಗದುಗೆ

ಕಲಬುರಗಿ: ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿವಿಧ ವಿಷಯಗಳಲ್ಲಿ ಆನ್‌ಲೈನ್ ಕೋರ್ಸ್‌ಗಳನ್ನು ನೀಡಲಿದೆ. ಈ ಮೂಲಕ ಕೋರ್ಸ್ ಗಳನ್ನು ಆನ್ ಲೈನ್ ನಲ್ಲಿ ನೀಡುವ ದೇಶದ ಮೊದಲ ತಾಂತ್ರಿಕ ವಿಶ್ವವಿದ್ಯಾಲಯವಾಗಿದೆ.

ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಬಸವರಾಜ ಗದುಗೆ ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆನ್‌ಲೈನ್ ಕಾರ್ಯಕ್ರಮಗಳನ್ನು ನಡೆಸಲು ಯುಜಿಸಿಯಿಂದ ಅನುಮತಿ ಪಡೆದಿರುವ ಏಕೈಕ ತಾಂತ್ರಿಕ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯವಾಗಿದೆ. 

ಆನ್‌ಲೈನ್ ಪಠ್ಯಕ್ರಮವು ಉದ್ಯಮ ಆಧಾರಿತವಾಗಿರುತ್ತದೆ. ಈ ಕೋರ್ಸ್‌ಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಶೀಘ್ರವಾಗಿ ಕೈಗಾರಿಕೋದ್ಯಮಗಳಲ್ಲಿ ಉದ್ಯೋಗವನ್ನು ಪಡೆಯುತ್ತಾರೆ. ಏಕೆಂದರೆ VTU ಹಲವಾರು ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿದೆ ಎಂದು ಗದುಗೆ ಹೇಳಿದರು.

ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಆನ್‌ಲೈನ್ ಕೋರ್ಸ್ ಗಳ ನಿರ್ದೇಶಕಿ ಪ್ರೊ. ಸಂಧ್ಯಾ ಜೋಶಿ, ಈಗಾಗಲೇ ಪ್ರವೇಶ ಪ್ರಕ್ರಿಯೆಯು ಪ್ರಾರಂಭವಾಗಿದೆ. ಆಸಕ್ತ ಅಭ್ಯರ್ಥಿಗಳು ವಿಟಿಯ ಅಧಿಕೃತ ವೆಬ್‌ಸೈಟ್ www.onlinedegree.vtu.ac.in ಗೆ ಭೇಟಿ ನೀಡಬಹುದು. ಪ್ರವೇಶ ಪ್ರಕ್ರಿಯೆಯನ್ನು ವರ್ಷವಿಡೀ ನಡೆಸಲಾಗುವುದು. VTU ತಮ್ಮ ಕೋರ್ಸ್ ಮುಗಿದ ನಂತರ ಯಶಸ್ವಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ ಎಂದು ತಿಳಿಸಿದರು. 

ಏನಿದರ ಪ್ರಯೋಜನ?: ಸಾಮಾನ್ಯ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಒದಗಿಸಲು ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯ ಆನ್‌ಲೈನ್ ಕಾರ್ಯಕ್ರಮಗಳನ್ನು ಪ್ರಾರಂಭಿಸಿದೆ. ಸ್ಟೇಟ್ ಎಕ್ಸಾಮ್ ಬ್ರೌಸರ್ ಆ್ಯಪ್ ಬಳಸಿ ಪರೀಕ್ಷೆಗಳನ್ನು ನಡೆಸಲಾಗುತ್ತಿದ್ದು, ಇದು ಯಾವುದೇ ಅವ್ಯವಹಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರೊ.ಸಂಧ್ಯಾ ಜೋಶಿ ತಿಳಿಸಿದರು. ಶುಲ್ಕದ ವಿಚಾರ ಬಂದಾಗ ಇತರ ವಿಶ್ವವಿದ್ಯಾಲಯಗಳಿಗಿಂತ ತುಲನಾತ್ಮಕವಾಗಿ ಕಡಿಮೆ ಇರುತ್ತದೆ ಎಂದು ಅವರು ಹೇಳಿದರು.

