ಮಿಂಚುಹುಳಗಳ ಸಂಖ್ಯೆಯಲ್ಲಿ ತೀವ್ರ ಕುಸಿತ; ಕೃತಕ ಬೆಳಕು, ಹೆಚ್ಚಿದ ಕಟ್ಟಡಗಳು ಮುಖ್ಯ ಕಾರಣವೇ?

ಮಿಂಚುಹುಳಗಳನ್ನು ಹಿಡಿದದ್ದು, ಬೆನ್ನಟ್ಟಿ ಹೋಗಿದ್ದು ನಿಮಗೆ ನೆನಪಿದೆಯೇ? ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಬಿಡಿ, ಹಳ್ಳಿಗಳಲ್ಲಿ ವಾಸಿಸುವವರಿಗೂ ಮಿಂಚುಹುಳ ಅಪರೂಪವಾಗಿರಬಹುದು. ಇಂದಿನ ಜನಾಂಗದವರಿಗೆ ಮಿಂಚುಹುಳ ಎಂದರೇನೆಂದೇ ಗೊತ್ತಿರಲಿಕ್ಕಿಲ್ಲ. 
ಮಿಂಚುಹುಳ
ಮಿಂಚುಹುಳ
Updated on

ಬೆಂಗಳೂರು: ಮಿಂಚುಹುಳಗಳನ್ನು ಹಿಡಿದದ್ದು, ಬೆನ್ನಟ್ಟಿ ಹೋಗಿದ್ದು ನಿಮಗೆ ನೆನಪಿದೆಯೇ? ನಗರ ಪ್ರದೇಶದಲ್ಲಿ ವಾಸಿಸುವವರಿಗೆ ಬಿಡಿ, ಹಳ್ಳಿಗಳಲ್ಲಿ ವಾಸಿಸುವವರಿಗೂ ಮಿಂಚುಹುಳ ಅಪರೂಪವಾಗಿರಬಹುದು. ಇಂದಿನ ಜನಾಂಗದವರಿಗೆ ಮಿಂಚುಹುಳ ಎಂದರೇನೆಂದೇ ಗೊತ್ತಿರಲಿಕ್ಕಿಲ್ಲ. 

ಸಂಶೋಧಕರ ಪ್ರಕಾರ, ಪಶ್ಚಿಮ ಘಟ್ಟಗಳಲ್ಲಿಯೂ ಮಿಂಚುಹುಳುಗಳ ಸಂತತಿ ಕಡಿಮೆಯಾಗಿದೆ. ಇವು ಕ್ಲೈಮ್ಯಾಕ್ಸ್ ಸಸ್ಯವರ್ಗದ ಸೂಚಕ ಜಾತಿಗಳಾಗಿವೆ. ಎನ್ವಿರಾನ್ಮೆಂಟಲ್ ಮ್ಯಾನೇಜ್ಮೆಂಟ್ ಮತ್ತು ಪಾಲಿಸಿ ರಿಸರ್ಚ್ ಇನ್ಸ್ಟಿಟ್ಯೂಟ್ (Empri) ಮತ್ತು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ (GKVK) ಸಂಶೋಧಕರು ಜೀರುಂಡೆ ಜಾತಿಗಳು ಮತ್ತು ಅವುಗಳ ಪರಿಸರ ಪ್ರಾಮುಖ್ಯತೆಯ ಅಧ್ಯಯನವನ್ನು ಕೈಗೊಂಡಿದ್ದಾರೆ. ಎಂಪ್ರಿಯ ಸಂಶೋಧಕರು ಮಿಂಚುಹುಳುಗಳ ಮೇಲೆ 'ಫೈರ್‌ಫ್ಲೈಸ್: ದಿ ಗ್ಲೋಯಿಂಗ್ ಜ್ಯುವೆಲ್ಸ್ ಆಫ್ ದಿ ವೈಲ್ಡ್' ಎಂಬ ಶೀರ್ಷಿಕೆಯ ಅಧ್ಯಯನವನ್ನು ಸಹ ಕೈಗೊಂಡಿದ್ದಾರೆ.

