
ಬೆಂಗಳೂರು: ಗುತ್ತಿಗೆದಾರರ ಶೇಕಡಾ 60ರಿಂದ 70ರಷ್ಟು ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ. ತನಿಖೆ ಪೆಂಡಿಂಗ್ ಇದ್ದರೂ ಬಿಲ್ ಬಿಡುಗಡೆಗೆ ಆದೇಶ ಮಾಡಿದ್ದೇವೆ. ಗುತ್ತಿಗೆದಾರರಿಗೆ ಸಹಾಯ ಆಗಬೇಕು ಎಂದು ಆದೇಶ ನೀಡಿದ್ದೇವೆ. ಹಿರಿತನ ಆಧಾರದ ಮೇಲೆ ಬಿಲ್ ಬಿಡುಗಡೆ ಮಾಡಿದ್ದೇವೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಗಾಬರಿಪಡುವ ಅಗತ್ಯವಿಲ್ಲ. ಗುತ್ತಿಗೆದಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಿಚಾರಣೆ ಬಾಕಿ ಇದ್ದರೂ ಶೇಕಡಾ.60-70ರಷ್ಟು ಬಿಲ್ ಇತ್ತು, ಅದನ್ನೆಲ್ಲಾ ರಿಲೀಸ್ ಮಾಡಿದ್ದೀವಿ. ಆದ್ಯತೆ ಮೇಲೆ ಬಿಲ್ ಕೊಟ್ಟಿದ್ದೇವೆ, ಕೆಂಪಣ್ಣ ಅವರು ಭಯಪಡುವ ಅವಶ್ಯಕತೆ ಇಲ್ಲ. ಏನೇ ಸಮಸ್ಯೆ ಇದ್ದರೂ ಬಂದು ಹೇಳಲಿ, ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ಗುತ್ತಿಗೆದಾರರ ಬಾಕಿ ಬಿಲ್ ಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಅದರೆ ರಾಜ್ಯ ಸರ್ಕಾರ ಇದುವರೆಗೆ ಪಾವತಿ ಮಾಡಿಲ್ಲ. ಹಳೆ ಸಮಸ್ಯೆಗಳ ಜೊತೆ ಹೊಸ ಸಮಸ್ಯೆ ಸಹ ಸೇರ್ಪಡೆಯಾಗಿದೆ. ರಾಜ್ಯ ಸರ್ಕಾರದಿಂದ ಇನ್ನೂ 20 ಸಾವಿರ ಕೋಟಿ ಬಾಕಿ ಬರಬೇಕಿದೆ. ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳಿಂದ ಬಾಕಿ ಬರಬೇಕಿದೆ ಎಂದು ಇಂದು ಸುದ್ದಿಗೋಷ್ಠಿಯಲ್ಲಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಿಸಿದ್ದರು.
Advertisement