ನಮ್ಮ ಮೆಟ್ರೋ: ಎರಡು ನೇರಳೆ ಹೊಸ ಮಾರ್ಗಗಳ ಕಾರ್ಯಾರಂಭ; ಪ್ರಯಾಣಿಕರು ಫುಲ್ ಖುಷ್!

ಬೆಂಗಳೂರು ಮೆಟ್ರೋದ ನೇರಳೆ ಮಾರ್ಗ ಸೋಮವಾರದಿಂದ ಕಾರ್ಯಾರಂಭ ಮಾಡಿದ ನಂತರ ಮೆಟ್ರೋ ಪ್ರಯಾಣಿಕರು ಹರ್ಷಗೊಂಡಿದ್ದಾರೆ ಮತ್ತು ನಿರಾಳರಾಗಿದ್ದಾರೆ.
ನಮ್ಮ ಮೆಟ್ರೋ ಸಂಚಾರ ಆರಂಭ
ನಮ್ಮ ಮೆಟ್ರೋ ಸಂಚಾರ ಆರಂಭ

ಬೆಂಗಳೂರು: ಬೆಂಗಳೂರು ಮೆಟ್ರೋದ ನೇರಳೆ ಮಾರ್ಗ ಸೋಮವಾರದಿಂದ ಕಾರ್ಯಾರಂಭ ಮಾಡಿದ ನಂತರ ಮೆಟ್ರೋ ಪ್ರಯಾಣಿಕರು ಹರ್ಷಗೊಂಡಿದ್ದಾರೆ ಮತ್ತು ನಿರಾಳರಾಗಿದ್ದಾರೆ.

ಚೊಚ್ಚಲ ಮೆಟ್ರೋ ರೈಲು ಬೆಳಿಗ್ಗೆ 5 ಗಂಟೆಗೆ ವೈಟ್‌ಫೀಲ್ಡ್ ಕಾಡುಗೋಡಿಯಿಂದ ಚಲ್ಲಘಟ್ಟದವರೆಗೆ ಬೆಂಗಳೂರು ಮೆಟ್ರೋದ ನೇರಳೆ ಮಾರ್ಗದಲ್ಲಿ ಹೊರಟಿತು. ಈ 43.49-ಕಿಮೀ ಉದ್ದದ ಮೊದಲ ಸಂಚಾರವು 93 ನಿಮಿಷಗಳಲ್ಲಿ 37 ನಿಲ್ದಾಣಗಳನ್ನು ತಲುಪುತ್ತದೆ.

ಕೆ ಆರ್ ಪುರ-ಬೈಯಪ್ಪನಹಳ್ಳಿ ಮತ್ತು ಕೆಂಗೇರಿ-ಚಲ್ಲಘಟ್ಟ ಎರಡು ಮಾರ್ಗಗಳಲ್ಲಿ ಇಂದು ಬೆಳಗ್ಗೆಯಿಂದಲೇ ಮೆಟ್ರೋ ಸಂಚಾರ ಶುರುವಾಗಿದೆ. ಇದರಿಂದಾಗಿ ವೈಟ್​ಫೀಲ್ಡ್-ಚಲ್ಲಘಟ್ಟದವರೆಗೆ ಪ್ರಯಾಣಿಕರು ಯಾವುದೇ ಮಾರ್ಗ ಬದಲಾವಣೆ ಇಲ್ಲದೇ ಒಂದೇ ರೈಲಿನಲ್ಲಿ ಸಂಚರಿಸಬಹುದಾಗಿದೆ. ಈ ಮೂಲಕ ನಮ್ಮ ಮೆಟ್ರೋ ಸೇವೆಯ ವ್ಯಾಪ್ತಿ ಹೆಚ್ಚಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಪೂರ್ವ ಪಶ್ಚಿಮ ಕಾರಿಡಾರ್‌ನ ಎರಡು ಹೊಸ ವಿಸ್ತರಣೆಗಳು, ಬೈಯಪ್ಪನಹಳ್ಳಿ ಮತ್ತು ಕೆಆರ್ ಪುರ ನಡುವೆ 2.1 ಕಿಮೀ ಮತ್ತು ಚಲ್ಲಘಟ್ಟ ಮತ್ತು ಕೆಂಗೇರಿ ನಡುವೆ ಇಂದು ಕಾರ್ಯಾರಂಭ ಮಾಡಿದೆ. ಬೆನ್ನಿಗಾನಹಳ್ಳಿ ಮತ್ತು ಚಲ್ಲಘಟ್ಟ ಎಂಬ ಎರಡು ಹೊಸ ನಿಲ್ದಾಣಗಳನ್ನು ಇಂದು ತೆರೆಯಲಾಗಿದೆ.