ಮಿಂಚುಹುಳಗಳ ಅವನತಿಗೆ ಪ್ರಾಥಮಿಕ ಕಾರಣವೆಂದರೆ ಕೃತಕ ಬೆಳಕಿನ ಹೆಚ್ಚಿದ ಬಳಕೆ. ಹಳ್ಳಿಗಳಲ್ಲಿ ವಿದ್ಯುದ್ದೀಕರಣ ಮತ್ತು ಅರಣ್ಯಗಳಲ್ಲಿ ಕೃತಕ ಬೆಳಕಿನ ಬಳಕೆ ಪರಿಣಾಮ ಬೀರಿದೆ. ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ರೆಸಾರ್ಟ್‌ಗಳು ಮತ್ತು ಹೋಂಸ್ಟೇಗಳ ನಿರ್ಮಾಣದಂತಹ ಪ್ರವಾಸೋದ್ಯಮ ಚಟುವಟಿಕೆಗಳಿಂದ ಮಿಂಚುಹುಳುಗಳ ಬದುಕಿಗೆ ಅಪಾಯವಾಗಿದೆ. ಕೃತಕ ಬೆಳಕಿನಿಂದಾಗಿ ಮಿಂಚುಹುಳಗಳು ಈಗ ಪರಸ್ಪರ ಸಂವಹನ ನಡೆಸಲು ಮತ್ತು ಸಂಯೋಗಕ್ಕೆ ಸಾಧ್ಯವಾಗುತ್ತಿಲ್ಲ, ಇದರಿಂದ ಸಂತತಿ ಬೆಳೆಯುವುದಿಲ್ಲ ಎಂದು ಸಂಶೋಧಕ ಮತ್ತು ಪ್ರಧಾನ ತನಿಖಾಧಿಕಾರಿ ಡಾ ಎಕೆ ಚಕ್ರವರ್ತಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗೆ ತಿಳಿಸಿದ್ದಾರೆ.

ನಿರ್ಮಾಣ ಕಾರ್ಯಗಳು, ವಿಶೇಷವಾಗಿ ರಸ್ತೆಗಳನ್ನು ವಿಸ್ತರಿಸುವ ಪ್ರದೇಶಗಳಲ್ಲಿ ಅವುಗಳ ಆವಾಸಸ್ಥಾನವು ಕುಗ್ಗುತ್ತಿದೆ. ಚಾರ್ಮಾಡಿ ಘಾಟ್ ವಿಭಾಗ, ಬ್ರಹ್ಮಗಿರಿ, ಲಕ್ಕವಳ್ಳಿ, ಚಿಕ್ಕಮಗಳೂರು ಮತ್ತು ಕಳಸವನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಮಿಂಚುಹುಳುಗಳು ಕಂಡುಬರುತ್ತವೆ.

ಅಮೆರಿಕ ಮತ್ತು ಯುರೋಪ್ ನಲ್ಲಿ ಅಧ್ಯಯನಗಳು ಮಿಂಚುಹುಳುಗಳಲ್ಲಿ ಕಂಡುಬರುವ ಪ್ರೋಟೀನ್ ಗಳು ಮತ್ತು ಕಿಣ್ವಗಳು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತವೆ ಎಂದು ಜಿಕೆವಿಕೆಯ ಸಂಶೋಧಕರು ಹೇಳಿದ್ದಾರೆ. ವೈದ್ಯಕೀಯ ಉದ್ದೇಶಗಳಿಗಾಗಿ ಮಿಂಚುಹುಳುಗಳನ್ನು ಸೆರೆಹಿಡಿಯಲಾಗುತ್ತಿದೆ ಎಂಬ ವದಂತಿಯಿದೆ. ಈ ಅಂಶವನ್ನು ಸಹ ಅಧ್ಯಯನ ಮಾಡಿ ಅರಣ್ಯ ಮತ್ತು ಸಂಬಂಧಿಸಿದ ಇತರ ಅಧಿಕಾರಿಗಳೊಂದಿಗೆ ಚರ್ಚಿಸಲಾಗುತ್ತಿದೆ. ಎಂದು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com