ಕೆಳ ಹಂತದ ಅಧಿಕಾರಿಯನ್ನು ಉನ್ನತ ಹುದ್ದೆಗೆ ನೇಮಿಸಲು ಸಿಎಂ ಸಹಿ ಮಾತ್ರ ಸಾಕಾಗುವುದಿಲ್ಲ: ಹೈಕೋರ್ಟ್

ಸೂಕ್ತ ಕಾರಣ ಇಲ್ಲದೆ ಕೆಳ ಹಂತದ ಅಧಿಕಾರಿಯನ್ನು ಉನ್ನತ ಹುದ್ದೆಗೆ ನೇಮಿಸಲು ಮುಖ್ಯಮಂತ್ರಿಗಳ ಸಹಿ ಹೊಂದಿರುವ ವರ್ಗಾವಣೆ ಆದೇಶ ಮಾತ್ರ ಸಾಕಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ಸೂಕ್ತ ಕಾರಣ ಇಲ್ಲದೆ ಕೆಳ ಹಂತದ ಅಧಿಕಾರಿಯನ್ನು ಉನ್ನತ ಹುದ್ದೆಗೆ ನೇಮಿಸಲು ಮುಖ್ಯಮಂತ್ರಿಗಳ ಸಹಿ ಹೊಂದಿರುವ ವರ್ಗಾವಣೆ ಆದೇಶ ಮಾತ್ರ ಸಾಕಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.

ಅಂತಹ ವರ್ಗಾವಣೆ ಆದೇಶಗಳು ಮುಖ್ಯಮಂತ್ರಿಗಳ ಸಹಿಯನ್ನು ಹೊಂದಿದ್ದರೂ ಸಹ, ಅರ್ಹರ ಲಭ್ಯತೆಯಿಲ್ಲದಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡದ ಕಾರಣ ಅಂತಹ ಆದೇಶಗಳನ್ನು ಕಾನೂನುಬದ್ಧ ಆದೇಶ ಎಂದು ಹೇಳಲಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಸದರಿ ಪೋಸ್ಟ್‌ಗೆ ಪೋಸ್ಟ್ ಮಾಡಬೇಕಾದ ವ್ಯಕ್ತಿಗಳನ್ನು ಕಡೆಗಣಿಸಿ ಕೆಳಗಿನ ಕೇಡರ್‌ನ ವ್ಯಕ್ತಿಯನ್ನು ಏಕೆ ನಿಯೋಜಿಸಲಾಗಿದೆ ಎಂದು ಹೈಕೋರ್ಟ್ ಪ್ರಶ್ನಿಸಿದೆ.

ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ರಾಜೇಶ್ ರೈ ಕೆ ಅವರನ್ನೊಳಗೊಂಡ ಪೀಠ, ಕೆಎಎಸ್ ಅಧಿಕಾರಿ ಡಾ.ಪ್ರಜ್ಞಾ ಅಮ್ಮೆಂಬಳ ಅವರು ಸಲ್ಲಿಸಿದ್ದ ಅರ್ಜಿಯ ಇತ್ತೀಚಿನ ತೀರ್ಪಿನಲ್ಲಿ ಹೀಗೆ ಹೇಳಿದೆ.

ಅಮ್ಮೆಂಬಳ ಅವರ ವರ್ಗಾವಣೆ ಆದೇಶವನ್ನು ಪ್ರಶ್ನಿಸಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಪಾಥರಾಜು ವಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕರ್ನಾಟಕ ಆಡಳಿತ ನ್ಯಾಯಮಂಡಳಿ(ಕೆಎಟಿ) ವರ್ಗಾವಣೆ ಅಧಿಸೂಚನೆಯನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅಮ್ಮೆಂಬಳ ಅವರು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.

