ಹಳದಿ ಮಾರ್ಗ:2 ಮೆಟ್ರೋ ರೈಲು ಕೋಚ್ ತ್ವರಿತ ಪೂರೈಕೆಗೆ ಚೀನಾ ಗುತ್ತಿಗೆದಾರ ಸಂಸ್ಥೆ ಒಪ್ಪಿಗೆ

ಹಳದಿ ಮಾರ್ಗದ 2 ಮೆಟ್ರೋ ರೈಲು ಕೋಚ್ ಗಳ ತ್ವರಿತ ಪೂರೈಕೆ ಮಾಡಲು ಚೀನಾ ಗುತ್ತಿಗೆದಾರ ಸಂಸ್ಥೆಗೆ ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ. 
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)
ನಮ್ಮ ಮೆಟ್ರೋ (ಸಂಗ್ರಹ ಚಿತ್ರ)

ಬೆಂಗಳೂರು: ಹಳದಿ ಮಾರ್ಗದ 2 ಮೆಟ್ರೋ ರೈಲು ಕೋಚ್ ಗಳ ತ್ವರಿತ ಪೂರೈಕೆ ಮಾಡಲು ಚೀನಾ ಗುತ್ತಿಗೆದಾರ ಸಂಸ್ಥೆಗೆ ಸಂಸದ ತೇಜಸ್ವಿ ಸೂರ್ಯ ಒತ್ತಾಯಿಸಿದ್ದಾರೆ. 

ನಮ್ಮ ಮೆಟ್ರೋ ಗೆ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ (ಸಿಆರ್ ಆರ್ ಸಿ) ಕೋಚ್ ಗಳನ್ನು ಪೂರೈಕೆ ಮಾಡುತ್ತಿದ್ದು, ಹಳದಿ ಮಾರ್ಗ ತ್ವರಿತವಾಗಿ ಪೂರ್ಣಗೊಳಿಸಲು 2 ಹೆಚ್ಚುವರಿ ರೈಲು ರೇಕ್ ಗಳಿಗೆ ಕೋಚ್ ಗಳನ್ನು ತ್ವರಿತವಾಗಿ ಪೂರೈಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.

ಇದಕ್ಕೂ ಮುನ್ನ ಸಂಸದರು ಬುಧವಾರ ಅ.04 ರಂದು (ಆರ್ ವಿ ರಸ್ತೆ-ಬೊಮ್ಮಸಂದ್ರಗೆ ಸಂಪರ್ಕ ಕಲ್ಪಿಸುವ) ಹಳದಿ ಮಾರ್ಗದಲ್ಲಿನ ಕಾಮಗಾರಿ ಪರಿಶೀಲನೆ ಮಾಡಿದ್ದರು. ಈ ವೇಳೆ ಮೆಟ್ರೋ ನಲ್ಲಿ ರೋಲಿಂಗ್ ಸ್ಟಾಕ್ ಳ ಪೂರೈಕೆಯಲ್ಲಿನ ಸಮಸ್ಯೆಗಳು ಸಂಸದರ ಗಮನಕ್ಕೆ ಬಂದಿತ್ತು. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಸಂಸದರು ಬಿಎಂಆರ್ ಸಿಎಲ್ ಎಂಡಿ ಅಂಜುಮ್ ಪರ್ವೇಜ್ ಹಾಗೂ ಟಿಟಗರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ಎಂಡಿ ಉಮೇಶ್ ಚೌಧರಿ ಮತ್ತು ಸಿಆರ್‌ಆರ್‌ಸಿ ಅಧಿಕಾರಿಗಳೊಂದಿಗೆ ಗುರುವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು.

ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಸಿಆರ್ ಆರ್ ಮೆಟ್ರೋ ರೈಲುಗಳಿಗೆ ಕೋಚ್ ಗಳನ್ನು ಪೂರೈಕೆ ಮಾಡುತ್ತಿರುವುದನ್ನು ದೃಢಪಡಿಸಿದ್ದು, ನವೆಂಬರ್ ವೇಳೆಗೆ ಬೆಂಗಳೂರಿಗೆ ರವಾನೆಯಾಗಲಿವೆ ಎಂಬ ಮಾಹಿತಿ ನೀಡಿದೆ. ಹೆಚ್ಚುವರಿ ಕೋಚ್ ಗಳನ್ನು ಪೂರೈಕೆ ಮಾಡುವುದಕ್ಕಾಗಿ ಹೆಚ್ಚಿನ ಸಮಯಬೇಕೆಂದು ಸಂಸ್ಥೆ ಸಭೆಯಲ್ಲಿ ಹೇಳಿತ್ತು ಆದರೆ ಸಂಸದರು ನವೆಂಬರ್ ಅಂತ್ಯದ ವೇಳೆಗೆ ಪೂರೈಕೆ ಮಾಡುವಂತೆ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com