ಮಾಜಿ ಸಿಎಂ ಬೊಮ್ಮಾಯಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ, ಇನ್ನು 4 ವಾರಗಳಲ್ಲಿ ಹೊರಗೆ ಓಡಾಡಬಹುದು: ವೈದ್ಯರು

ಕಳೆದ ಸೋಮವಾರ ಮೊಣಕಾಲಿನ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆತ್ಮವಿಶ್ವಾಸ ಮತ್ತು ಧೈರ್ಯದ ಮನೋಭಾವದಿಂದ ಅಚ್ಚರಿಯ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್ ಗ್ರೂಪ್ ಆಸ್ಪತ್ರೆಗಳ ಕಾರ್ಡಿಯೋಥೊರಾಸಿಕ್ ಸೈನ್ಸ್ ಮುಖ್ಯಸ್ಥ ಡಾ ವಿವೇಕ್ ಜವಳಿ ಹೇಳುತ್ತಾರೆ. 
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಳೆದ ಸೋಮವಾರ ಮೊಣಕಾಲಿನ ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆತ್ಮವಿಶ್ವಾಸ ಮತ್ತು ಧೈರ್ಯದ ಮನೋಭಾವದಿಂದ ಅಚ್ಚರಿಯ ರೀತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್ ಗ್ರೂಪ್ ಆಸ್ಪತ್ರೆಗಳ ಕಾರ್ಡಿಯೋಥೊರಾಸಿಕ್ ಸೈನ್ಸ್ ಮುಖ್ಯಸ್ಥ ಡಾ ವಿವೇಕ್ ಜವಳಿ ಹೇಳುತ್ತಾರೆ. 

ಬೊಮ್ಮಾಯಿ ಅವರ ಪರಿಧಮನಿಯ ಅಪಧಮನಿಗಳಲ್ಲಿ ಅನೇಕ ಬ್ಲಾಕ್‌ಗಳನ್ನು ಹೊಂದಿದ್ದರಿಂದ ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುವಲ್ಲಿನ ಸವಾಲಿನ ಬಗ್ಗೆ ವೈದ್ಯರು ಮಾತನಾಡಿದ್ದಾರೆ. ಶಸ್ತ್ರಚಿಕಿತ್ಸೆ ಸರಾಗವಾಗಿ ಸಾಗಿತು.  ಅವರ ರೋಗಲಕ್ಷಣಗಳನ್ನು ಕಂಡಾಗ ಅನೇಕ ಸಮಸ್ಯೆಗಳು ಎದುರಾಗಬಹುದು ಎಂದು ಭಾವಿಸಿಕೊಂಡಿದ್ದೆ ಎಂದಿದ್ದಾರೆ.

ಹಾಗಾದರೆ ಬೊಮ್ಮಾಯಿ ಅವರು ಐಸಿಯುನಿಂದ ಸಾಮಾನ್ಯ ವಾರ್ಡ್ ಗೆ ಶಿಫ್ಟ್ ಆಗಲು ಎಷ್ಟು ಸಮಯ ಹಿಡಿಯಬಹುದು ಎಂದು ಕೇಳಿದಾಗ, ಅತಿ ಗಣ್ಯ ವ್ಯಕ್ತಿಗಳು ಅತ್ಯುನ್ನತ ಆರೈಕೆಗಾಗಿ ಮತ್ತು ಅತಿಯಾಗಿ ಸಂದರ್ಶಕರು ಭೇಟಿ ಮಾಡಿ ಅವರಿಗೆ ಸಮಸ್ಯೆಯಾಗುವುದನ್ನು ತಪ್ಪಿಸಲು ಐಸಿಯುನ ಫೋರ್ಟ್ ನಾಕ್ಸ್‌ನಲ್ಲಿ ಹೆಚ್ಚು ಸಮಯ ಕಳೆಯುವುದು ಸೂಕ್ತವಾಗಿರುತ್ತದೆ. ವಿವಿಐಪಿಗಳು ಮಾತ್ರ ಈಗ ಅವರನ್ನು ಭೇಟಿ ಮಾಡುತ್ತಿದ್ದಾರೆ ಎಂದರು. ಮೊನ್ನೆ ಮತ್ತು ನಿನ್ನೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇತರ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದ್ದರು.

ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಮುಂದಿನ ದಿನಗಳಲ್ಲಿ ಬೊಮ್ಮಾಯಿ ಅವರು ಯಾವ ರೀತಿ ಭಾಗವಹಿಸಬಹುದು ಎಂದು ಕೇಳಿದಾಗ ವೈದ್ಯರು, ಇದುವರೆಗೆ ಶಸ್ತ್ರಚಿಕಿತ್ಸೆಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ಸುಮಾರು ಎರಡು ವಾರಗಳಲ್ಲಿ, ಅವರು ಕಚೇರಿ ಮತ್ತು ಪಕ್ಷದ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು. ಇನ್ನು ಸುಮಾರು ನಾಲ್ಕು ವಾರಗಳಲ್ಲಿ ಅವರು ಹೊರಗೆ ಓಡಾಡಿ ಚಟುವಟಿಕೆಗಳಲ್ಲಿ ಭಾಗಿಯಾಗಬಹುದು ಎನ್ನುತ್ತಾರೆ.

ನವೆಂಬರ್ ಅಂತ್ಯದ ವೇಳೆಗೆ ಪಕ್ಷದ ಕಾರ್ಯಕ್ರಮಗಳಿಗೆ ಬೊಮ್ಮಾಯಿ ಅವರು ಲಭ್ಯವಿರುತ್ತಾರೆ. ಡಿಸೆಂಬರ್ 3 ರಂದು ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶಗಳು ಪ್ರಕಟವಾದ ನಂತರ ಸಂಸತ್ತಿನ ಚುನಾವಣೆಗೆ ಬಿಜೆಪಿಯ ಸಿದ್ಧತೆಗಳು ಪ್ರಾರಂಭವಾಗುತ್ತವೆ. 

ಮುಂದಿನ ದಿನಗಳಲ್ಲಿ ಬೊಮ್ಮಾಯಿ ಅವರು ಮೊದಲು ಸಮಾಲೋಚನೆ ನಡೆಸಿರುವ ಸ್ಪರ್ಶ ಆಸ್ಪತ್ರೆಯಲ್ಲಿ ಮೂಳೆಚಿಕಿತ್ಸೆಯ ವೈದ್ಯರ ಅಭಿಪ್ರಾಯವನ್ನು ಪಡೆಯಬಹುದು ಎಂದು ಬೊಮ್ಮಾಯಿ ಅವರ ನಿಕಟ ಮೂಲಗಳು ತಿಳಿಸಿವೆ. ದಸರಾ ಹಬ್ಬ ಆಚರಿಸಲು ಬೊಮ್ಮಾಯಿ ಮನೆಗೆ ಮರಳಲು ಸಾಧ್ಯವಾಗಿದ್ದರೂ, ಅವರ ಕುಟುಂಬ ಸದಸ್ಯರು ಆಸ್ಪತ್ರೆಯಲ್ಲಿ ಉಳಿಯಲು ಸಲಹೆ ನೀಡಿದ್ದಾರೆ.

ನಾಳೆ ಆಯುಧಪೂಜೆ ಮತ್ತು ನಾಡಿದ್ದು ವಿಜಯ ದಶಮಿ ಆಚರಿಸಲು ಅವರು ನಾಳೆ ಮನೆಗೆ ಮರಳುವ ಸಾಧ್ಯತೆಯಿದೆ. ಬೈಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾಗುವವರಿಗೆ ಆಹಾರದ ನಿರ್ಬಂಧಗಳ ಬಗ್ಗೆ ಕೇಳಿದಾಗ ಜೀವನದುದ್ದಕ್ಕೂ ಔಷಧಿಯಲ್ಲಿರಬೇಕಾಗುತ್ತದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com