ವರ್ತೂರು ಕೆರೆಯಲ್ಲಿ ‘ವಾಟರ್ ಟ್ಯಾಂಕರ್ ಮಾಫಿಯಾ: ಕೆರೆ ಸಂರಕ್ಷಣಾ ಕಾರ್ಯಕರ್ತರ ಆರೋಪ

ಇತ್ತೀಚೆಗೆ ವರ್ತೂರು ಕೆರೆಗೆ ಸೇರುವ ಕೊಳಚೆ ನೀರನ್ನು ಬೇರೆಡೆಗೆ ಹರಿಯಲು ಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಬೋರ್‌ವೆಲ್ ಹಾಗೂ ಟ್ಯಾಂಕರ್ ನೀರು ಪೂರೈಕೆದಾರರ ಕೈವಾಡ ಇರುವ ಸಾಧ್ಯತೆ ಇರಬಹುದು ಎಂದು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.
ವರ್ತೂರು ಕೆರೆ(ಸಾಂದರ್ಭಿಕ ಚಿತ್ರ)
ವರ್ತೂರು ಕೆರೆ(ಸಾಂದರ್ಭಿಕ ಚಿತ್ರ)

ಬೆಂಗಳೂರು: ಇತ್ತೀಚೆಗೆ ವರ್ತೂರು ಕೆರೆಗೆ ಸೇರುವ ಕೊಳಚೆ ನೀರನ್ನು ವರ್ತೂರು ಗ್ರಾಮಕ್ಕೆ ಹರಿಯಲು ಬಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಬೋರ್‌ವೆಲ್ ಹಾಗೂ ಟ್ಯಾಂಕರ್ ನೀರು ಪೂರೈಕೆದಾರರ ಕೈವಾಡ ಇರುವ ಸಾಧ್ಯತೆ ಇರಬಹುದು ಎಂದು ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಸಾಕಷ್ಟು ಬೋರ್‌ವೆಲ್‌ಗಳು ಬತ್ತಿ ಹೋಗಿವೆ, ಇದರಿಂದ ಟ್ಯಾಂಕರ್ ಪೂರೈಕೆದಾರರಿಗೆ ತೊಂದರೆಯಾಗುತ್ತಿದೆ, ಇಡೀ ಘಟನೆಯಲ್ಲಿ ಕೆಲವು ಟ್ಯಾಂಕರ್ ನೀರು ಸರಬರಾಜುದಾರರ ಕೈವಾಡವಿದೆ ಎಂದು ಆರೋಪಿಸಿದ್ದಾರೆ. ವರ್ತೂರು ಕೆರೆಗೆ ಹೋಗುವ ಕೊಳಚೆ ನೀರನ್ನು ಬೇರೆಡೆ ಡೈವರ್ಟ್ ಮಾಡಿ ಅಲ್ಲಿ ಕೊಳಚೆ ನೀರು ಹರಿಯುವಂತೆ ಮಾಡುವುದರಿಂದ, ಆ ಪ್ರದೇಶದ ತೇವಾಂಶದಿಂದ ಕೂಡಿ ನೀರು  ಬೋರ್‌ವೆಲ್‌ಗಳಿಗೆ ಇಳಿಯುತ್ತದೆ. ಇದರಿಂದ ಅವರು ಸುಲಭವಾಗಿ  ಬೋರ್ ವೆಲ್ ನಿಂದ ತಮ್ಮ ಟ್ಯಾಂಕರ್‌ಗಳನ್ನು ತುಂಬಿಸಬಹುದು ಎಂದು ವರ್ತೂರು ನಿವಾಸಿ ಜಗದೀಶ್ ರೆಡ್ಡಿ ಎಂಬುವರು ಆರೋಪಿಸಿದ್ದಾರೆ.

ಬೆಳ್ಳಂದೂರು ಮತ್ತು ಸುತ್ತಮುತ್ತ ವಿಶೇಷವಾಗಿ ಬಳಗೆರೆ ಗ್ರಾಮದಲ್ಲಿ ಟ್ಯಾಂಕರ್ ಪೂರೈಕೆದಾರರು ಮತ್ತು ಬೋರ್‌ವೆಲ್ ಕೊರೆಸುವ ದೊಡ್ಡ ವ್ಯಾಪಾರ ನಡೆಯುತ್ತಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಸಮಸ್ಯೆಗಳನ್ನು ಗಮನಿಸಬೇಕು ಎಂದು ಮಹದೇವಪುರ ಘಟಕದ ಎಎಪಿ ಅಧ್ಯಕ್ಷ ಅಶೋಕ್ ಮೃತ್ಯುಂಜಯ ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾತನಾಡಲು  ಕೆಲವು ನಿವಾಸಿಗಳು ಹೆದರುತ್ತಾರೆ, ಆದರೆ ಮಹದೇವಪುರದಲ್ಲಿ ನೀರಿನ ಟ್ಯಾಂಕರ್ 'ಮಾಫಿಯಾ'ದಿಂದಾಗಿ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಫೋನ್ ಕರೆ ಮಾಡಿ ಅನಾಮಧೇಯವಾಗಿ ದೂರುಗಳನ್ನು ಸಲ್ಲಿಸುತ್ತಾರೆ, ಅವರ ವಿವರಗಳನ್ನು ಬಹಿರಂಗಪಡಿಸದಂತೆ ವಿನಂತಿಸುತ್ತಾರೆ ಎಂದು ಮೃತ್ಯುಂಜಯ ತಿಳಿಸಿದ್ದಾರೆ.

ಇಲ್ಲಿ ಬೋರ್‌ವೆಲ್‌ಗಳಿಗೆ ಯಾರು ಅನುಮತಿ ನೀಡಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ನಿವಾಸಿಗಳು ಸರ್ಕಾರಿ ಸಂಸ್ಥೆಗಳನ್ನು ದೂರಿದ್ದಾರೆ. ಪ್ರತಿ ವಾರ್ಡ್‌ನಲ್ಲಿ ಅಕ್ರಮವಾಗಿ ಬೋರ್‌ವೆಲ್ ಕೊರೆಯುವ ಮತ್ತು ನೀರಿನ ಟ್ಯಾಂಕರ್ ಮಾಫಿಯಾ ಪರಿಶೀಲಿಸಲು ಪ್ರಾಧಿಕಾರ ಸ್ಥಾಪಿಸಬೇಕು ಎಂದು ಕಾರ್ಯಕರ್ತ ಸಂದೀಪ್ ಅನಿರುಧನ್ ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com