ಜಮ್ಮು ಕಾಶ್ಮೀರ ಎನ್ಕೌಂಟರ್: ಹುತಾತ್ಮ ಕ್ಯಾಪ್ಟನ್ ಪ್ರಾಂಜಲ್ ಛಾಯಾಗ್ರಾಹಕ, ಪ್ರವಾಸಿಗ, ಹವ್ಯಾಸಿ ಜಾದೂಗಾರ!

ಜಮ್ಮು ಮತ್ತು ಕಾಶ್ಮೀರದ  ಗಡಿ ಜಿಲ್ಲೆಯ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರ ವಿರುದ್ಧ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ.
ಪತ್ನಿಯೊಂದಿಗೆ ಕ್ಯಾಪ್ಟನ್ ಪ್ರಾಂಜಲ್
ಪತ್ನಿಯೊಂದಿಗೆ ಕ್ಯಾಪ್ಟನ್ ಪ್ರಾಂಜಲ್

ಬೆಂಗಳೂರು: ಜಮ್ಮು ಮತ್ತು ಕಾಶ್ಮೀರದ ಗಡಿ ಜಿಲ್ಲೆಯ ರಜೌರಿಯಲ್ಲಿ ಬುಧವಾರ ಭಯೋತ್ಪಾದಕರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಸೇರಿದಂತೆ ನಾಲ್ವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಹುತಾತ್ಮರಾದ ನಾಲ್ವರಲ್ಲಿ 63 ರಾಷ್ಟ್ರೀಯ ರೈಫಲ್ಸ್‌ನ ಕ್ಯಾಪ್ಟನ್ ಎಂ.ವಿ.ಪ್ರಾಂಜಲ್ ಸೇರಿದ್ದಾರೆ.

ಹುತಾತ್ಮ ಕ್ಯಾಪ್ಟನ್ ಎಂವಿ ಪ್ರಾಂಜಲ್ ಒಬ್ಬ ಉತ್ತಮ ಅಭಿರುಚಿಯುಳ್ಳ ಛಾಯಾಗ್ರಾಹಕ, ಅತ್ಯಾಸಕ್ತಿಯ ಟ್ರಾವೆಲರ್, ಹವ್ಯಾಸಿ ಜಾದೂಗಾರ ಮತ್ತು ಸ್ಕೌಟ್ ರೇಂಜರ್ ಆಗಿದ್ದರು. ಪ್ರಾಂಜಲ್ ಅವರು ಭಾರತೀಯ ಸೇನೆಯಿಂದ ತಮ್ಮ ರಜೆಯ ಸಮಯದಲ್ಲಿ ಮಂಗಳೂರಿಗೆ ಭೇಟಿ ನೀಡಿದಾಗ, ಅವರು ಬ್ಯಾಚುಲರ್ ಆಫ್ ಎಜುಕೇಶನ್ (ಬಿಎಡ್) ಪದವೀಧರರಿಗೆ ಭಾರತದ ಧ್ವಜ ಸಂಹಿತೆಯ ಬಗ್ಗೆ ತರಗತಿ ತೆಗೆದುಕೊಳ್ಳುತ್ತಿದ್ದರು, ಇತಿಹಾಸ ಮತ್ತು ಅನುಸರಿಸಬೇಕಾದ ಪ್ರೋಟೋಕಾಲ್‌ಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು.

ಮಂಗಳೂರಿನಲ್ಲಿ ಸ್ಕೌಟ್ ದಿನಗಳಿಂದ ಪ್ರಾಂಜಲ್ ಅವರ ಮಾರ್ಗದರ್ಶಿ ಮತ್ತು ಶಿಕ್ಷಕರಾದ ಪಿಜಿ ವೆಂಕಟ್ ರಾವ್ ಮಾತನಾಡಿ, ಪ್ರಾಂಜಲ್ ಬದ್ದಿವಂತ ಮತ್ತು ಇತರರಿಗೆ ಯಾವಾಗಲೂ ಸಹಾಯ ಮಾಡಲು ಪ್ರಾಮಾಣಿಕವಾಗಿ ಮುಂದೆ ಬರುತ್ತಿದ್ದರು ಎಂದು ಹೇಳಿದ್ದಾರೆ. ತರಬೇತಿ ದಿನಗಳಲ್ಲಿ ಅವರು ಒಟ್ಟಿಗೆ ಟ್ರೆಕ್ಕಿಂಗ್ ಗೆ ಹೋಗಿದ್ದಾಗಿ ತಿಳಿಸಿದ್ದಾರೆ.

ಪ್ರಾಂಜಲ್ ಅವರು 2009 ರಲ್ಲಿ ರಾಷ್ಟ್ರಪತಿ ಸ್ಕೌಟ್ ಪೂರ್ಣಗೊಳಿಸಿದರು, ಅವರು ಮಂಗಳೂರಿಗೆ ಭೇಟಿ ನೀಡಿದಾಗಲೆಲ್ಲಾ ಅವರು ಉದಯೋನ್ಮುಖ ಸ್ಕೌಟ್‌ಗಳಿಗೆ ತರಗತಿ ತೆಗೆದುಕೊಳ್ಳುತ್ತಿದ್ದರು. ವಾಸ್ತವವಾಗಿ ಅವರು ಹೊಸದಾಗಿ ಸ್ಕೌಟ್ ಸಮವಸ್ತ್ರವನ್ನು ಸಂಪೂರ್ಣ ಪರಿಕರಗಳನ್ನು ಖರೀದಿಸಿ ತರಗತಿಗಳಿಗೆ ಧರಿಸುತ್ತಿದ್ದರು ಎಂದು ಪ್ರಸ್ತುತ ತರಬೇತಿ ಪಡೆದ ಪದವೀಧರ ಶಿಕ್ಷಕರಾಗಿ ಕೆಲಸ ಮಾಡುವ ಮತ್ತು ಹಿಮಾಲಯ ವುಡ್ ಬ್ಯಾಡ್ಜ್, ಪ್ರಿ-ಆಲ್ಟ್ (ಸ್ಕೌಟ್) ವೆಂಕಟರಾವ್ ಹೇಳಿದರು.