ಮೊದಲ ರೈಲು ಹತ್ತುವ ಸಲುವಾಗಿ ರಾತ್ರಿಯಿಡೀ ನಿದ್ದೆಯಿಲ್ಲದೆ ಪ್ರಯಾಣಿಕರು ಕಾಯುತ್ತಿದ್ದರು. ಪೂರ್ವ-ಪಶ್ಚಿಮ ಕಾರಿಡಾರ್‌ನ ಎರಡೂ ತುದಿಗಳಲ್ಲಿ ಹತ್ತಿದ ಸಾರ್ವಜನಿಕರನ್ನು ದಿ ನ್ಯೂ ಇಂಡಿಯನ್ ಎರ್ಸ್ ಪ್ರೆಸ್ ಭೇಟಿ ಮಾಡಿತು.

ಮಲ್ಲೇಶ್ವರಂನಲ್ಲಿರುವ ತಮ್ಮ ನೆಚ್ಚಿನ ಕಾಶಿ ಮಠಕ್ಕೆ ಸುಲಭವಾಗಿ ಭೇಟಿ ನೀಡಬಹುದು. ಇತ್ತೀಚೆಗೆ ನಾನು 20 ಕ್ಕೂ ಹೆಚ್ಚು ಬಾರಿ ಅಲ್ಲಿಗೆ ಹೋಗಿದ್ದೇನೆ. ನಾನು ಫೀಡರ್ ಬಸ್ ಮತ್ತು ರೈಲಿನಲ್ಲಿ ಹೋಗುತ್ತಿದ್ದೆ ತುಂಬಾ ಸಮಸ್ಯೆಯಾಗುತ್ತಿತ್ತು. ಈಗ ನನಗೆ ಇದು ನಿಜವಾಗಿಯೂ ಸುಲಭವಾಗುತ್ತದೆ. ಬೆನ್ನಿಗಾನಹಳ್ಳಿಯ ಓಪನ್ ವೆಬ್ ಗಿರ್ಡರ್ ಮೇಲೆ ಹೋಗುವುದು ತುಂಬಾ ರೋಮಾಂಚನಕಾರಿ ಅನುಭವ." ಸಾಮಾಜಿಕ ಮಾಧ್ಯಮಗಳ ಶಕ್ತಿಯೇ ಈ ಸಾಲಿನ ಕಾರ್ಯಚಟುವಟಿಕೆಗಳನ್ನು ಶೀಘ್ರವಾಗಿ ಆರಂಭಿಸುವಂತೆ ಮಾಡಿದೆ ಎಂದು ಒರಾಕಲ್‌ನಲ್ಲಿ ಸಾಫ್ಟ್‌ವೇರ್ ಡೆವಲಪ್‌ಮೆಂಟ್ ಮ್ಯಾನೇಜರ್ ಆಗಿರುವ ಶ್ರೀಜಿತ್ ಎಸ್.ಪೈ ಎಂಬುವರು ಹರ್ಷ ವ್ಯಕ್ತ ಪಡಿಸಿದ್ದಾರೆ.

