ಕೊಡಗು: ಶೀಘ್ರದಲ್ಲೇ ಹಾರಂಗಿ ಹಿನ್ನೀರಿನಲ್ಲಿ ಜಲ ಕ್ರೀಡೆ ಆರಂಭ

ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲು ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಶೀಘ್ರದಲ್ಲೇ ಜಲ ಕ್ರೀಡೆ ಆರಂಭಿಸಲಾಗುತ್ತಿದೆ. ಈ ಸಂಬಂಧ ಸರ್ಕಾರ ನಿರ್ವಹಿಸುತ್ತಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳು, ಖಾಸಗಿ...
ಹಾರಂಗಿ ಹಿನ್ನೀರಿನಲ್ಲಿ ಜಲ ಕ್ರೀಡೆ
ಹಾರಂಗಿ ಹಿನ್ನೀರಿನಲ್ಲಿ ಜಲ ಕ್ರೀಡೆ

ಮಡಿಕೇರಿ: ಕೊಡಗಿನ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲು ಹಾರಂಗಿ ಜಲಾಶಯದ ಹಿನ್ನೀರಿನಲ್ಲಿ ಶೀಘ್ರದಲ್ಲೇ ಜಲ ಕ್ರೀಡೆ ಆರಂಭಿಸಲಾಗುತ್ತಿದೆ. ಈ ಸಂಬಂಧ ಸರ್ಕಾರ ನಿರ್ವಹಿಸುತ್ತಿರುವ ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳು, ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ವಿವಿಧ ಜಲಕ್ರೀಡೆ ಚಟುವಟಿಕೆಗಳನ್ನು ಪರಿಚಯಿಸಲು ವ್ಯವಸ್ಥೆಗಳು ಭರದಿಂದ ಸಾಗಿವೆ.

ಹಾರಂಗಿ ಜಲಾಶಯವು ಆನೆ ಶಿಬಿರವನ್ನು ಹೊಂದಿರುವುದರಿಂದ ಸಾವಿರಾರು ಜನ ಅಲ್ಲಿಗೆ ಭೇಟಿ ನೀಡುತ್ತಾರೆ. ಹಿನ್ನೀರಿನ ನೋಟಗಳ ಜೊತೆಗೆ, ಪ್ರವಾಸಿಗರು ಶೀಘ್ರದಲ್ಲೇ ಜೆಟ್ ಸ್ಕಿಸ್ ಮತ್ತು ಮೋಟಾರ್ ಬೋಟ್‌ಗಳಲ್ಲಿ ನೀರಿನಲ್ಲಿ ಸಾಹಸ ಪ್ರದರ್ಶಿಸಬಹುದು. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್‌ಗಳ ಬೆಂಬಲದೊಂದಿಗೆ ರಾಜ್ಯ ಸರ್ಕಾರ ಹಲವಾರು ಜಿಲ್ಲೆಗಳಲ್ಲಿ ಜಲ ಕ್ರೀಡೆಗಳನ್ನು ಪರಿಚಯಿಸುತ್ತಿದ್ದು, ಅದರಂತೆ ಹಾರಂಗಿ ಹಿನ್ನೀರಿನಲ್ಲೂ  ಜಲ ಕ್ರೀಡೆಗಳನ್ನು ಪರಿಚಯಿಸುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.

ಹಾರಂಗಿ ಜಲಾಶಯದ ಪ್ರದೇಶವನ್ನು ರಾಜ್ಯದ ಜಲಸಂಪನ್ಮೂಲ ಇಲಾಖೆ ನಿರ್ವಹಿಸುತ್ತಿದ್ದರೆ, ಅರಣ್ಯ ಪ್ರದೇಶವು ಕೊಡಗಿನ ಅರಣ್ಯ ಇಲಾಖೆಯ ಅಡಿಯಲ್ಲಿ ಬರುತ್ತದೆ.

"ಜಲಕ್ರೀಡೆಯ ಟೆಂಡರ್ ಅನ್ನು ರಾಜ್ಯ ಮಟ್ಟದಲ್ಲಿ ನಡೆಸಲಾಗಿದ್ದು, ಏಸ್ ಪ್ಯಾಡ್ಲರ್ಸ್ ಎಂಬ ಕಂಪನಿಯು ಜಲಕ್ರೀಡೆ ಚಟುವಟಿಕೆಗಳಿಗಾಗಿ ಹಿನ್ನೀರನ್ನು ಅಭಿವೃದ್ಧಿಪಡಿಸುವ ಗುತ್ತಿಗೆ ಪಡೆದುಕೊಂಡಿದೆ. ಮೋಟಾರು ಬೋಟ್ ಮತ್ತು ಜೆಟ್ ಸ್ಕೀಗಳ ಬಂದರಿನ ಸೌಲಭ್ಯಕ್ಕಾಗಿ ನಾವು ಅರಣ್ಯ ಇಲಾಖೆಯ ಅಡಿಯಲ್ಲಿ ಒಂದು ಭಾಗವನ್ನು ಹಸ್ತಾಂತರಿಸಿದ್ದೇವೆ ಎಂದು ಮಡಿಕೇರಿ ಡಿಸಿಎಫ್ ಎಟಿ ಪೂವಯ್ಯ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com