ವೈದ್ಯರು ಮಾತ್ರವಲ್ಲ, ಗರ್ಭಿಣಿಯರನ್ನು ಲಿಂಗ ಪರೀಕ್ಷೆಗೆ ಒತ್ತಡಪಡಿಸುವ ಕುಟುಂಬಸ್ಥರಿಗೂ ಶಿಕ್ಷೆಯಾಗಬೇಕು: ತಜ್ಞರ ಒತ್ತಾಯ

ಭಾರತೀಯ ಸಮಾಜದಲ್ಲಿ ಪಿತೃಪ್ರಭುತ್ವದ ಪ್ರಾಬಲ್ಯ ಈ 21ನೇ ಶತಮಾನದಲ್ಲಿ ಕೂಡ ಮುಂದುವರಿದಿದ್ದು, ಹುಟ್ಟಲಿರುವ ಮಗು ಹೆಣ್ಣೇ, ಗಂಡೇ ಎಂದು ಖಾತ್ರಿಪಡಿಸಿಕೊಳ್ಳಲು ಕುಟುಂಬಸ್ಥರು ಗರ್ಭಿಣಿಯರನ್ನು ಲಿಂಗ ನಿರ್ಣಯ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಭಾರತೀಯ ಸಮಾಜದಲ್ಲಿ ಪಿತೃಪ್ರಭುತ್ವದ ಪ್ರಾಬಲ್ಯ ಈ 21ನೇ ಶತಮಾನದಲ್ಲಿ ಕೂಡ ಮುಂದುವರಿದಿದ್ದು, ಹುಟ್ಟಲಿರುವ ಮಗು ಹೆಣ್ಣೇ, ಗಂಡೇ ಎಂದು ಖಾತ್ರಿಪಡಿಸಿಕೊಳ್ಳಲು ಕುಟುಂಬಸ್ಥರು ಗರ್ಭಿಣಿಯರನ್ನು ಲಿಂಗ ನಿರ್ಣಯ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ. 

ವೈದ್ಯಕೀಯ ವೃತ್ತಿಪರರ ಜೊತೆಗೆ ಅಂತಹ ಪರೀಕ್ಷೆಗಳನ್ನು ಮಾಡಲು ವೈದ್ಯರನ್ನು ಒತ್ತಾಯಿಸುತ್ತಿರುವ ಕುಟುಂಬಸ್ಥರನ್ನು ಸಹ ಶಿಕ್ಷೆಗೆ ಒಳಪಡಿಸಬೇಕೆಂದು ತಜ್ಞರು ಒತ್ತಾಯಿಸುತ್ತಾರೆ. 

ಹೆಣ್ಣು ಮಗು ಕುಟುಂಬದ ಹೊರೆ ಎಂಬ ಸಾಮಾಜಿಕ ಕಳಂಕ ಸಮಾಜದಲ್ಲಿ ಮುಂದುವರಿದಿದೆ. ಮಗುವಿನ ಲಿಂಗ ಪತ್ತೆ ಮಾಡಲು ಬಯಸುವ ಕುಟುಂಬಗಳು ಹೆಚ್ಚುವರಿ ಆದಾಯಕ್ಕಾಗಿ ರಹಸ್ಯವಾಗಿ ಅಂತಹ ಪರೀಕ್ಷೆಗಳನ್ನು ಮಾಡಲು ವೈದ್ಯಕೀಯ ವೃತ್ತಿಪರರನ್ನು ಪ್ರೇರೇಪಿಸುತ್ತಾರೆ. ಆದಾಗ್ಯೂ, ಶಿಕ್ಷೆಯ ವಿಷಯಕ್ಕೆ ಬಂದಾಗ ಕುಟುಂಬಸ್ಥರನ್ನು ದೂರ ಇಡುವುದು ಸರಿಯಲ್ಲ ಎನ್ನುತ್ತಾರೆ ಕುಟುಂಬ ಯೋಜನೆ ಉಪ ನಿರ್ದೇಶಕಿ ಡಾ.ಚಂದ್ರಿಕಾ ಬಿಆರ್.