ಮೊದಲು ವೈಟ್‌ಫೀಲ್ಡ್ ಕಾಡುಗೋಡಿಯಿಂದ ಇಂದಿರಾನಗರ ಮೆಟ್ರೋ ಸ್ಟೇಷನ್ ಗೆ ಹೋಗುತ್ತಿದ್ದೆವು, ಈಗ ನಾವು ತುಂಬಾ ಸಂತೋಷವಾಗಿದ್ದೇವೆ. ನಾವು ಇಂದಿರಾ ನಗರದಲ್ಲಿ ಕಾಫಿ ಕುಡಿದು ಹಿಂತಿರುಗುತ್ತೇವೆ. ಈ ದಿನಕ್ಕಾಗಿ ಆರು ವರ್ಷಗಳಿಂದ ಕಾದಿದ್ದೇವು ಎಂದು ಎನ್ ಭಾಗ್ಯ ಮತ್ತು ಕೆ ಆರ್ ಶ್ರೀನಿವಾಸ್ ದಂಪತಿ ಸಂತೋಷ ವ್ಯಕ್ತ ಪಡಿಸಿದ್ದಾರೆ.

ಚಲ್ಲಘಟ್ಟದಲ್ಲಿ ಇಳಿದವರು ಹೆಚ್ಚಾಗಿ ಸುತ್ತಮುತ್ತಲಿನ ಹಲವಾರು ಶಿಕ್ಷಣ ಸಂಸ್ಥೆಗಳ ಕಾಲೇಜು ವಿದ್ಯಾರ್ಥಿಗಳು. ಹೆಚ್ಚಿನವರು ರೈಲು ಹತ್ತಲು ಸುಮಾರು 2 ಕಿ.ಮೀ ದೂರದಲ್ಲಿರುವ ಕೆಂಗೇರಿ ಮೆಟ್ರೋ ನಿಲ್ದಾಣದವರೆಗೆ ಆಟೋದಲ್ಲಿ ಹೋಗುತ್ತಿದ್ದರು. ಹೊಸ ಮೆಟ್ರೋ ನಿಲ್ದಾಣವು  ನಡೆದುಕೊಂಡೇ ತಲುಪುಬಹುದಾದ ದೂರದಲ್ಲಿದೆ ಹೀಗಾಗಿ ತಮಗೆ ಸುಲಭವಾಗಿದೆ ಎಂದು ಅನೇಕ ವಿದ್ಯಾರ್ಥಿಗಳು ಅಭಿಪ್ರಾಯ ಪಟ್ಟಿದ್ದಾರೆ.

ವಿಜಯನಗರದಿಂದ ಕೆಂಗೇರಿಗೆ ಕ್ಯಾಬ್‌ನಲ್ಲಿ 80 ರೂಪಾಯಿ ಖರ್ಚು ಮಾಡಿ ನಂತರ ಬಸ್‌ನಲ್ಲಿ ಹೋಗುತ್ತಿದ್ದ ನಾನು ಇಂದು ಕೇವಲ 26 ರೂಪಾಯಿ ಖರ್ಚು ಮಾಡಿ ತುಂಬಾ ಆರಾಮದಾಯಕವಾಗಿ ಪ್ರಯಾಣಿಸಿದೆ ಎಂದು ರಾಜರಾಜೇಶ್ವರಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿ ಎಸ್.ಎಂ.ಲಕ್ಷ್ಮಿ ಹೇಳಿದರು.

ಬೆಂಗಳೂರಿನ ವೈಟ್‌ ಫೀಲ್ಡ್‌ ಭಾಗದಲ್ಲಿ ಸಾಕಷ್ಟು ಟೆಕ್‌ ಪಾರ್ಕ್‌ಗಳು ನೆಲೆಗೊಂಡಿವೆ. ನೇರಳೆ ಮಾರ್ಗದ ಆರಂಭದಿಂದ ಈ ಭಾಗದ ಸಂಪರ್ಕ ಸುಧಾರಣೆಗೊಂಡು ಅಭಿವೃದ್ದಿ ಇನ್ನಷ್ಟು ಆಗಬಹುದು ಎನ್ನುವ ನಿರೀಕ್ಷೆಯೂ ಇದೆ. ಸದ್ಯ ಇರುವ 6.2 ಲಕ್ಷ ಮೆಟ್ರೋ ಪ್ರಯಾಣಿಕರ ಸಂಖ್ಯೆಯು 7 ಲಕ್ಷಕ್ಕೆ ಏರಿಕೆಯಾಗಲಿದೆ ಎಂದು  ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com