ಇದು ಅನಿವಾರ್ಯದ ನೋವು: 40ಕ್ಕೆ ಓಟ ನಿಲ್ಲಿಸಿದ ಕನ್ನಡಿಗರ ಮನೆ ಮಗಳು 'ಮಂಗಳ' ಜನಪ್ರಿಯ ವಾರಪತ್ರಿಕೆ!

40 ವರ್ಷಗಳಿಂದ ಕನ್ನಡಿಗರ ಮನೆ ಮಾತಾಗಿದ್ದ ಮಂಗಳ ವಾರಪತ್ರಿಕೆ  ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ಈ ಸುದ್ದಿಯನ್ನು ಕೇಳುತ್ತಲೇ ನಾಡಿನ ನೂರಾರು ಲೇಖಕರು, ಓದುಗರು ಬೇಸರ ವ್ಯಕ್ತಪಡಿಸಿದ್ದಾರೆ.
ಮುದ್ರಣ ನಿಲ್ಲಿಸಿದ ಮಂಗಳ ವಾರ ಪತ್ರಿಕೆ
ಮುದ್ರಣ ನಿಲ್ಲಿಸಿದ ಮಂಗಳ ವಾರ ಪತ್ರಿಕೆ

ಬೆಂಗಳೂರು: 40 ವರ್ಷಗಳಿಂದ ಕನ್ನಡಿಗರ ಮನೆ ಮಾತಾಗಿದ್ದ ಮಂಗಳ ವಾರಪತ್ರಿಕೆ  ತನ್ನ ಪ್ರಕಟಣೆಯನ್ನು ನಿಲ್ಲಿಸಿದೆ. ಈ ಸುದ್ದಿಯನ್ನು ಕೇಳುತ್ತಲೇ ನಾಡಿನ ನೂರಾರು ಲೇಖಕರು, ಓದುಗರು ಬೇಸರ ವ್ಯಕ್ತಪಡಿಸಿದ್ದಾರೆ.

ಒಂದು ಕಾಲದ ಜನಪ್ರಿಯ ವಾರಪತ್ರಿಕೆ ಲಕ್ಷಾಂತರ ಪ್ರತಿ ಮುದ್ರಣವಾದ ದಿನವೇ ಮನೆಗೆ ಪ್ರವೇಶಿಸುತ್ತಿದ್ದ “ಮಂಗಳ” ತನ್ನ ಕೊನೇ ಪ್ರತಿ ಮುದ್ರಿಸಿದೆ. ಸುಮಾರು 25-30 ವರ್ಷಗಳ ಹಿಂದೆ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲೇ ಈ ಪ್ರತಿ ಲಕ್ಷಕ್ಕೂ ಅಧಿಕ ಮಾರಾಟವಾಗುತ್ತಿದ್ದುದು ಸಣ್ಣ ಮಾತೇನಲ್ಲ.

ಇನ್ನು ಮಂಗಳೂರಿನಲ್ಲಿ ವಾರದಲ್ಲಿ ಸಾವಿರಾರೂ ಪ್ರತಿಗಳು ಮಾರಾಟವಾಗುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ಅತ್ಯಧಿಕ ಪ್ರಸರಣ ಇತ್ತು. ಮಧ್ಯಮ ವರ್ಗದ ಜನರ ಅಭಿರುಚಿಗೆ ಹೇಳಿ ಮಾಡಿಸಿದಂತೆ ಪತ್ರಿಕೆ ರೂಪುಗೊಳ್ಳುತ್ತಿತ್ತು. ಅನೇಕ ಬರಹಗಾರರಿಗೆ ಇದು ಮೊದಲ ಮೆಟ್ಟಿಲಾದ ಪತ್ರಿಕೆ ಎಂದರೆ ಅತಿಶಯೋಕ್ತಿ ಅಲ್ಲ.

