ಆನೇಕಲ್, ಅತ್ತಿಬೆಲೆ, 110 ಗ್ರಾಮಗಳಿಗೆ ಕಾವೇರಿ ನೀರು ಪೂರೈಕೆ: ಡಿ.ಕೆ.ಶಿವಕುಮಾರ್

ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ಆನೇಕಲ್, ಅತ್ತಿಬೆಲೆ ಹಾಗೂ 110 ಗ್ರಾಮಗಳಿಗೆ ಕುಡಿಯಲು ಕಾವೇರಿ ನೀರು ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್
Updated on

ಬೆಂಗಳೂರು: ಕಾವೇರಿ 5ನೇ ಹಂತದ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ವ್ಯಾಪ್ತಿಯ ಆನೇಕಲ್, ಅತ್ತಿಬೆಲೆ ಹಾಗೂ 110 ಗ್ರಾಮಗಳಿಗೆ ಕುಡಿಯಲು ಕಾವೇರಿ ನೀರು ಒದಗಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ನಿನ್ನೆ ಸೋಮವಾರ ನಡೆದ ಬ್ರಾಂಡ್ ಬೆಂಗಳೂರು ಸಮ್ಮೇಳನದಲ್ಲಿ  ಮಾತನಾಡಿದ ಶಿವಕುಮಾರ್, ಕಾವೇರಿ ಹಂತ-5 ರಿಂದ 750 ಎಂಎಲ್‌ಡಿ ನೀರು ಸರಬರಾಜು ಮಾಡಲಾಗುವುದು. ಇದಲ್ಲದೆ, 20 ಒಳಚರಂಡಿ ಸಂಸ್ಕರಣಾ ಘಟಕಗಳನ್ನು (STP) ನವೀಕರಿಸಲಾಗುತ್ತಿದೆ. ನೀರನ್ನು ಸಂಸ್ಕರಿಸಲು ಡಿಸ್ಕ್ ಮೆಂಬರೇನ್ ಫಿಲ್ಟರ್‌ಗಳನ್ನು ಸೇರಿಸಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಬಗ್ಗೆ ಮಾತನಾಡಿದ ಸಚಿವರು, ಇದಕ್ಕೆ ಮೂರು ಪರಿಹಾರಗಳಿವೆ - ಫ್ಲೈಓವರ್, ಮೆಟ್ರೋ ಮತ್ತು ಸುರಂಗ ರಸ್ತೆ - ಆದರೆ ಇವೆಲ್ಲ ತುಂಬಾ ದುಬಾರಿಯಾಗಿದೆ. ವಾಹನಗಳ ಮುಕ್ತ ಸಂಚಾರಕ್ಕೆ ಅನುಕೂಲವಾಗುವಂತೆ ಅತಿಕ್ರಮಣಗಳನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಮುಕ್ತ ಹಸ್ತವನ್ನು ನೀಡಲಾಗಿದೆ. ಪ್ರವಾಹದ ಸಮಸ್ಯೆಯನ್ನು ಸಹ ಪರಿಹರಿಸಲಾಗಿದೆ. ಸಂಚಾರಿ ಪೊಲೀಸರು ಬೆಳಗಿನ ಹೊತ್ತು ಸಂಚಾರ ದಟ್ಟಣೆಯನ್ನು ತಗ್ಗಿಸಲು ನಗರದಲ್ಲಿ ಶಾಲೆ ಮತ್ತು ಕಚೇರಿಯ ಸಮಯವನ್ನು ಬದಲಾಯಿಸುವ ಬಗ್ಗೆ ಚರ್ಚಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಪ್ರತಿ ವರ್ಷ 2-3 ಲಕ್ಷ ಜನರು ಬೆಂಗಳೂರಿಗೆ ವಲಸೆ ಹೋಗುತ್ತಿದ್ದಾರೆ. ಪ್ರಸ್ತುತ ನಗರದಲ್ಲಿ 1.48 ಕೋಟಿ ಜನರು ವಾಸಿಸುತ್ತಿದ್ದಾರೆ. ಹೆಚ್ಚುತ್ತಿರುವ ವಿದ್ಯುತ್ ಸಂಪರ್ಕಗಳ ಆಧಾರದ ಮೇಲೆ ಅಂದಾಜುಗಳು ಲಭ್ಯವಿವೆ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ, ಸಂಚಾರ ದಟ್ಟಣೆ ಸೇರಿದಂತೆ ಸಮಸ್ಯೆಗಳು ಹೆಚ್ಚುತ್ತಿವೆ. ಈ ಸಮಸ್ಯೆಗಳನ್ನು ಯೋಜಿಸಲು ಮತ್ತು ಪರಿಹರಿಸಲು ಎಂಟು ವಿಭಿನ್ನ ತಂಡಗಳನ್ನು ರಚಿಸಲಾಗಿದೆ. ಅವರ ವರದಿಯನ್ನು ಆಧರಿಸಿ ಯೋಜನೆಯನ್ನು ರೂಪಿಸಲಾಗುವುದು ಎಂದರು. 

ಎಲ್ಲಾ ಕಾಮಗಾರಿಗಳ ವಿವರಗಳನ್ನು ಪಡೆಯಲು ಪ್ರತಿ ರಸ್ತೆಯಲ್ಲಿ ಕ್ಯೂಆರ್ ಕೋಡ್‌ಗಳನ್ನು ಪ್ರದರ್ಶಿಸಲಾಗುವುದು. ಇದು ಪಾರದರ್ಶಕತೆಯನ್ನು ತರುತ್ತದೆ, ಸಾರ್ವಜನಿಕ ಹಣವನ್ನು ಉಳಿಸುತ್ತದೆ. ಕ್ಯೂಆರ್ ಕೋಡ್‌ನ ಕಲ್ಪನೆಯು ರಸ್ತೆ, ಕಾಮಗಾರಿಗಳು ಮತ್ತು ಅಧಿಕಾರಿಗಳಿಂದ ಬಿಡುಗಡೆಯಾದ ಹಣದ ವಿವರಗಳೊಂದಿಗೆ ಜನರನ್ನು ಸಬಲೀಕರಣಗೊಳಿಸುವುದು ಎಂದು ಡಿ ಕೆ ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com