ಅಮ್ಮೆಂಬಳ ಅವರು ಹುದ್ದೆಗೆ ಅರ್ಹರಲ್ಲ ಎಂದು ಪಾತರಾಜು ವಾದಿಸಿದ್ದರು. ಅಮ್ಮೆಂಬಳ ಅವರನ್ನು 2006 ರಲ್ಲಿ ನೇರ ನೇಮಕಾತಿ ಮೂಲಕ ತಹಶೀಲ್ದಾರ್ ಆಗಿ ನೇಮಿಸಲಾಯಿತು ಮತ್ತು 2015 ರಲ್ಲಿ ಕೆಎಎಸ್ ಗೆ ಬಡ್ತಿ ನೀಡಲಾಯಿತು(ಜೂನಿಯರ್ ಸ್ಕೇಲ್) ಮತ್ತು ಜನವರಿ 2021 ರಲ್ಲಿ ಕೆಎಎಸ್ (ಸೀನಿಯರ್ ಸ್ಕೇಲ್) ಗೆ ಬಡ್ತಿ ನೀಡಲಾಯಿತು. ಅಮ್ಮೆಂಬಳ ಅವರನ್ನು ಜುಲೈ 2023 ರಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೆಚ್ಚುವರಿ ನಿರ್ದೇಶಕರಾಗಿ ವರ್ಗಾಯಿಸಲಾಗಿತ್ತು.

ಪಾತರಾಜು ಅವರು, ತಾವು ಈಗಾಗಲೇ ಈ ಹುದ್ದೆಯಲ್ಲಿದ್ದು, ಮುಖ್ಯಮಂತ್ರಿಗಳ ಪೂರ್ವಾನುಮತಿ ಇಲ್ಲದೆ ಅಮ್ಮೆಂಬಳ ಅವರನ್ನು ಈ ಹುದ್ದೆಗೆ ವರ್ಗಾಯಿಸಲಾಗಿದೆ ಎಂದು ಕೆಎಟಿ ಮೊರೆ ಹೋಗಿದ್ದರು.

ಸಿಎಂ ಪೂರ್ವಾನುಮತಿ ಪಡೆಯಲಾಗಿದೆ ಎಂದು ಅಮ್ಮೆಂಬಳ ಅವರು ವಾದಿಸಿದ್ದರು. ಆದರೆ ಹುದ್ದೆಯನ್ನು ಅಲಂಕರಿಸಲು ಅವರು ಅನರ್ಹರು ಎಂದು ಹೇಳಿ ಕೆಎಟಿ ಅವರ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿತ್ತು.

ನಂತರ ಅಮ್ಮೆಂಬಳ ಹೈಕೋರ್ಟ್ ಮೆಟ್ಟಿಲೇರಿದ್ದರು. ಹುದ್ದೆಗೆ ಅಮ್ಮೆಂಬಳ ಅರ್ಹತೆಯ ಪ್ರಶ್ನೆಗೆ, ಕಾನೂನು ಅವರ ಪರವಾಗಿಯೇ ಇದೆ ಎಂದು ಹೈಕೋರ್ಟ್ ಹೇಳಿದೆ. ಪ್ರತಿವಾದಿ ನಂ.3 (ಪತರಾಜು) ಅವರ ಆರಂಭಿಕ ಪೋಸ್ಟಿಂಗ್ ಅನ್ನು ಪರಿಗಣಿಸಿದರೆ, ಅದೇ ಕೆಎಎಸ್ (ಹಿರಿಯ ಸ್ಕೇಲ್) ನ ಅದೇ ಕೇಡರ್‌ನಲ್ಲಿರುವ ಅರ್ಜಿದಾರರು(ಅಮ್ಮೆಂಬಳ) ಡೆಪ್ಯೂಟೇಶನ್‌ನಲ್ಲಿ ಅದೇ ಹುದ್ದೆಯನ್ನು ಹೊಂದಲು ತುಂಬಾ ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಹೇಳಿದೆ. ಹಾಗಾಗಿ ರಾಜ್ಯ ಸರ್ಕಾರ ಹೊರಡಿಸಿದ್ದ ವರ್ಗಾವಣೆ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.

ಕೆಳ ಹಂತದ ಅಧಿಕಾರಿಗಳನ್ನು ಹೆಚ್ಚಿನ ಕೇಡರ್ ಹುದ್ದೆಗಳಿಗೆ ವರ್ಗಾವಣೆ ಮಾಡುವಾಗ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸುವಂತೆಯೂ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com