ಶಿವಮೊಗ್ಗದ ಕಲ್ಲಿನ ತೂರಾಟ ಪೂರ್ವ ನಿಯೋಜಿತ ಕೃತ್ಯ, ಹಿಂದುಗಳನ್ನು ಟಾರ್ಗೆಟ್​ ಮಾಡಿದ್ದಾರೆ: ಶಾಸಕ ಚನ್ನಬಸಪ್ಪ

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿನ್ನೆ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಭೆ ಕುಕೃತ್ಯ ಪೂರ್ವ ನಿಯೋಜಿತ, ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾಡಲಾಗುತ್ತಿದೆ ಎಂದು ಶಾಸಕ ಚನ್ನಬಸಪ್ಪ ಆರೋಪಿಸಿದ್ದಾರೆ.
ಆಸ್ಪತ್ರೆಗೆ ಹೋಗಿ ಗಾಯಾಳುಗಳನ್ನು ವಿಚಾರಿಸಿದ ಶಾಸಕ ಚನ್ನಬಸಪ್ಪ
ಆಸ್ಪತ್ರೆಗೆ ಹೋಗಿ ಗಾಯಾಳುಗಳನ್ನು ವಿಚಾರಿಸಿದ ಶಾಸಕ ಚನ್ನಬಸಪ್ಪ
Updated on

ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡದಲ್ಲಿ ನಿನ್ನೆ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಗಲಭೆ ಕುಕೃತ್ಯ ಪೂರ್ವ ನಿಯೋಜಿತ, ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾಡಲಾಗುತ್ತಿದೆ ಎಂದು ಶಾಸಕ ಚನ್ನಬಸಪ್ಪ ಆರೋಪಿಸಿದ್ದಾರೆ.

ಉದ್ದೇಶ ಪೂರ್ವಕ ಕೃತ್ಯ ನಡೆದಿದೆ. ಹಿಂದುಗಳನ್ನು ಟಾರ್ಗೆಟ್​ ಮಾಡಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಅಗತ್ಯ ಇದೆ. ಸಂತ್ರಸ್ತರು ನೊಂದುಕೊಂಡು ಸಮಸ್ಯೆ ಹೇಳಿದ್ದಾರೆ. ಪೊಲೀಸರು ಸೂಕ್ತ ಕ್ರಮ ಅಗತ್ಯ ಇದೆ. ಒಂದು ಗುಂಪು ಬಂದು ದಾಳಿ ಮಾಡಿದೆ. ಬಿಗಿ ಕ್ರಮದ ಅಗತ್ಯ ಇದೆ.ಹೊರಗಡೆಯಿಂದ ಬಂದು ಬಾಲ ಬಿಚ್ಚುವ ಕೆಲಸ ಮಾಡಬೇಡಿ ಎಂದರು. 

ಗಲಾಟೆಗೆ ಅವರ ಮಾನಸಿಕತೆ ಕಾರಣವಾಗಿದೆ. ಇದಕ್ಕೆ ಹೊರಗಿನ ಶಕ್ತಿಯ ಕೈವಾಡ ಇದೆ. ಸ್ಥಳೀಯರು ಅವರಿಗೆ ಸಹಕಾರ ನೀಡುತ್ತಿದ್ದಾರೆ. ಹೊರಗಿನವರು ಬಂದು ಇಲ್ಲಿ ಆಟ ಆಡುತ್ತಿದ್ದಾರೆ. ಅವರ ಜೊತೆ ಸ್ಥಳೀಯರು ಕೈಜೋಡಿಸಬಾರದು. ಶಿವಮೊಗ್ಗದಲ್ಲಿ ಅಶಾಂತಿ ಸೃಷ್ಟ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಶಿವಮೊಗ್ಗ ನಗರಕ್ಕೆ ಕೆಎ 35,ಕೆಎ19, ಯುಪಿಯಿಂದ ವಾಹನಗಳು ಕಳೆದ ಮೂರ್ನಾಲ್ಕು ದಿನದಿಂದ ಬಂದಿವೆ. ಈ ವಾಹನಗಳನ್ನು ಪತ್ತೆ ಹಚ್ಚಿ ಸಮಗ್ರ ತನಿಖೆ ಕೈಗೊಳ್ಳಬೇಕು. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಓಂ ಗಣಪತಿ ಮೆರವಣಿಗೆ ಹಾಗೂ ಈದ್ ಮಿಲಾದ್ ಮೆರವಣಿಗೆ ಸೌಹಾರ್ದತೆಯಿಂದಲೇ ನಡೆದಿವೆ. ಆದರೆ, ಕೆಲವರು ಹುಳಿ ಹಿಂಡುವ ಕಾರಣಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com