ಮೈಸೂರು ದಸರಾ 2023ಕ್ಕೆ ದಿನಗಣನೆ ಆರಂಭ: ಇಂದು ಯುವ ದಸರಾಕ್ಕೆ ಚಾಲನೆ

ವಿಶ್ವವಿಖ್ಯಾತ ಮೈಸೂರು ದಸರಾ 2023ರ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಅದಕ್ಕೆ ಮುನ್ನ ಮುನ್ನುಡಿಯಾಗಿ ಇಂದಿನಿಂದ ಯುವ ದಸರಾ ಕಾರ್ಯಕ್ರಮ ಆರಂಭವಾಗಲಿದೆ. 
ಯುವ ದಸರಾಕ್ಕೆ ಇಂದು ಚಾಲನೆ
ಯುವ ದಸರಾಕ್ಕೆ ಇಂದು ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023ರ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಅದಕ್ಕೆ ಮುನ್ನ ಮುನ್ನುಡಿಯಾಗಿ ಇಂದಿನಿಂದ ಯುವ ದಸರಾ ಕಾರ್ಯಕ್ರಮ ಆರಂಭವಾಗಲಿದೆ. 

ಇಂದು ಸಂಜೆ 5 ಗಂಟೆಗೆ ಮೈಸೂರಿನ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ಯುವ ಸಂಭ್ರಮ ಉದ್ಘಾಟನೆ ನೆರವೇರಲಿದ್ದು, ಇಂದಿನಿಂದ ಅಕ್ಟೋಬರ್​​​ 16ರವರೆಗೆ ಯುವ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ಸಚಿವ ಡಾ. ಹೆಚ್​ಸಿ ಮಹದೇವಪ್ಪ, ನಟರಾದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಉದ್ಘಾಟನೆ ಮಾಡಲಿದ್ದಾರೆ. ಪ್ರತಿದಿನ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ.

ಯುವ ದಸರಾದಲ್ಲಿ ನಾಡಿದ ಪ್ರತಿಭಾವಂತ ಕಲಾವಿದರು ತಮ್ಮ ಪ್ರದರ್ಶನ ನೀಡಿ ಜನರನ್ನು ರಂಜಿಸಲಿದ್ದಾರೆ. ಹಲವು ಸಾಂಸ್ಕೃತಿಕ ಕಾರ್ಯಕ್ರಮನಗಳು ನೆರವೇರುತ್ತವೆ. ದಸರಾ  ಹಬ್ಬ ನವರಾತ್ರಿ ಅವಧಿಯಲ್ಲಿ ಬರುತ್ತದೆ.  10 ದಿನಗಳ ಕಾಲ ದಸರಾ ಆಚರಣೆಗಳು ನಡೆಯುತ್ತವೆ. ಮೈಸೂರು ದಸರಾ ಆಚರಣೆಗಳಿಗೆ ಸಾಕ್ಷಿಯಾಗಲು ಪ್ರತಿವರ್ಷ ಲಕ್ಷಗಟ್ಟಲೆ ಪ್ರವಾಸಿಗರು ದೇಶ ವಿದೇಶಗಳಿಂದ  ಆಗಮಿಸುತ್ತಾರೆ.

ದಸರಾ ಹಬ್ಬದ ಆಕರ್ಷಣೆಗಳು: ಜಂಬೂ ಸವಾರಿ (ಆನೆ ಮೆರವಣಿಗೆ): ದಸರಾದ ಕೊನೆಯ ದಿನದಂದು ನಡೆವ ಜಂಬೂ ಸವಾರಿಯ ಸಂದರ್ಭದಲ್ಲಿ ವಿಶೇಷ ತರಬೇತಿ ಪಡೆದ ಆನೆಗಳು ಚಾಮುಂಡೇಶ್ವರಿಯ ವಿಗ್ರಹವನ್ನು ಅಂಬಾರಿಯಲ್ಲಿಟ್ಟು (750 ಕಿ.ಗ್ರಾಂ ಚಿನ್ನದಿಂದ ಮಾಡಲ್ಪಟ್ಟಿದೆ) ಭವ್ಯ ಮೆರವಣಿಗೆಯಲ್ಲಿ ಸಾಗಿಸುತ್ತವೆ. ಇದು ಮೈಸೂರು ಅರಮನೆಯಿಂದ ಪ್ರಾರಂಭವಾಗಿ ಬನ್ನಿಮಂಟಪದ  ಬಳಿ ಮುಕ್ತಾಯಗೊಳ್ಳುತ್ತದೆ.  ಮೆರವಣಿಗೆಯಲ್ಲಿ ಹಲವಾರು ಸಾಂಸ್ಕೃತಿಕ ಪ್ರದರ್ಶನಗಳೂ ಇರಲಿವೆ.

