ನೇರಳೆ ಮಾರ್ಗ ಸಂಪೂರ್ಣ: ಹಳದಿ ಮಾರ್ಗಕ್ಕೆ ಸಹಕಾರ, ಪೂರ್ಣಾವಧಿ ಎಂಡಿ ನೇಮಕಕ್ಕೆ ಸಂಸದ ತೇಜಸ್ವಿ ಸೂರ್ಯ ಮನವಿ

ನಮ್ಮ ಮೆಟ್ರೊ ನೇರಳೆ ಮಾರ್ಗ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಬೆನ್ನಲ್ಲೇ ಹಳದಿ ಮಾರ್ಗದ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರದ ಸಹಕಾರ ಕೋರಿದ್ದಾರೆ.
ಕೇಂದ್ರ ಸಚಿವರೊಂದಿಗೆ ಸಂಸದ ತೇಜಸ್ವಿ ಸೂರ್ಯ
ಕೇಂದ್ರ ಸಚಿವರೊಂದಿಗೆ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ನಮ್ಮ ಮೆಟ್ರೊ ನೇರಳೆ ಮಾರ್ಗ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಬೆನ್ನಲ್ಲೇ ಹಳದಿ ಮಾರ್ಗದ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳ್ಳಲು ಸಂಸದ ತೇಜಸ್ವಿ ಸೂರ್ಯ ಕೇಂದ್ರ ಸರ್ಕಾರದ ಸಹಕಾರ ಕೋರಿದ್ದಾರೆ.

ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಇಂದು ಭೇಟಿ ಮಾಡಿದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನ ಮೆಟ್ರೋ ಯೋಜನೆಗಳಿಗೆ ಸಚಿವರಿಂದ ಆಡಳಿತಾತ್ಮಕ ಬೆಂಬಲ ಕೋರಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ನೇರಳೆ ಮಾರ್ಗದಲ್ಲಿನ ನಿಲ್ದಾಣಗಳನ್ನು ಸಂಚಾರ ಮುಕ್ತವಾಗಿಸಿರುವುದು ಸಂಭ್ರಮಿಸಬೇಕಾದ ಸಮಯ ಆದರೆ ಹಳದಿ ಮಾರ್ಗಕ್ಕೆ ಸಂಬಂಧಿಸಿದಂತೆ ವಿಶ್ರಮಿಸುವಂತಿಲ್ಲ. ಇಂದು ನಾನು ಕೇಂದ್ರ ನಗರಾಭಿವೃದ್ಧಿ ಹಾಗೂ ವಸತಿ ಸಚಿವ ಹರ್ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿ, ಸಿಸಿಆರ್ ಇಂಜಿನಿಯರ್ ಗಳಿಗೆ ಭಾರತಕ್ಕೆ ಭೇಟಿ ನೀಡಿ ಹಳದಿ ಮಾರ್ಗದ ಮೆಟ್ರೋ ಕೋಚ್ ಗಳ ಮಾದರಿಯನ್ನು ಅಂತಿಮಗೊಳಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ವೀಸಾ ನೆರವು ಒದಗಿಸಬೇಕೆಂದು ಹಾಗೂ ಬಿಎಂಆರ್ ಸಿಎಲ್ ಗೆ ಪೂರ್ಣಾವಧಿ ಎಂಡಿ ನೇಮಕ ಮಾಡುವಂತೆಯೂ ಮನವಿ ಮಾಡಿದೆ. ನೇರಳೆ ಮಾರ್ಗ ಇಂದಿನಿಂದ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ಧನ್ಯವಾದ ತಿಳಿಸಲು ಸಚಿವರಿಗೆ ಮೈಸೂರು ಪಾಕ್ ಉಡುಗೊರೆಯಾಗಿ ನೀಡಿದೆ ಎಂದು ಸಂಸದರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com