ಸೆರೆಸಿಕ್ಕ ಹುಲಿ
ರಾಜ್ಯ
ಮೈಸೂರು: ಮಹಿಳೆಯನ್ನು ಕೊಂದಿದ್ದ ಹುಲಿ ಸೆರೆ
ಕೆಲ ದಿನಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವ್ಯಾಪ್ತಿಯಲ್ಲಿ 50 ವರ್ಷದ ಮಹಿಳೆಯನ್ನು ಕೊಂದಿದ್ದ ಹುಲಿ ಇಂದು ಮಂಗಳವಾರ ನಸುಕಿನ ಜಾವ 1.40ರ ಸುಮಾರಿಗೆ ಸೆರೆ ಸಿಕ್ಕಿದೆ.
ಮೈಸೂರು: ಕೆಲ ದಿನಗಳ ಹಿಂದೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ವ್ಯಾಪ್ತಿಯಲ್ಲಿ 50 ವರ್ಷದ ಮಹಿಳೆಯನ್ನು ಕೊಂದಿದ್ದ ಹುಲಿ ಇಂದು ಮಂಗಳವಾರ ನಸುಕಿನ ಜಾವ 1.40ರ ಸುಮಾರಿಗೆ ಸೆರೆ ಸಿಕ್ಕಿದೆ.
ಸೆರೆಸಿಕ್ಕ ಹತ್ತು ವರ್ಷದ ಗಂಡು ಹುಲಿ ಆರೋಗ್ಯವಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.ಇದನ್ನು ಮೈಸೂರು ಸಮೀಪದ ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ನವೆಂಬರ್ 24 ರಂದು ಮಹಿಳೆಯನ್ನು ಕೊಂದಿದ್ದ ಹುಲಿ ಎರಡು ಜಾನುವಾರುಗಳನ್ನು ಕೊಂದಿತ್ತು. ಬೋನಿನೊಳಗೆ ಕಾದು ಕುಳಿತಿದ್ದ ಅರಣ್ಯ ಸಿಬ್ಬಂದಿ ಸಮಾಧಾನಪಡಿಸಿ ಹಸುವನ್ನು ತಿನ್ನಲು ಬಂದಾಗ ಸೆರೆ ಹಿಡಿದಿದ್ದಾರೆ.
ಬಿಟಿಆರ್ ಕ್ಷೇತ್ರ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್, ಎಸಿಎಫ್ ಪರಮೇಶ್ ಕಾರ್ಯಾಚರಣೆ ವೇಳೆ ಹಾಜರಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