'ಒಂದು ರಾಷ್ಟ್ರ, ಒಂದು ಗುರುತು ಪತ್ರ': ಪ್ರಯೋಜನ, ನ್ಯೂನತೆಗಳ ಬಗ್ಗೆ ತಜ್ಞರ ಅಭಿಮತ

ಹೊಸ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹೊಸ ಗುರುತಿನ ಚೀಟಿ ನೀಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ - ಸ್ವಯಂಚಾಲಿತ ಖಾಯಂ ಶೈಕ್ಷಣಿಕ ಖಾತೆ ನೋಂದಣಿ (APAAR) ನ್ನು 'ಒಂದು ರಾಷ್ಟ್ರ, ಒಂದು ಗುರುತು ಚೀಟಿ' ಎಂದು ಕರೆಯಲಾಗುತ್ತದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹೊಸ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಹೊಸ ಗುರುತಿನ ಚೀಟಿ ನೀಡಲು ಕೇಂದ್ರ ಸರ್ಕಾರ ಇತ್ತೀಚೆಗೆ ಸುತ್ತೋಲೆ ಹೊರಡಿಸಿದೆ - ಸ್ವಯಂಚಾಲಿತ ಖಾಯಂ ಶೈಕ್ಷಣಿಕ ಖಾತೆ ನೋಂದಣಿ (APAAR) ನ್ನು 'ಒಂದು ರಾಷ್ಟ್ರ, ಒಂದು ಗುರುತು ಚೀಟಿ' ಎಂದು ಕರೆಯಲಾಗುತ್ತದೆ. 

ಶಿಕ್ಷಣ ವ್ಯವಸ್ಥೆಯ ಡಿಜಿಟಲೀಕರಣದ ಅಗತ್ಯವಿದೆ ಎಂದು ಸರ್ಕಾರ ಮತ್ತು ಶಿಕ್ಷಣ ವಲಯಕ್ಕೆ ಸಂಬಂಧಪಟ್ಟವರು ಅಭಿಪ್ರಾಯಪಟ್ಟರೆ, ಕೆಲವು ತಜ್ಞರು ಶಾಲೆಗಳಲ್ಲಿ ಪ್ರತಿಯೊಂದು ಕಾರ್ಯವನ್ನು ಕೇಂದ್ರೀಕರಿಸುವ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಶಾಲಾ ಆಡಳಿತಗಳು ಕೇವಲ ಆಡಳಿತ ಕೆಲಸದಲ್ಲಿ ಹಿಡಿದಿಟ್ಟುಕೊಳ್ಳುವ ಬಗ್ಗೆ ಚಿಂತಿಸುತ್ತಿವೆ, ಶೈಕ್ಷಣಿಕ ವಿಷಯಗಳತ್ತ ಗಮನಹರಿಸಲು ಸಮಯವಿಲ್ಲ ಎನ್ನುತ್ತಿದ್ದಾರೆ. 

ದಾಖಲಾತಿ ವ್ಯವಸ್ಥೆಯಲ್ಲಿ ಕೆಲಸ ಮಾಡಿದ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಕೌನ್ಸಿಲ್ (NAAC) ಮತ್ತು ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ (NETF)ಯ ಅಧ್ಯಕ್ಷ ಅನಿಲ್ ಡಿ ಸಹಸ್ರಬುಧೆ, APAAR ಗುರುತು ಪತ್ರದ ಪರಿಚಯವು ಶೈಕ್ಷಣಿಕ ವಲಯದಲ್ಲಿ ಹೆಚ್ಚು ಅಗತ್ಯವಿರುವ ಕ್ರಾಂತಿಯಾಗಿದೆ. ಇದು ದಾಖಲೆಗಳ ನಕಲಿಯನ್ನು ಕಡಿಮೆ ಮಾಡುತ್ತದೆ ಮತ್ತು ವಿದ್ಯಾರ್ಥಿಗೆ ಜೀವಮಾನದ ದಾಖಲೆ ಆಗುತ್ತದೆ ಎನ್ನುತ್ತಾರೆ. 

ಈ ಐಡಿ ಶಿಕ್ಷಕರಿಗೂ ಮಾನ್ಯವಾಗಿರುತ್ತದೆ, ಅವರ ವರ್ಗಾವಣೆಗಳು ನಡೆಯುವಾಗ ಮಾಹಿತಿ ಸುಲಭವಾಗಿ ರವಾನೆಯಾಗುವಂತೆ ಮಾಡಲು ಮತ್ತು ವಲಯದಲ್ಲಿ ಅವರ ಅರ್ಹತೆಯನ್ನು ದೇಶದಾದ್ಯಂತ ಮೌಲ್ಯಮಾಪನ ಮಾಡಬಹುದು ಎಂದರು. ಅನೇಕ ಕೈಗಾರಿಕೆಗಳು ಈಗ ತಮ್ಮ ಫಲಿತಾಂಶಗಳನ್ನು ಮೀರಿ ಉದ್ಯೋಗಿ ಸಾಮರ್ಥ್ಯವನ್ನು ನೋಡುತ್ತಿವೆ, ಈ ರೀತಿಯ ಅಧಿಕೃತ ಪ್ರಮಾಣೀಕರಣವು ಸಹಾಯಕವಾಗಿರುತ್ತದೆ ಎಂದು ಸಹಸ್ರಬುಧೆ ಹೇಳಿದರು.

