ಶಿವಮೊಗ್ಗ ಗಲಭೆಗೆ ಸಿದ್ದರಾಮಯ್ಯನವರೇ ಕಾರಣ, ರಾಕ್ಷಸರ ರಾಜ್ಯಭಾರ ಈಗ ನಡೆಯುತ್ತಿದೆ: ಸಂಸದ ಪ್ರತಾಪ್ ಸಿಂಹ

ಟಿಪ್ಪು ಹೈದರಾಲಿ ಕಾಲ ಬಿಟ್ಟರೆ ಒಂದೊಂದು ಸಾರಿ ಒಳ್ಳೆಯವರು ರಾಜ್ಯ ಅಳುತ್ತಾರೆ.  ಒಂದೊಂದು ಬಾರಿ ರಾಕ್ಷಸರು ರಾಜ್ಯ ಅಳುತ್ತಾರೆ. ರಾಕ್ಷಸರ ರಾಜ್ಯಭಾರ ಈಗ ನಡೆಯುತ್ತಿದೆ. ಶಿವಮೊಗ್ಗ ಪ್ರಕರಣ, ಕೋಲಾರದ ಪ್ರಕರಣ ನೋಡಿದರೆ ಇದು ಗೊತ್ತಾಗುತ್ತಿದೆ. ಕರ್ನಾಟಕದಲ್ಲಿ ಒಳ್ಳೆಯವರ ಆಡಳಿತ ಹೋಗಿ ರಾಕ್ಷಸರ ರಾಜ್ಯ ಆಡಳಿತ ಬಂದಿದೆ. ಕಳೆದ ಭಾನುವಾರ ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಸ
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಾಪ್ ಸಿಂಹ
Updated on

ಮೈಸೂರು: ಟಿಪ್ಪು ಹೈದರಾಲಿ ಕಾಲ ಬಿಟ್ಟರೆ ಒಂದೊಂದು ಸಾರಿ ಒಳ್ಳೆಯವರು ರಾಜ್ಯ ಅಳುತ್ತಾರೆ.  ಒಂದೊಂದು ಬಾರಿ ರಾಕ್ಷಸರು ರಾಜ್ಯ ಅಳುತ್ತಾರೆ. ರಾಕ್ಷಸರ ರಾಜ್ಯಭಾರ ಈಗ ನಡೆಯುತ್ತಿದೆ. ಶಿವಮೊಗ್ಗ ಪ್ರಕರಣ, ಕೋಲಾರದ ಪ್ರಕರಣ ನೋಡಿದರೆ ಇದು ಗೊತ್ತಾಗುತ್ತಿದೆ. ಕರ್ನಾಟಕದಲ್ಲಿ ಒಳ್ಳೆಯವರ ಆಡಳಿತ ಹೋಗಿ ರಾಕ್ಷಸರ ರಾಜ್ಯ ಆಡಳಿತ ಬಂದಿದೆ. ಕಳೆದ ಭಾನುವಾರ ಶಿವಮೊಗ್ಗದಲ್ಲಿ ನಡೆದ ಗಲಭೆಗೆ ಸಿದ್ದರಾಮಯ್ಯನವರೇ ಕಾರಣ ಎಂದು ಆರೋಪಿಸಿದ್ದಾರೆ.

ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ಕಲ್ಲು ಹೊಡೆಯುವ ಸಂಸ್ಕೃತಿ ಹಿಂದೂ ಧರ್ಮದವರಿಗೆ ಗೊತ್ತಿಲ್ಲ. ಸಾಮೂಹಿಕ ಪ್ರಾರ್ಥನೆ ಮಾಡಿ ಒಟ್ಟಾಗಿ ಹೊರಗಡೆ ಬಂದು ಚಾಕು ಚೂರಿ ಹಿಡಿದು ಹಿಂಬಂದಿಯಿಂದ ಚುಚ್ಚುವುದು ಹಿಂದೂ ಸಂಸ್ಕೃತಿ ಅಲ್ಲ. ಚುಕ್ಕಾಣಿ ಹಿಡಿದವರು ಮನಸ್ಥಿತಿಯಂತೆ ಉಳಿದವರು ಇರುತ್ತಾರೆ. ಸಿದ್ದರಾಮಯ್ಯ ಎಲ್ಲಾ ನೋಡಿ ಕಣ್ಮುಂಚಿ ಕುಳಿತಿದ್ದಾರೆ ಎಂದರು.

