ಬೆಂಗಳೂರು: ಬ್ಯಾಟರಾಯನಪುರ ಪೊಲೀಸ್ ಇನ್ಸ್ ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ಕಾಯ್ದೆಯಡಿ ದೂರು ದಾಖಲಿಸಿದ ಎಸಿಪಿ!

ಬ್ಯಾಟರಾಯನಪುರ ಠಾಣೆಯ  ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಬ್ಯಾಟರಾಯನಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.
ಬ್ಯಾಟರಾಯನಪುರ ಪೊಲೀಸ್ ಠಾಣೆ
ಬ್ಯಾಟರಾಯನಪುರ ಪೊಲೀಸ್ ಠಾಣೆ

ಬೆಂಗಳೂರು: ಬ್ಯಾಟರಾಯನಪುರ ಠಾಣೆಯ  ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಬ್ಯಾಟರಾಯನಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರು (ಎಸಿಪಿ) ಭ್ರಷ್ಟಾಚಾರ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ಹೊಸಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣದ ತನಿಖೆಗಾಗಿ ಎಸಿಪಿ ಭರತ್ ಎಸ್ ರೆಡ್ಡಿ ಅವರು ಬುಧವಾರ ಬ್ಯಾಟರಾಯನಪುರ ಪೊಲೀಸರಿಗೆ ನೀಡಿದ ದೂರಿನಲ್ಲಿ ಇನ್ಸ್‌ಪೆಕ್ಟರ್ ಶಂಕರ್ ನಾಯ್ಕ್ ಜಿಕೆ ಮತ್ತು ಅವರ ಸಹಚರ ಲೋಕನಾಥ್ ಸಿಂಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಾಯಕ್ ಅವರು ಉದ್ಯಮಿಯ ಚಾಲಕನಿಂದ ಕದ್ದ 75 ಲಕ್ಷ ರೂಪಾಯಿ ಹಣವನ್ನು ವಸೂಲಿ ಮಾಡುವ ಏಕೈಕ ಉದ್ದೇಶದಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಉದ್ಯಮಿ ಹರೀಶ್ ಅವರ ಕಾರು ಚಾಲಕ ಸಂತೋಷ್ 2022 ರಲ್ಲಿ ಹೊಸಕೋಟೆಯಲ್ಲಿ 72 ಲಕ್ಷ ರೂ.ಗಳನ್ನು ಕದ್ದಿದ್ದರು. ಲೋಕನಾಥ್ ಸಿಂಗ್ ಅವರು ಬ್ಯಾಟರಾಯನಪುರ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ನಾಯಕ್ ಅವರ ಗಮನಕ್ಕೆ ತಂದಿದ್ದರು. ನಾಯಕ್ ಅವರು ಸಂತೋಷ್‌ನಿಂದ 72 ಲಕ್ಷ ರೂ.ಗಳನ್ನು ವಸೂಲಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಅದನ್ನು ಪೊಲೀಸ್ ಠಾಣೆಯಲ್ಲಿ ಇಟ್ಟುಕೊಳ್ಳದೆ ಅಥವಾ ಸರ್ಕಾರದ ಖಜಾನೆಗೆ ಠೇವಣಿ ಇಡದೆ ವೈಯಕ್ತಿಕ ಬಳಕೆಗೆ  ಉಪಯೋಗಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಕರಣಕ್ಕೆ ತಾನೇ ಕಂಪ್ಲೆಂಟ್ ಕಾಪಿಯನ್ನು ರೆಡಿ ಮಾಡಿ, ಜಾನ್ ಎಂಬಾತನಿಂದ ನಕಲಿ‌ ಸಹಿ ಹಾಕಿಸಿ ಎಫ್‌ಐಆರ್‌ ದಾಖಲಿಸಿದ್ದ. ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದ ಶಂಕರ್‌ ನಾಯ್ಕ್‌ 75 ಲಕ್ಷ ರೂ. ಹಣವನ್ನು ರಿಕವರಿ‌ ಮಾಡಿದರು.

ಎಸಿಪಿ ಸಲ್ಲಿಸಿದ ದೂರಿನ ಪ್ರಕಾರ, ಜನವರಿ 27, 2023 ರಂದು ಬ್ಯಾಟರಾಯನಪುರ ಠಾಣೆಯಿಂದ ನಾಯಕ್ ವರ್ಗಾವಣೆಗೊಂಡ ನಂತರ, ಅವರು ವಶಪಡಿಸಿಕೊಂಡ ಹಣವನ್ನು ಹೊಸದಾಗಿ ನಿಯೋಜಿಸಲಾದ ಇನ್‌ಸ್ಪೆಕ್ಟರ್‌ಗೆ ಹಸ್ತಾಂತರಿಸಲು ವಿಫಲರಾಗಿದ್ದಾರೆ ಎಂದು ವರದಿಯಾಗಿದೆ.

ನಾಯ್ಕ್‌ಗೆ ಹಣವನ್ನು ಹೊಸ ಇನ್ಸ್‌ಪೆಕ್ಟರ್‌ಗೆ ಹಸ್ತಾಂತರಿಸುವಂತೆ ಅಥವಾ ರಾಜ್ಯದ ಖಜಾನೆಗೆ ಜಮಾ ಮಾಡುವಂತೆ ಪದೇ ಪದೇ ನೋಟಿಸ್‌ಗಳನ್ನು ನೀಡಲಾಯಿತು. ನಾಯ್ಕ್ ಅವರು ವಶಪಡಿಸಿಕೊಂಡ ಹಣದ ಬದಲು ಬೇರೆ ಬೇರೆ ಮುಖಬೆಲೆಯ 72 ಲಕ್ಷ ರೂಪಾಯಿಗಳನ್ನು ಫೆಬ್ರವರಿ 26 ರಂದು ಠಾಣೆಗೆ ತಂದಿದ್ದಾರೆ. ನಂತರ ವಶಪಡಿಸಿಕೊಂಡ ಹಣವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು, ಐಟಿ ಅಧಿಕಾರಿಗಳ ತಂಡವು ಏಪ್ರಿಲ್ 19 ರಂದು ಬ್ಯಾಟರಾಯನಪುರ ಪೊಲೀಸರಿಂದ ಹಣ ಪಡೆಯಲು ಮುಂದಾಗಿತ್ತು.

ಈ ಸಂಬಂಧ ಇನ್‌ಸ್ಪೆಕ್ಟರ್‌ ಶಂಕರ್ ನಾಯ್ಕ್ ಮತ್ತು ಮಧ್ಯವರ್ತಿ ಲೋಕನಾಥ್ ವಿರುದ್ಧ ಸೆಕ್ಷನ್ 201, 409,110, 465 ಮತ್ತು ಭ್ರಷ್ಟಾಚಾರ ನಿಷೇಧ ಕಾಯ್ದೆ ಅಡಿ ದೂರು ದಾಖಲಾಗಿದೆ. ಸರ್ಕಾರಿ ಕರ್ತವ್ಯದಲ್ಲಿ ನಂಬಿಕೆ ದ್ರೋಹ, ಅಧಿಕಾರ ದುರ್ಬಳಕೆ, ನಕಲಿ ಸಹಿ ಮಾಡಿಸಿಕೊಂಡು ಸಾಕ್ಷಿ ನಾಶ ಮಾಡಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com