ಬುಧವಾರ ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರಗಾಮಿಗಳ ನಡುವಿನ ಎನ್‌ಕೌಂಟರ್‌ನಲ್ಲಿ ಪ್ರಾಂಜಲ್ ಹುತಾತ್ಮರಾದ ಬಗ್ಗೆ ರಾವ್ ಅವರಿಗೆ ಮಾಹಿತಿ ಬಂದ ತಕ್ಷಣ, ಅವರು ಅಂತಿಮ ನಮನ ಸಲ್ಲಿಸಲು ಬೆಂಗಳೂರಿಗೆ ಬಂದರು ಮತ್ತು ಇದೀಗ ಅವರ ಹೆಮ್ಮೆಯ ವಿದ್ಯಾರ್ಥಿಯೊಬ್ಬರಿಗೆ ಗೌರವ ಸಲ್ಲಿಸಿದರು

ಘಟನೆಯ ಕೆಲವೇ ದಿನಗಳ ಮೊದಲು ಪ್ರಾಂಜಲ್ ಅವರೊಂದಿಗಿನ ಕೊನೆಯ ಸಂಭಾಷಣೆಯನ್ನು ನೆನಪಿಸಿಕೊಂಡ ರಾವ್ ಕಣ್ಣೀರು ಹಾಕಿದರು. ನವೆಂಬರ್ 6 ರಂದು ನನ್ನ ತಾಯಿ ನಿಧನರಾದರು, ನವೆಂಬರ್ 9 ರಂದು ಪ್ರಾಂಜಲ್ ಅವರಿಗೆ ಸಂದೇಶ ಸಿಕ್ಕಿತು. ಈ ವೇಳೆ ಅವರು ದುಃಖಿತರಾಗಿದ್ದರು, ನಿಮ್ಮ ನಷ್ಟಕ್ಕೆ ನಾನು ವಿಷಾದಿಸುತ್ತೇನೆ, ಸರ್. ಕೆಲವು ದಿನಗಳಲ್ಲಿ ನಾನು ನಿಮ್ಮೊಂದಿಗೆ ಮಾತನಾಡುತ್ತೇನೆ ಎಂದು ಕೊನೆಯ ಸಂದೇಶ ಕಳುಹಿಸಿದ್ದರು ಪ್ರಾಂಜಲ್. ಆದರೆ ದುರದೃಷ್ಟವಶಾತ್ ಆ ದಿನ ಬರಲಿಲ್ಲ ಎಂದು ವಿಷಾದಿಸಿದ್ದಾರೆ.

ಅವರ ಪೋಷಕರು ಅತ್ಯಂತ ಧೈರ್ಯಶಾಲಿಗಳು, ಹೀಗಾಗಿ ಧೈರ್ಯಶಾಲಿ ವ್ಯಕ್ತಿಯನ್ನು ಬೆಳೆಸಿದ್ದಾರೆ ಎಂದು ಸ್ಕೌಟ್ ಶಿಕ್ಷಕ ಹೇಳಿದ್ದಾರೆ. ಮಂಗಳೂರಿನ ಪ್ರಾಂಜಲ್ ಅವರ ಕೊಠಡಿಯನ್ನು ಸ್ಕೌಟ್ ದಿನಗಳಿಂದ ಅವರ ಎಲ್ಲಾ ವಿಶೇಷ ನೆನಪುಗಳಿಂದ ಅಲಂಕರಿಸಲಾಗಿತ್ತು ಅವರ ಎಲ್ಲಾ ಶಿಕ್ಷಕರನ್ನು ಗೌರವಿಸಲಾಯಿತು.

ನೀವು ನನ್ನ ಗುರುಗಳು, ನೀವು ನನ್ನನ್ನು ಏಕೆ ಗೌರವಿಸುತ್ತೀರಿ? ನಾನು ನಿನ್ನನ್ನು ಗೌರವಿಸಬೇಕು ಎಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಾಂಜಲ್ ಹೇಳಿದ್ದರು, ಅದು ಅವರು ಹಿರಿಯರಿಗೆ ತೋರುತ್ತಿರುವ ಗೌರವಾಗಿತ್ತು ಎಂದು ವೆಂಕಟರಾವ್ ಹೇಳಿದರು.

ಒಂದೆರಡು ವರ್ಷಗಳ ಹಿಂದೆ ಬೋನ್ ಮ್ಯಾರೋ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಶಿಕ್ಷಕಿಯೊಬ್ಬರಿಗೆ ದೇಣಿಗೆ ಸಂಗ್ರಹಿಸಿ ಜೀವ ಉಳಿಸಿದ್ದಾರೆ ಕ್ಯಾಪ್ಟನ್. ಪ್ರಾಂಜಲ್ ಅವರ ಅಂತಿಮ ವಿಧಿವಿಧಾನಗಳು ಬೆಂಗಳೂರಿನಲ್ಲಿ ಸಕಲ ಗೌರವಗಳೊಂದಿಗೆ ನಡೆಯಲಿದೆ. ಅವರ ಪಾರ್ಥಿವ ಶರೀರವನ್ನು ಶುಕ್ರವಾರ ನಗರಕ್ಕೆ ತರಲಾಗುವುದು ಎಂದು ಮೂಲಗಳು ಖಚಿತಪಡಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com