ಕೃಷಿ ವಿಜ್ಞಾನ ವಿ.ವಿ.ಯಿಂದ ಹೊಸ ತಳಿ ಸೂರ್ಯಕಾಂತಿ ಹೂ: ರೈತರು-ಮಾರಾಟಗಾರರು-ಬಳಕೆದಾರರಿಗೆ ಪೂರಕ ಬೆಳೆ

ಮೂಲ ಸೂರ್ಯಕಾಂತಿ ಹೂವು ಬೇರೆ ಯಾವುದೇ ಹೂಗಳಿಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದಾಗಿದ್ದರೂ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು (UAS) ಅಡ್ಡ-ಪರಾಗಸ್ಪರ್ಶ ಮತ್ತು ಬಹು ಪ್ರಯೋಗಗಳ ಮೂಲಕ 'ಡ್ವಾರ್ಫ್ ಆರ್ನಮೆಂಟಲ್ ಸನ್ ಫ್ಲವರ್ಸ್' ಎಂಬ ಹೊಸ ವಿಧದ ಸೂರ್ಯಕಾಂತಿಯನ್ನು ರಚಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಮೂಲ ಸೂರ್ಯಕಾಂತಿ ಹೂವು ಬೇರೆ ಯಾವುದೇ ಹೂಗಳಿಗೆ ಹೋಲಿಸಿದರೆ ಗಾತ್ರದಲ್ಲಿ ದೊಡ್ಡದಾಗಿದ್ದರೂ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು (UAS) ಅಡ್ಡ-ಪರಾಗಸ್ಪರ್ಶ ಮತ್ತು ಬಹು ಪ್ರಯೋಗಗಳ ಮೂಲಕ 'ಡ್ವಾರ್ಫ್ ಆರ್ನಮೆಂಟಲ್ ಸನ್ ಫ್ಲವರ್ಸ್' ಎಂಬ ಹೊಸ ವಿಧದ ಸೂರ್ಯಕಾಂತಿಯನ್ನು ರಚಿಸಿದೆ.

ಹೆಸರೇ ಸೂಚಿಸುವಂತೆ, ಈ ವಿಧವನ್ನು ವಿವಿಧ ಕಾರ್ಯಕ್ರಮಗಳು, ಸಮಾರಂಭಗಳು ಮತ್ತು ಮದುವೆಗಳಲ್ಲಿ ಅಲಂಕಾರಗಳಿಗೆ, ಪಟ್ಟಾಭಿಷೇಕ ಕಾರ್ಯಕ್ರಮಗಳಿಗೆ ಮತ್ತು ಹೂಗುಚ್ಛಗಳಿಗೆ ಬಳಸಬಹುದು.

ಈ ಸೂರ್ಯಕಾಂತಿಗಳು 7-10 ದಿನಗಳ ಕಾಲ ಕೊಯ್ದ ನಂತರವೂ ಉಳಿಯುತ್ತದೆ. ಇದು ಸಣ್ಣ ಹೂವುಗಳಿಗೆ ಹೋಲಿಸಿದರೆ ಹೆಚ್ಚು ಉಪಯೋದ ಸ್ನೇಹಿಯಾಗಿದ್ದು 45-55 ದಿನಗಳಲ್ಲಿ ಇಳುವರಿ ಕೊಡುತ್ತದೆ. ಅಲಂಕಾರಿಕ ಸೂರ್ಯಕಾಂತಿಗಳನ್ನು ಬಳಸುವುದರಿಂದ ಹೂವುಗಳಿಂದ ತ್ಯಾಜ್ಯವನ್ನು ಕಡಿಮೆ ಮಾಡಬಹುದು, ಅಲಂಕಾರ ಕೆಲಸ ಮಾಡುವವರಿಗೂ ಇದು ಅನುಕೂಲವಾಗಿದೆ. 