ಪ್ರದರ್ಶನಗಳು: ಕಲಾಕೃತಿಗಳು, ಕೈಮಗ್ಗ ಮತ್ತು ಇತರ ಸ್ಥಳೀಯ ಸಾಂಪ್ರದಾಯಿಕ ಕರಕುಶಲತೆಯನ್ನು ಪ್ರದರ್ಶಿಸುವ ಹಲವಾರು ಪ್ರದರ್ಶನಗಳನ್ನು ದಸರಾ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ. ಸಂದರ್ಶಕರು ಕರಕುಶಲತೆಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬಹುದು ಮತ್ತು ಅವುಗಳನ್ನು ಸಾಮಾನ್ಯ ಬೆಲೆಗಳಿಗಿಂತ ಅಗ್ಗವಾಗಿ ಖರೀದಿಸಬಹುದು.

ಮೈಸೂರು ಅರಮನೆ ದೀಪಾಲಂಕಾರ: ದಸರಾ ಸಮಯದಲ್ಲಿ ಮೈಸೂರು ಅರಮನೆಯನ್ನು ಲಕ್ಷಕ್ಕೂ ಹೆಚ್ಚು ವಿದ್ಯುತ್ ದೀಪಗಳನ್ನು ಬಳಸಿ ಅಲಂಕರಿಸಲಾಗುವುದು ಮತ್ತು ರಾತ್ರಿಯಲ್ಲಿ ಜಗಮಗಿಸುವ ಮೈಸೂರು ಅರಮನೆಯನ್ನು ದೂರದಿಂದ ನೋಡುವುದಕ್ಕೆ ಎರಡು ಕಣ್ಣು ಸಾಲವು. 

ಇತರ ಕಾರ್ಯಕ್ರಮಗಳು: ದಸರಾ ಹಬ್ಬದ ಸಂದರ್ಭದಲ್ಲಿ ಗಾಳಿಪಟ ಹಾರಾಟ ಸ್ಪರ್ಧೆ, ಮರಳು ಶಿಲ್ಪಕಲಾ ಪ್ರದರ್ಶನ ಮುಂತಾದ ಕಾರ್ಯಕ್ರಮಗಳನ್ನು ಹೆಚ್ಚಾಗಿ ನಡೆಸಲಾಗುತ್ತದೆ.

ಬೃಂದಾವನ ಗಾರ್ಡನ್: ಬೃಂದಾವನ್ ಗಾರ್ಡನ್‌ಗೆ ಭೇಟಿ ನೀಡಿ ಮತ್ತು ಸಂಗೀತ ಕಾರಂಜಿ ಪ್ರದರ್ಶನವನ್ನು ಆನಂದಿಸಬಹುದಾಗಿದೆ. 

ಆಹಾರ, ವಿನೋದ ಮತ್ತು ಹಬ್ಬಗಳು: ಮೋಜಿನ ಆಟಗಳು ಮತ್ತು ಆಹಾರ ಮಳಿಗೆಗಳು ದಸರಾ ಸಮಯದಲ್ಲಿ ಸಂದರ್ಶಕರನ್ನು ರೋಮಾಂಚನಗೊಳಿಸುತ್ತವೆ.

ಮಾರಾಟ ಮಳಿಗೆಗಳು: ಹೆಚ್ಚಿನ ಅಂಗಡಿಯವರು ದಸರಾ ಸಮಯದಲ್ಲಿ ವಿಶೇಷ ರಿಯಾಯಿತಿಯನ್ನು ನೀಡುತ್ತಾರೆ. ಇದು ಶಾಪಿಂಗ್ ಮಾಡಲು ಮತ್ತು ಉಳಿಸಲು ಸೂಕ್ತ ಅವಕಾಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com