'ಒಕ್ಕಲುತನ ಸಮುದಾಯದ ಅಣಕಮಾಡಿ, ತೆವಲು ತೀರಿಸಿಕೊಂಡು ನಿಮ್ಮ ತಪ್ಪನ್ನು ಕುವೆಂಪು ಮೇಲೆ ಹಾಕಿ ಪಲಾಯನವೇಕೆ?'

ಬಡವ ಶ್ರೀಮಂತ ರೇಖೆ ಅಳಿಸಿ ಬದುಕುವ ಕಲೆ ಕಲಿಸಲು ಹೋರಾಡಿ! ಯಾವುದು ಇದು ಪ್ರಚಾರ ತೆವಲಿನ ಹೋರಾಟ! ದಿಕ್ಕಾರವಿರಲಿ ನಿಮ್ಮ ಗುಣಕ್ಕೆ.! ಎಂದು ಜಗ್ಗೆಶ್ ತಮ್ಮ ಟ್ವಿಟ್ಟರ್ ನಲ್ಲಿ ಹರಿಹಾಯ್ದಿದ್ದಾರೆ.
ಕೆ.ಎಸ್ ಭಗವಾನ್
ಕೆ.ಎಸ್ ಭಗವಾನ್
Updated on

ಬೆಂಗಳೂರು: ಮೈಸೂರಿನಲ್ಲಿ ನಡೆದ ಮಹಿಷ ದಸರಾದಲ್ಲಿ  ಒಕ್ಕಲಿಗರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿದ ಪ್ರೊ. ಕೆ ಎಸ್ ಭಗವಾನ್ ವಿರುದ್ಧ ರಾಜ್ಯ ಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ವಾಗ್ದಾಳಿ ನಡೆಸಿದ್ದಾರೆ. ಈ ಸಂಬಂಧ  ಟ್ವೀಟ್ ಮಾಡಿರುವ ಅವರು, ನಿಮ್ಮ ಪ್ರಚಾರದ ತೆವಲಿಗೆ ನನ್ನ ಧಿಕ್ಕಾರ ಎಂದಿದ್ದಾರೆ.

ಸನ್ಮಾನ್ಯ ಭಗವಾನರೆ ಸಾಧ್ಯವಾದರೆ ಬಡತನ ನಿರ್ಮೂಲನೆ ಹೋರಾಡಿ! ಜಾತಿಯತೆ ದೂರಮಾಡಿ ಸಾಮರಸ್ಯಕ್ಕೆ ಹೋರಾಡಿ! ದೇಶ ಮೊದಲು ಜಾತಿ ನಂತರ ಎಂದು ಹೋರಾಡಿ! ಎಲ್ಲಾ ಮಕ್ಕಳಿಗು ಸಮಾನ ವಿಧ್ಯೆ ಸಿಗಲಿ ಎಂದು ಹೋರಾಡಿ! ಬಡವ ಶ್ರೀಮಂತ ರೇಖೆ ಅಳಿಸಿ ಬದುಕುವ ಕಲೆ ಕಲಿಸಲು ಹೋರಾಡಿ! ಯಾವುದು ಇದು ಪ್ರಚಾರ ತೆವಲಿನ ಹೋರಾಟ! ದಿಕ್ಕಾರವಿರಲಿ ನಿಮ್ಮ ಗುಣಕ್ಕೆ.! ಎಂದು ಜಗ್ಗೆಶ್ ತಮ್ಮ ಟ್ವಿಟ್ಟರ್ ನಲ್ಲಿ ಹರಿಹಾಯ್ದಿದ್ದಾರೆ.

ಸನ್ಮಾನ್ಯ ಭಗವಾನ ರವರೆ ನೀವು ವಿಧ್ಯಾವಂತರ?ನೀವು ಜ್ನಾನಿಗಳ?ನೀವು ಹಿರಿಯರಾ? ನೀವು ಸಮಾಜ ಸುಧಾರಕರ? "ಒಕ್ಕಲುತನ ಸಮುದಾಯದ ಅಣಕಮಾಡಿ ಯಾಕೆ ಕುವೆಂಪು ರವರ ಮೇಲೆ ಹಾಕಿ ತೆವಲು ತೀರಿಸಿಕೊಂಡು ಪಲಾಯನ ಮಾಡಿದಿರಿ" ಕರ್ನಾಟಕ ಆರಕ್ಷಕ ಇಲಾಖೆ ಯಾಕಿ ಮೌನ?  ಡಿಕೆ ಶಿವಕುಮಾರ್ ಅವರೆ ಯಾಕೆ ಮೌನ?  ಸಮಾಜ ಸ್ವಾಸ್ಥ ಕೆಡಿಸುವವರ ಮೇಲೆ ಕ್ರಮ ಜರುಗಿಸಿ ಆರಕ್ಷಕ ಮಹನೀಯರೆ..! ಎಂದು ತಪರಾಕಿ ಹಾಕಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com