ಈ ಬಗ್ಗೆ  ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಮಾತನಾಡಿದ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರೊಬ್ಬರು, ವಿದ್ಯಾರ್ಥಿಗಳು ಆನ್‌ಲೈನ್ ವಿಧಾನ ಮೂಲಕ ಕಲಿಸುವ ಪಾಠಗಳ ಮೇಲೆ ಕೇಂದ್ರೀಕರಿಸಲು ಕಷ್ಟವಾಗುತ್ತದೆ ಎಂದು ಹೇಳಿದರು. ಆದ್ದರಿಂದ ಬಡ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆಯುವಂತಿಲ್ಲ ಎಂದರು. 

ಆನ್‌ಲೈನ್ ಪಠ್ಯಕ್ರಮ: ಆನ್‌ಲೈನ್ ವಿಧಾನ ಮೂಲಕ ನೀಡಲಾಗುವ ಪದವಿ ಕೋರ್ಸ್ ಗಳಲ್ಲಿ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಬಿಬಿಎ, ಡೇಟಾ ಅನಾಲಿಟಿಕ್ಸ್‌ನಲ್ಲಿ ಬಿಸಿಎ ಮತ್ತು ಡೇಟಾ ಸೈನ್ಸಸ್‌ನಲ್ಲಿ ಬಿಸಿಎ ಒಳಗೊಂಡಿದೆ. ಈ ಕೋರ್ಸ್ 3 ವರ್ಷಗಳ ಅವಧಿಯದ್ದಾಗಿದ್ದು, ಯಾವುದೇ ವಿಭಾಗದಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು.

ಯಾವ್ಯಾವ ಕೋರ್ಸ್ ಗಳು: ಆನ್ ಲೈನ್ ವಿಧಾನದಲ್ಲಿ ಅಧ್ಯಯನ ಮಾಡಬಹುದಾದ ಸ್ನಾತಕೋತ್ತರ ಕೋರ್ಸ್ ಗಳು ಬ್ಯುಸಿನೆಸ್ ಅನಾಲಿಟಿಕ್ಸ್‌ನಲ್ಲಿ MBA, (HRM/ FM/MM) ನಲ್ಲಿ MCA, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡೇಟಾ ಸೈನ್ಸ್‌ನಲ್ಲಿ ಎಂಸಿಎ ಮತ್ತು ಸೈಬರ್ ಸೆಕ್ಯುರಿಟಿ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ MCA. ಯಾವುದೇ ಪದವೀಧರರು ಈ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಬಹುದು.

ಆದಾಗ್ಯೂ, ಎಂಸಿಎ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಪದವಿಯಲ್ಲಿ ಗಣಿತವನ್ನು ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು. ಕೋರ್ಸ್ ಅವಧಿಯು 2 ವರ್ಷಗಳು.

ಸ್ನಾತಕೋತ್ತರ ಡಿಪ್ಲೊಮಾ ಆನ್‌ಲೈನ್ ಪ್ರೋಗ್ರಾಮ್‌ಗಳು ಸೈಬರ್ ಸೆಕ್ಯುರಿಟಿ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ PCD, ಬಿಗ್ ಡೇಟಾ ಅನಾಲಿಟಿಕ್ಸ್‌ನಲ್ಲಿ ಪಿಜಿಡಿ, ಸಾಫ್ಟ್‌ವೇರ್ ಪರೀಕ್ಷೆಯಲ್ಲಿ ಪಿಜಿಡಿ, ಹಣಕಾಸು ವಿಶ್ಲೇಷಣೆ/ಮಾರ್ಕೆಟಿಂಗ್ ಅನಾಲಿಟಿಕ್ಸ್/ಹೆಚ್ ಆರ್ ಅನಾಲಿಟಿಕ್ಸ್/ಹೆಚ್ ಆರ್ ಅನಾಲಿಟಿಕ್ಸ್ ಮತ್ತು ಪಿಜಿಡಿ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್/ರಿನಾನ್ ಮ್ಯಾನೇಜ್‌ಮೆಂಟ್/ರಿಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿಡಿ ಒಳಗೊಂಡಿವೆ. ಈ ಕೋರ್ಸ್ ಗಳಿಗೆ ಯಾವುದೇ ವಿಭಾಗದಲ್ಲಿ ಪದವಿ ಮತ್ತು ಕೋರ್ಸ್‌ನ ಅವಧಿಯು ತಲಾ 2 ವರ್ಷಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com