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಸಂಶೋಧನೆಯ ಸಹಾಯಕ ನಿರ್ದೇಶಕಿ ಡಾ ಎಂ ಎಸ್ ಉಮಾ, “ಪ್ರಸ್ತುತ, ಕೆಲವು ಸೂರ್ವಕಾಂತಿ ಬೆಳೆಯ ಉಪ-ವರ್ಗಗಳು ವೀಕ್ಷಣೆಯಲ್ಲಿವೆ. ನಾವು ಸ್ಥಿರೀಕರಣವನ್ನು ಪ್ರಯತ್ನಿಸುತ್ತಿದ್ದೇವೆ ಇದರಿಂದ ಅವು ಉತ್ತಮ ಇಳುವರಿಯನ್ನು ನೀಡುತ್ತವೆ. ಅವುಗಳಲ್ಲಿ ಕೆಲವು ನಾವು ಕೆಲಸ ಮಾಡುತ್ತಿರುವ ನೇರಳೆ ಬಣ್ಣಗಳಂತಹ ವಿವಿಧ ಬಣ್ಣಗಳನ್ನು ಪ್ರತ್ಯೇಕಿಸಿ ಪರೀಕ್ಷೆ ಮಾಡುತ್ತಿದ್ದೇವೆ ಎಂದರು. 

ಈ ಹೂವುಗಳು ಸುಲಭವಾಗಿ ಹಾಳಾಗುವ ಮತ್ತು ಗಾತ್ರದಲ್ಲಿ ಚಿಕ್ಕದಾಗಿರುವ ಹೂವುಗಳಿಗೆ ಉತ್ತಮ ಬದಲಿಯಾಗಬಲ್ಲವು ಮತ್ತು ಅವುಗಳನ್ನು ಬೆಳೆಸುವ ಮೂಲಕ ರೈತರು ಉತ್ತಮ ಗಳಿಕೆ ಪಡೆಯಬಹುದು ಎನ್ನುತ್ತಾರೆ. ಆರು ಕೆಜಿ ಬೀಜಗಳು 1 ಹೆಕ್ಟೇರ್ ಭೂಮಿಯಲ್ಲಿ ಕಡಿಮೆ ಅವಧಿಯಲ್ಲಿ 1,10,000 ಸೂರ್ಯಕಾಂತಿಗಳನ್ನು ನೀಡುತ್ತವೆ. ಅವುಗಳನ್ನು ಬೆಳೆಯಲು ಮಣ್ಣಿನ ಫಲವತ್ತತೆ ಸಹ ಹೊಂದಿಕೊಳ್ಳುತ್ತದೆ -- ಕೆಂಪು ಅಥವಾ ಮಿಶ್ರಿತ ಮಣ್ಣನ್ನು ಬಳಸಬಹುದು ನಿರ್ವಹಣೆ ವೆಚ್ಚ ಕಡಿಮೆಯಾಗಿರುತ್ತದೆ. ಈ ಹೂವುಗಳು ನಗರ ಪ್ರದೇಶಗಳಲ್ಲಿ 10-15 ರೂಪಾಯಿಗಳಿರುತ್ತವೆ.

ಸೂರ್ಯಕಾಂತಿಗಳನ್ನು ಗರಿಷ್ಠ ಬೇಸಿಗೆಯನ್ನು ಹೊರತುಪಡಿಸಿ ಎಲ್ಲಾ ಋತುಗಳಲ್ಲಿ ಬೆಳೆಯಬಹುದು ಎಂದು ಡಾ ಉಮಾ ಹೇಳುತ್ತಾರೆ. ಈ ಹೊಸ ತಳಿಯನ್ನು ಈ ಬಾರಿಯ ಕೃಷಿ ಮೇಳ-2023ರಲ್ಲಿ ಪ್ರದರ್ಶಿಸಲಾಗಿದೆ. ವಿಜ್ಞಾನಿಗಳು ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ಈ ಸೂರ್ಯಕಾಂತಿಗಳನ್ನು ಬೆಳೆಯಲು ರೈತರ ಮನವೊಲಿಸಲು ನೋಡುತ್ತಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com