ಆದರೆ  ಮುದ್ರಣ ಮಾಧ್ಯಮಗಳ ಓದುಗರು ಕ್ಷೀಣಿಸುತ್ತಿರುವ ಹೊತ್ತಿನಲ್ಲಿ  40 ವರ್ಷ ಪ್ರಕಟಣೆ ಹೊರಡಿಸಿದ್ದ “ಮಂಗಳ”ದ ಕನ್ನಡ ಆವೃತ್ತಿ ಮುದ್ರಣಕ್ಕೆ ಮಂಗಳ ಹಾಡಿದೆ. ಕಳೆದ 14 ವರ್ಷಗಳಿಂದ ಮಂಗಳ ವಾರಪತ್ರಿಕೆಯನ್ನು ಮುನ್ನಡೆಸುತ್ತಿರುವ ಸಂಪಾದಕ ಎನ್ನೇಬಿ ಮೊಗ್ರಾಲ್‌ ಪುತ್ತೂರು ಅವರು ಭಾವುಕ ವಿದಾಯದ ನುಡಿಗಳನ್ನು ಆಡಿದ್ದಾರೆ. ಉಪಸಂಪಾದಕರಾಗಿ ಮಂಗಳ ಯಾತ್ರೆ ಆರಂಭಿಸಿದ ಎನ್ನೇಬಿ ಅವರ ನೆನಪುಗಳ ಮೆರವಣಿಗೆ ಮಂಗಳ ವಾರ ಪತ್ರಿಕೆಯ ಜೈತ್ರ ಯಾತ್ರೆಯ ಹಲವು ಝಲಕ್‌ಗಳನ್ನು ತೋರಿಸುತ್ತದೆ. ಕೊನೆಯ ಮಾತು ಒಂದು ಹನಿ ಕಂಬನಿ ಸುರಿಯುವಂತೆ ಮಾಡುತ್ತದೆ.

“ಇದು ಅನಿವಾರ್ಯದ ನೋವು …ಈ ಕ್ಷಣದ ತಲ್ಲಣಗಳಿಗೆ ಒಡ್ಡಿಕೊಂಡೇ ಮುಂದಡಿ ಇಡಬೇಕಾದ ಪರಿಸ್ಥಿತಿ .ಮಂಗಳದ ಓದುಗರ ಪಾಲಿಗೆ ಇದು ಅನಿರೀಕ್ಷಿತವಿರಬಹುದಾದರೂ ನಮ್ಮ ಪಾಲಿಗೆ ನಿರೀಕ್ಷಿತವೇ .ಸತತ ಬಂದಪ್ಪಳಿಸಿದ ಕೊರೋನಾ ಮಹಾಮಾರಿ ಇಡೀ ಪತ್ರಿಕೋದ್ಯಮಕ್ಕೆ ಕೊಟ್ಟ ಹೊಡೆತ ಎಂಥಾದ್ದು ಎನ್ನುವುದು ಎಲ್ಲರಿಗೂ ಗೊತ್ತಿರುವಂಥಾದ್ದೇ .ಹಾಗಿದ್ದೂ ನಾವು ಮತ್ತೆ ಮೂರು ವರ್ಷ ಸಾಹಸ ಮಾಡುತ್ತಲೇ ಬಂದೆವು .ಆದರೆ ಇದೀಗ ಮಂಗಳವನ್ನು ನಿಲ್ಲಿಸಲೇಬೇಕಾದ ಆರ್ಥಿಕ ತುರ್ತು ಎದುರಾಗಿದೆ .ಕೆಳಗೆ ನೀವು ನೋಡುತ್ತಿರುವುದು , ಕಳೆದ ನಲ್ವತ್ತು ವರ್ಷಗಳಿಂದ ಕನ್ನಡಿಗರ ಮನೆಮಾತಾಗಿದ್ದ ‘ಮಂಗಳ’ ವಾರಪತ್ರಿಕೆಯ ಕೊನೆಯ ಸಂಚಿಕೆ ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com