ಮೈಸೂರು: ಹುಲಿ ದಾಳಿಗೆ ರೈತ ಬಲಿ, ವ್ಯಾಘ್ರನನ್ನು ಸೆರೆಹಿಡಿಯುವಂತೆ ಗ್ರಾಮಸ್ಥರ ಒತ್ತಾಯ!

ಮೈಸೂರಿನ ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ಬಳಿ ರೈತನೋರ್ವ ದನ ಮೇಯಿಸಲು ಹೋಗಿದ್ದಾಗ ಹುಲಿ ದಾಳಿ ಬಲಿಯಾಗಿದ್ದಾನೆ.
ಹುಲಿ ಚಿತ್ರ
ಹುಲಿ ಚಿತ್ರ

ಮೈಸೂರು: ಮೈಸೂರಿನ ಹುಣಸೂರು ತಾಲೂಕಿನ ಉಡವೇಪುರ ಗ್ರಾಮದ ಬಳಿ ರೈತನೋರ್ವ ದನ ಮೇಯಿಸಲು ಹೋಗಿದ್ದಾಗ ಹುಲಿ ದಾಳಿ ಬಲಿಯಾಗಿದ್ದಾನೆ. 

ಮೃತ ರೈತನನ್ನು 55 ವರ್ಷದ ಗಣೇಶ ಎಂದು ಗುರುತಿಸಲಾಗಿದೆ. ನಾಗರಹೊಳೆ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಬಫರ್ ಜೋನ್ ನಲ್ಲಿ ದನ ಮೇಯಿಸುತ್ತಿದ್ದಾಗಲೇ ರೈತ ಗಣೇಶನ ಮೇಲೆ ಹುಲಿ ದಾಳಿ ಮಾಡಿದೆ.

ಸೋಮವಾರ ಸಂಜೆ ಗಣೇಶ್ ಮನೆಗೆ ಬಾರದೇ ಇದ್ದಾಗ ಆತನ ಕುಟುಂಬದವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ, ಮುದ್ದನಹಳ್ಳಿ ಅರಣ್ಯ ವಲಯದ ಬಫರ್ ಪ್ರದೇಶದಲ್ಲಿ ಬಲಿಯಾದ ವ್ಯಕ್ತಿಯ ಶವ ಪತ್ತೆಯಾಗಿದೆ. ಗಣೇಶ್ ಮೇಲೆ ಹುಲಿ ದಾಳಿ ಮಾಡಿದ್ದು, ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.

ದಾಳಿಯಿಂದಾಗಿ ರೈತ ಸ್ಥಳದಲ್ಲೇ ಮೃತಪಟ್ಟಿದ್ದು ರೈತನ ಮೃತದೇಹವನ್ನು ಅರ್ಧ ತಿಂದು ಹುಲಿ ಬಿಟ್ಟುಹೋಗಿದೆ. 

ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಗ್ರಾಮಸ್ಥರು ಕೂಡಲೇ ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಶಾಸಕ ಜಿ.ಡಿ.ಹರೀಶ್ ಗೌಡ ಭೇಟಿ ನೀಡಿ, ಸಂತ್ರಸ್ತ ಕುಟುಂಬಕ್ಕೆ 50 ಸಾವಿರ ರೂ. ಪರಿಹಾರ ನೀಡಿದ್ದಾರೆ.

ಕಳೆದ ಸೆಪ್ಟೆಂಬರ್ 21ರಂದು ಇದೇ ಅರಣ್ಯ ವ್ಯಾಪ್ತಿಯಲ್ಲಿ ಮುದ್ದನಹಳ್ಳಿಯ ರಮೇಶ್ ಎಂಬುವವರ ಮೇಲೆ ಹುಲಿ ದಾಳಿ ಮಾಡಿತ್ತು. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ರಮೇಶ್ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com