ಪಿಎಫ್ ಐ, ಕೆಎಫ್ ಡಿ ಮೇಲಿನ ಕೇಸ್ ವಾಪಾಸ್ ಪಡೆದ ಕಾರಣ ಇವತ್ತು ವಿಕೃತಿಗಳು ವಿಜೃಂಭಿಸುತ್ತಿವೆ. ಸಿದ್ದರಾಮಯ್ಯ ಇದಕ್ಕೆ ಕಾರಣ. ಅವರು ಬಿಗಿ ಆಗಿ ಇದ್ದರೆ ಈ ರೀತಿ ಆಗುತ್ತಿರಲಿಲ್ಲ. ಕೆಎಫ್ ಡಿ, ಪಿಎಫ್ ಐ ಸಂಘಟನೆಗಳು ಎದ್ದು ನಿಂತಿವೆ. ಸರಕಾರಕ್ಕೆ ಲಂಗು ಲಾಗಾಮು ಇಲ್ಲ. ಮುಸ್ಲಿಂ ಪುಂಡರು ಎಸ್ಪಿ ಮೇಲೆ ಕಲ್ಲು ತೂರುತ್ತಾರೆ. ಕೋಲಾರದಲ್ಲಿ ದಲಿತ ಸಂಸದರ ಮೇಲೆ ಎಸ್ಪಿ ಹಲ್ಲೆ ಮಾಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕಳೆದ ಬಾರಿ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ರಾಜ್ಯದಲ್ಲಿ ಅನೇಕ ಹಿಂದೂ ಅಧಿಕಾರಿಗಳನ್ನು ಗುರಿಯಾಗಿಸಿ ಕಿರುಕುಳ ನೀಡಲಾಗಿತ್ತು. ಇದರಿಂದ ಕೆಲವು ಪೊಲೀಸ್ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡರು, ಕೆಲವರು ನಿಗೂಢವಾಗಿ ಮೃತಪಟ್ಟರು. ಈ ಬಾರಿ ಅವರು ಬದಲಾಗುತ್ತಾರೆ ಎಂದು ಭಾವಿಸಿದ್ದರೆ ಅದು ತಪ್ಪಾಗಿದೆ ಎಂದರು. 

ಸ್ಟ್ಯಾಲಿನ್ ವಿರುದ್ದ ಮಾತಾಡಲು ಕಾಂಗ್ರೆಸ್ ನ ಎಲ್ಲಾ ನಾಯಕರಿಗೆ ತೊಡೆ ನಡುಗುತ್ತದೆ: ಕಾವೇರಿ ನೀರು ವಿಚಾರ ಕುರಿತು ಮಾತನಾಡಿದ ಸಂಸದ ಪ್ರತಾಪ್ ಸಿಂಹ, ತಮಿಳುನಾಡು ಸಿಎಂ ಸ್ಟ್ಯಾಲಿನ್ ವಿರುದ್ದ ಒಬ್ಬರಾದರೂ ಮಾತಾಡಿದ್ದಾರಾ? ಈ ಸರಕಾರಕ್ಕೆ ಬೆನ್ನು ಮೂಳೆಯೇ ಇಲ್ಲ. ಸ್ಟ್ಯಾಲಿನ್ ಬಗ್ಗೆ ಒಂದು ಹೇಳಿಕೆ ಕೊಡಲಿ ನೋಡೋಣಾ? ಎಂದು ಸವಾಲೆಸೆದರು.

ಸಿದ್ದರಾಮಯ್ಯ ಎದುರಾಳಿಗಳ ಮೇಲೆ ಉಡಾಫೆಯಿಂದ ಕೂಗಾಡುತ್ತಾರೆ ಸ್ಟ್ಯಾಲಿನ್  ಬಗ್ಗೆ ಯಾಕೆ ಧ್ವನಿ ಎತ್ತುತ್ತಿಲ್ಲ. ಸ್ಟ್ಯಾಲಿನ್ ವಿರುದ್ದ ಮಾತಾಡಲು ಕಾಂಗ್ರೆಸ್ ನ ಎಲ್ಲಾ ನಾಯಕರಿಗೆ ತೊಡೆ ನಡುಗುತ್ತದೆ ಎಂದು ವ್ಯಂಗ್ಯವಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com