ಬಾಕಿ ವೇತನ ಪಾವತಿಗೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆಗ್ರಹ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ಕೆಎಸ್ ಆರ್ ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಬಾಕಿ ಉಳಿದಿರುವ ವೇತನವನ್ನು ಪಾವತಿಸುವಂತೆ ಒತ್ತಾಯಿಸಿದೆ. ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು  ಡಿಸೆಂಬರ್ 6 ರಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲು ಈ ಸಮಿತಿ ನಿರ್ಧರಿಸಿದೆ. 
ಕೆಎಸ್ ಆರ್ ಟಿಸಿ ಸಾಂದರ್ಭಿಕ ಚಿತ್ರ
ಕೆಎಸ್ ಆರ್ ಟಿಸಿ ಸಾಂದರ್ಭಿಕ ಚಿತ್ರ

ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ಕೆಎಸ್ ಆರ್ ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಬಾಕಿ ಉಳಿದಿರುವ ವೇತನವನ್ನು ಪಾವತಿಸುವಂತೆ ಒತ್ತಾಯಿಸಿದೆ. ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು  ಡಿಸೆಂಬರ್ 6 ರಂದು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದಲ್ಲಿ ಪ್ರತಿಭಟನೆ ನಡೆಸಲು ಈ ಸಮಿತಿ ನಿರ್ಧರಿಸಿದೆ. 

ಈ ಕುರಿತು ಮಾತನಾಡಿದ  ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಶನ್ ಅಧ್ಯಕ್ಷ ಅನಂತ ಸುಬ್ಬ ರಾವ್, ಹಿಂದಿನ ಬಿಜೆಪಿ ಸರ್ಕಾರ 2020 ರ ಜನವರಿಯಿಂದ ಜಾರಿಗೆ ಬರುವಂತೆ ಶೇಕಡಾ 15 ರಷ್ಟು ವೇತನ ಹೆಚ್ಚಳಕ್ಕೆ ಆದೇಶ ನೀಡಿತ್ತು. ಆದರೆ, 38 ತಿಂಗಳವರೆಗೆ ಹೆಚ್ಚಿಸಲಾಗಿರುವ ಬಾಕಿಯನ್ನು ಇನ್ನೂ ಪಾವತಿ ಮಾಡಿಲ್ಲ. ಈ ಮಧ್ಯೆ ಈ ಅವಧಿಯಲ್ಲಿ ಅನೇಕ ಉದ್ಯೋಗಿಗಳು ನಿವೃತ್ತರಾಗಿದ್ದಾರೆ, ಕೆಲವರು ನಿವೃತ್ತಿ ತೆಗೆದುಕೊಂಡಿದ್ದರೆ, ಕೆಲವರು ನಿಧನರಾಗಿದ್ದಾರೆ. ಈ ನೌಕರರ ವೇತನ ಪರಿಷ್ಕರಣೆ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದರು. 

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ ಯಶಸ್ಸಿಗೆ, ಫೆಡರೇಶನ್‌ನಿಂದ ಸಂಪೂರ್ಣ ಬೆಂಬಲ ನೀಡಿದ್ದೇವೆ. ಆದಾಗ್ಯೂ, ಎಲ್ಲಾ ನಾಲ್ಕು ಬಸ್ ನಿಗಮಗಳಆರ್ಥಿಕ ಸ್ಥಿತಿಯು ಹಲವು ಕಾರಣಗಳಿಂದ ಹದಗೆಟ್ಟಿದೆ.ಅವರ ಬಾಕಿ ಇರುವ ವೇತನವನ್ನು ವಾಪತಿಸುವುದಲ್ಲದೇ ಶಕ್ತಿ ಯೋಜನೆಯಡಿ ಶೂನ್ಯ ಟಿಕೆಟ್ ವೆಚ್ಚವನ್ನು ತಕ್ಷಣವೇ ಬಸ್ ನಿಗಮಗಳಿಗೆ ವಿತರಿಸಬೇಕು ಮತ್ತು ನೌಕರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಬಸ್ ನಿಗಮಗಳು ನೌಕರರ ಸಂಘಗಳೊಂದಿಗೆ ಸಭೆಗಳನ್ನು ನಡೆಸಬೇಕು ಎಂದು ಒಕ್ಕೂಟ ಒತ್ತಾಯಿಸಿದೆ. ಈ ಸಂಬಂಧ ನವೆಂಬರ್ 17 ರಂದು ಸಚಿವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com