ಗಂಗಾವತಿ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತಮ್ಮನೇ ಅಣ್ಣನನ್ನು ಕೊಲೆಗೈದು ಪೊಲೀಸ್ ಠಾಣೆಗೆ ತೆರಳಿ ಶರಣಾದ ಘಟನೆ ನಗರದ ಎಚ್.ಆರ್.ಎಸ್. ಕಾಲನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮೌಲಾ ಹುಸೇನ್ ಭಾರಿ (32) ಕೊಲೆಯಾದ ಯುವಕ. ಇವರ ತಮ್ಮ ನೂರ್ ಅಹ್ಮದ್ ಬಾರಿ(26) ಕೊಲೆ ಆರೋಪಿಯಾಗಿದ್ದಾನೆ. ಕಳೆದ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಸ್ವಂತ ಅಣ್ಣನನ್ನು ಕತ್ತು ಸೀಳಿ ಕೊಲೆ ಮಾಡಿರುವ ಆರೋಪಿ ಬಳಿಕ ಪೊಲೀಸ್ ಠಾಣೆಗೆ ತೆರಳಿ ಕೊಲೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಮೂಲತಃ ಗಂಗಾವತಿ ಕಿಲ್ಲಾ ಏರಿಯಾದವರಾದ ಇವರು ಇತ್ತೀಚಿಗೆ ಎಚ್.ಆರ್.ಎಸ್. ಕಾಲನಿ ಅಖಂಡೇಶ್ವರ ದೇವಾಲದ ಬಳಿ ಮನೆ ಬಾಡಿಗೆ ಪಡೆದು ಜೀವನ ನಡೆಸುತ್ತಿದ್ದರು. ಸ್ಥಳಕ್ಕೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ.
Advertisement