ಬೆಳಗಾವಿ: ಸಮಸ್ಯೆ ಆಲಿಸದ ಅಧಿಕಾರಿಗಳು; ಕೇಂದ್ರ ಬರ ಅಧ್ಯಯನ ತಂಡದ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ರೈತ

ಕೇಂದ್ರ ಬರ ಅಧ್ಯಯನ ತಂಡವು ತಮ್ಮ ಸಮಸ್ಯೆ ಆಲಿಸಲಿಲ್ಲ ಎಂದು ಆಪಾದಿಸಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೈಲಹೊಂಗಲ ತಾಲ್ಲೂಕಿನ ಕಲಕುಪ್ಪಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಳಗಾವಿ: ಕೇಂದ್ರ ಬರ ಅಧ್ಯಯನ ತಂಡವು ತಮ್ಮ ಸಮಸ್ಯೆ ಆಲಿಸಲಿಲ್ಲ ಎಂದು ಆಪಾದಿಸಿ ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೈಲಹೊಂಗಲ ತಾಲ್ಲೂಕಿನ ಕಲಕುಪ್ಪಿಯಲ್ಲಿ ಶುಕ್ರವಾರ ಬೆಳಿಗ್ಗೆ ನಡೆಯಿತು.

ಅಧಿಕಾರಿಗಳು ಕಲಕುಪ್ಪಿಯಲ್ಲಿ ಕೆಲವು ರೈತರ ಸಂಕಷ್ಟ ಆಲಿಸಿ, ಸವದತ್ತಿ ತಾಲ್ಲೂಕಿನ ಚಚಡಿಯತ್ತ ಹೊರಟರು. ಈ ವೇಳೆ ರೈತ ಕೀಟನಾಶಕದ ಬಾಟಲಿ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ. ಸ್ಥಳದಲ್ಲಿದ್ದ ಪೊಲೀಸರು ಆತನಿಂದ ಕೀಟನಾಶಕ ಬಾಟಲಿ ಕಸಿದುಕೊಂಡರು.

ನಾನು 40 ಎಕರೆ ಭೂಮಿಯಲ್ಲಿ ಶೇಂಗಾ, ಹುರಳಿ, ಸೋಯಾಬೀನ್ ಬೆಳೆದಿದ್ದೇ‌ನೆ. ಮಳೆ‌ ಕೊರತೆಯಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಆದರೆ ಯಾರೂ ರೈತರ ಕಷ್ಟ ಕೇಳುತ್ತಿಲ್ಲ. ಸರ್ಕಾರ ಯಾವ ಗ್ಯಾರಂಟಿ ನೀಡದ್ದರಿಂದ ಮನನೊಂದು ನಾನು ಆತ್ಮಹತ್ಯೆಗೆ ಯತ್ನಿಸಿದೆ. ಸರ್ಕಾರ ರೈತರ ನೆರವಿಗೆ ಧಾವಿಸಬೇಕು' ಎಂದು ರೈತ ಅಪ್ಪಾಸಾಹೇಬ ಲಕ್ಕುಂಡಿ ಸುದ್ದಿಗಾರರಿಗೆ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com