ಸಂಸ್ಥೆಗಳಲ್ಲಿ ಮಾನಿಟರಿಂಗ್ ಸೇವೆಗಳಿಗೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದು ಸ್ವಾಗತಾರ್ಹ ಕ್ರಮವಾಗಿದೆ ಆದರೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡುವುದು ಅವರ ಪ್ರಯತ್ನ ಮತ್ತು ಪ್ರತಿಭೆಯ ಕಿರಿದಾದ ಮಾನ್ಯತೆಯಾಗಿದೆ ಎಂದು ಯುನಿಸೆಫ್‌ನ ಶಿಕ್ಷಣತಜ್ಞ ಶೇಷಗಿರಿ ಮಧುಸೂಧನ್ ಅವರ ಅಭಿಪ್ರಾಯವಾಗಿದೆ. 

ವೈದ್ಯಕೀಯ ಕ್ಷೇತ್ರಕ್ಕೆ ಲಾಭದಾಯಕ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಸಚ್ಚಿದಾನಂದ ಸರ್ವಜ್ಞಮೂರ್ತಿ ಆರಾಧ್ಯ, “ಕೇಂದ್ರೀಕೃತ ಅಂಕಿಅಂಶವು ಶಾಲೆ-ಕಾಲೇಜುಗಳಿಂದ ಹೊರಗುಳಿದವರ ಮೇಲೆ ಕಣ್ಣಿಡಲು ಸಹಾಯ ಮಾಡುತ್ತದೆ. ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಕಾರಣಗಳನ್ನು ವಿಶ್ಲೇಷಿಸಲು ಸಹಾಯ ಮಾಡುತ್ತದೆ. ದಾಖಲೆಗಳ ನಕಲು ಸಾಮಾನ್ಯವಾಗಿರುವುದರಿಂದ ವೈದ್ಯಕೀಯ ಕ್ಷೇತ್ರಕ್ಕೆ ಅನುಕೂಲವಾಗಲಿದೆ. ದೇಶದಲ್ಲಿ ವೈದ್ಯರು, ಎಂಜಿನಿಯರ್‌ಗಳು ಮತ್ತು ಇತರ ಕ್ಷೇತ್ರಗಳ ಕೊರತೆಯನ್ನು ಅರ್ಥಮಾಡಿಕೊಳ್ಳಲು ಐಡಿ ಸಹಾಯ ಮಾಡುತ್ತದೆ. ಪ್ರಸ್ತುತ ವಿವಿಧ ಕೌನ್ಸಿಲ್‌ಗಳ ಹೊರತಾಗಿಯೂ, ಅಂಕಿಅಂಶವು ತುಂಬಾ ಅಸ್ಪಷ್ಟವಾಗಿದೆ ಎಂದು ಅವರು ಹೇಳಿದರು.

ಸ್ಕಾಲರ್‌ಶಿಪ್‌ಗಳ ಪತ್ತೆ ಮಾಡುವುದು ಪಾರದರ್ಶಕವಾಗಿರುತ್ತದೆ. ಏಜೆನ್ಸಿಗಳು ಅವುಗಳ ಮೇಲೆ ನಿಗಾ ಇಡಬಹುದು ಎಂದು ಆರಾಧ್ಯ ಒತ್ತಿ ಹೇಳಿದರು.

ಅಕ್ಟೋಬರ್ 16 ಮತ್ತು 19 ರ ನಡುವೆ ಪೋಷಕರ ಒಪ್ಪಿಗೆಯನ್ನು ಪಡೆಯಲು ಮತ್ತು ಬ್ರೀಫಿಂಗ್‌ಗಳನ್ನು ಆಯೋಜಿಸಲು ಶಿಕ್ಷಣ ಇಲಾಖೆ ಶಾಲೆಗಳನ್ನು ಕೇಳಿದೆ. ಇತರ ಸರ್ಕಾರಿ ಏಜೆನ್ಸಿಗಳೊಂದಿಗೆ ಅಂಕಿಅಂಶಗಳನ್ನು ಹಂಚಿಕೊಳ್ಳುವಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಆಧಾರ್ ಸಂಖ್ಯೆಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com