ಕೇಂದ್ರ ಸರ್ಕಾರಕ್ಕೆ 4,860 ಕೋಟಿ ರೂ. ಬೆಳೆ ಪರಿಹಾರ ಕೇಳಿದ್ದೇವೆ, ಶಿವಮೊಗ್ಗದಲ್ಲಿ ಮುಸ್ಲಿಮರ ಮೆರವಣಿಗೆ ಮೇಲೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ: ಸಿಎಂ ಸಿದ್ದರಾಮಯ್ಯ

ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ರೈತರಿಗೆ ಕೃಷಿ ಕೆಲಸಗಳಿಗೆ, ಜನರಿಗೆ ತೊಂದರೆಯಾಗಿದೆ. ಕಾವೇರಿ ಜಲಾಶಯಗಳಲ್ಲಿ ಕೂಡ ನೀರಿಲ್ಲ, ನಾರಾಯಣಪುರ, ಭದ್ರಾ ಮೇಲ್ದಂಡೆ ಯೋಜನೆ ಬಿಟ್ಟರೆ ಬೇರೆ ಎಲ್ಲಾ ಜಲಾಶಯಗಳಲ್ಲಿಯೂ ನೀರಿನ ಕೊರತೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಶುಕ್ರವಾರ ಚಿತ್ರದುರ್ಗದಲ್ಲಿ ಹೇಳಿದರು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಚಿತ್ರದುರ್ಗ: ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟು ರೈತರಿಗೆ ಕೃಷಿ ಕೆಲಸಗಳಿಗೆ, ಜನರಿಗೆ ತೊಂದರೆಯಾಗಿದೆ. ಕಾವೇರಿ ಜಲಾಶಯಗಳಲ್ಲಿ ಕೂಡ ನೀರಿಲ್ಲ, ನಾರಾಯಣಪುರ, ಭದ್ರಾ ಮೇಲ್ದಂಡೆ ಯೋಜನೆ ಬಿಟ್ಟರೆ ಬೇರೆ ಎಲ್ಲಾ ಜಲಾಶಯಗಳಲ್ಲಿಯೂ ನೀರಿನ ಕೊರತೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಶುಕ್ರವಾರ ಚಿತ್ರದುರ್ಗದಲ್ಲಿ ಹೇಳಿದರು.

ಮಾರ್ಗಸೂಚಿ ಪ್ರಕಾರ ರಾಜ್ಯಕ್ಕೆ 4,860 ಕೋಟಿ ರೂಪಾಯಿ ಪರಿಹಾರ ಧನ ನೀಡಬೇಕೆಂದು ನಾವು ಕೇಂದ್ರ ಸರ್ಕಾರದಿಂದ ಕೇಳಿದ್ದೇವೆ. ಈ ಬಾರಿ ಒಂದು ರೀತಿ ಹಸಿರು ಬರ ರಾಜ್ಯಕ್ಕೆ ಬಂದಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯದ ವಸ್ತುಸ್ಥಿತಿಯನ್ನು ತಿಳಿಸಿದ್ದೇವೆ. ಕೇಂದ್ರದ ಅಧ್ಯಯನ ತಂಡ ಒಂದೊಂದು ತಂಡದಲ್ಲಿ ಮೂವರಂತೆ ರಾಜ್ಯದ 11 ಜಿಲ್ಲೆಗಳಿಗೆ ಹೋಗಿ ಅಧ್ಯಯನ ಮಾಡಲಿದ್ದು, ವಸ್ತುಸ್ಥಿತಿ ನೋಡಿ ತೀರ್ಮಾನ ತೆಗೆದುಕೊಳ್ಳುವಂತೆ ಕೇಳಿಕೊಂಡಿದ್ದೇವೆ ಎಂದರು.

ರಾಜ್ಯದಲ್ಲಿ ಬರ ಅಧ್ಯಯನ ಮಾಡಿ ವರದಿಯನ್ನು ಕೇಂದ್ರ ಸರ್ಕಾರಕ್ಕೆ ನೀಡಲಿದ್ದಾರೆ. ಅದರ ಅಧಾರದ ಮೇಲೆ ಕೇಂದ್ರ ಪರಿಹಾರ ಹಣ ಬಿಡುಗಡೆ ಮಾಡಲಿದೆ. ವಾಸ್ತವಿಕವಾಗಿ ರಾಜ್ಯದಲ್ಲಿ ಈ ವರ್ಷ 30 ಸಾವಿರ ಚಿಲ್ಲರೆ ಕೋಟಿಯಷ್ಟು ಬರದಿಂದ ನಷ್ಟವಾಗಿದೆ. ಆದರೆ ಮಾರ್ಗಸೂಚಿ ಪ್ರಕಾರ 4,860 ಕೋಟಿ ರೂಪಾಯಿ ಕೇಳಿದ್ದೇವೆ. 

ಕಳೆದ ವಾರ ಶಿವಮೊಗ್ಗ ಗಲಭೆ ಬಗ್ಗೆ ಮಾತನಾಡಿದ ಸಿಎಂ, ಶಿವಮೊಗ್ಗದಲ್ಲಿ ಮುಸಲ್ಮಾನರು ಮೆರವಣಿಗೆ ಮಾಡುತ್ತಿದ್ದರು, ಈ ವೇಳೆ ಯಾರೋ ದುಷ್ಕರ್ಮಿಗಳು ಕಲ್ಲೆಸೆದು ಗಲಾಟೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಯಾರು ಕಲ್ಲೆಸೆದಿದ್ದಾರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಸೂಚಿಸಿದೆ. ಬಿಜೆಪಿಯವರು ಯಾವ ಸತ್ಯ ಶೋಧನೆ ಮಾಡುತ್ತಾರಂತೆ ಎಂದು ಚಿತ್ರದುರ್ಗದಲ್ಲಿ ಇಂದು ಮಾತನಾಡುತ್ತಾ ಸಿಎಂ ಪ್ರಶ್ನಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com