ಇತ್ತೀಚೆಗೆ, ರಾಜ್ಯದಲ್ಲಿ 900 ಅನಧಿಕೃತ ಗರ್ಭಪಾತಗಳನ್ನು ನಡೆಸಲಾಗಿದೆ ಎಂದು ಲಿಂಗ ನಿರ್ಣಯ ಮತ್ತು ಹೆಣ್ಣು ಭ್ರೂಣಹತ್ಯೆ ದಂಧೆಯನ್ನು ಪೊಲೀಸರು ಭೇದಿಸಿದ್ದರು.

ಒಟ್ಟು ಫಲವತ್ತತೆ ದರವು (TFR) ಕಾಲಾನಂತರದಲ್ಲಿ ಕಡಿಮೆಯಾದಂತೆ, ಮುಂದಿನ 15-20 ವರ್ಷಗಳಲ್ಲಿ ಇಂತಹ ಚಟುವಟಿಕೆಗಳು ಮುಂದುವರಿದರೆ, ಇದು ಜನಸಂಖ್ಯೆಯ ಕುಸಿತ ಮತ್ತು ಕಡಿಮೆ ಸ್ತ್ರೀಲಿಂಗ ಅನುಪಾತದ ಬಗ್ಗೆ ಕಳವಳವನ್ನು ಉಂಟುಮಾಡುತ್ತದೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸುತ್ತಾರೆ.

ನಿಯೋನಾಟಾಲಜಿಸ್ಟ್ ಮತ್ತು ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹ ಪ್ರಾಧ್ಯಾಪಕಿ ಡಾ.ಉಷಾ ಬಿ.ಕೆ, ಹೆಣ್ಣು ಮಗು ಜನಿಸಿದರೆ ಅನೇಕ ಕುಟುಂಬಗಳು ನಿರಾಶರಾಗುತ್ತಾರೆ. ಗಂಡು ಮಗು ಜನಿಸಿದರೆ ಪೋಷಕರು ಸಂಭ್ರಮಿಸುತ್ತಾರೆ ಆದರೆ ಅದು ಹುಡುಗಿಯಾಗಿದ್ದರೆ, ಪ್ರತಿಕ್ರಿಯೆಯು ಸಾಮಾನ್ಯವಾಗಿ ಅಹಿತಕರವಾಗಿರುತ್ತದೆ. ಕುಟುಂಬಗಳನ್ನು ದೂಷಿಸಬೇಕಾಗಿದೆ, ಲಿಂಗ ಪರೀಕ್ಷೆ ಮಾಡುವ ವೈದ್ಯರು ಹೆಚ್ಚು ಜವಾಬ್ದಾರರಾಗಿರುತ್ತಾರೆ ಎನ್ನುತ್ತಾರೆ. 

ಹೆಚ್ಚಿನ ಹಣ ಗಳಿಸುವ ದುರಾಸೆಯಿಂದ ವೈದ್ಯರು ತೋಟದ ಮನೆಗಳು ಅಥವಾ ಕಾರ್ಖಾನೆಗಳಲ್ಲಿ ಈ ಪರೀಕ್ಷೆಗಳನ್ನು ಮಾಡುತ್ತಾರೆ, ಈ ಬಗ್ಗೆ ಅನೇಕ ದೂರುಗಳು ಬಂದರೂ ವೈದ್ಯರು ಅಥವಾ ಗರ್ಭಿಣಿಯರ ವಿರುದ್ಧ ಕುಟುಂಬದ ಸದಸ್ಯರು  ಯಾವುದೇ ಸಾಕ್ಷ್ಯವನ್ನು ಕಂಡುಹಿಡಿಯುವುದು, ಪ್ರಕರಣವನ್ನು ದಾಖಲಿಸುವುದು ಅಧಿಕಾರಿಗಳಿಗೆ ಕಷ್ಟಕರವಾಗಿದೆ ಎನ್ನುತ್ತಾರೆ ಪ್ರಿ-ಕನ್ಸೆಪ್ಶನ್ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ (PCPNDT) ಉಪನಿರ್ದೇಶಕ ವಿವೇಕ್ ದೊರೈ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com