1950 ರಿಂದ 1960ರ ದಶಕದಲ್ಲಿ ರಾಜಪರಂಪರೆಯ ದಸರಾ ವೈಭವವನ್ನು ಸಾರುವ ಅಪರೂಪದ ಛಾಯಾಚಿತ್ರ ಪ್ರದರ್ಶನ

ಛಾಯಾಚಿತ್ರ, ಫೋಟೋಗಳು ಯಾವತ್ತಿಗೂ ನಮ್ಮ ಹಿಂದಿನ ಪ್ರಮುಖ ಘಟನೆಗಳ ಕಿಟಕಿಯಾಗಿ ಕಾಣುತ್ತದೆ. ಆ ಕ್ಷಣದ ಆನಂದ, ಸುಂದರ ಗಳಿಗೆಯನ್ನು ಸೆರೆಹಿಡಿದ, ಭೂತಕಾಲದ ಸ್ಪರ್ಶಕ್ಕೆ ಮತ್ತು ಅದನ್ನು ಪುನರುಜ್ಜೀವನಗೊಳಿಸಲು ನಮಗೆ ಅವಕಾಶವನ್ನು ನೀಡುತ್ತದೆ.
1950-60 ರ ದಶಕದ ರಾಜಮನೆತನ ದಸರಾದ ನೋಡದ ಛಾಯಾಚಿತ್ರಗಳು.
1950-60 ರ ದಶಕದ ರಾಜಮನೆತನ ದಸರಾದ ನೋಡದ ಛಾಯಾಚಿತ್ರಗಳು.

ಬೆಂಗಳೂರು: ಛಾಯಾಚಿತ್ರ, ಫೋಟೋಗಳು ಯಾವತ್ತಿಗೂ ನಮ್ಮ ಹಿಂದಿನ ಪ್ರಮುಖ ಘಟನೆಗಳ ಕಿಟಕಿಯಾಗಿ ಕಾಣುತ್ತದೆ. ಆ ಕ್ಷಣದ ಆನಂದ, ಸುಂದರ ಗಳಿಗೆಯನ್ನು ಸೆರೆಹಿಡಿದ, ಭೂತಕಾಲದ ಸ್ಪರ್ಶಕ್ಕೆ ಮತ್ತು ಅದನ್ನು ಪುನರುಜ್ಜೀವನಗೊಳಿಸಲು ನಮಗೆ ಅವಕಾಶವನ್ನು ನೀಡುತ್ತದೆ.

ಆದರೆ, ಕಾಲ ಬದಲಾದಂತೆ, 1950-60ರ ದಶಕದ ರಾಜಪರಂಪರೆಯ ದಸರಾದ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಭಾರತೀಯ ವಿಶ್ವ ಸಂಸ್ಕೃತಿ ಸಂಸ್ಥೆ (IIWC) ನಲ್ಲಿ ಹೆರಿಟೇಜ್ ಬಸವನಗುಡಿಯ ಸಹಯೋಗದೊಂದಿಗೆ ನಡೆದ ಛಾಯಾಚಿತ್ರಗಳು ಇತಿಹಾಸದ ಅಮೂಲ್ಯ ದೃಶ್ಯಗಳನ್ನು ಸೆರೆಹಿಡಿದಿದ್ದು, ನಾಳೆಯವರೆಗೆ ಪ್ರದರ್ಶನ ನಡೆಯಲಿದೆ. 

ಪ್ರದರ್ಶನದಲ್ಲಿರುವ 44 ಛಾಯಾಚಿತ್ರಗಳಲ್ಲಿ 25 ಛಾಯಾಚಿತ್ರಗಳು ಮೈಸೂರಿನ ಹಿರಿಯ ಛಾಯಾಗ್ರಾಹಕ ಕೆ.ವಿ.ಸುಬ್ಬ ರಾವ್ ಅವರದ್ದು, ಉಳಿದವು ಒಡೆಯರ್ ಕುಟುಂಬದ ವಿಶೇಷ ಸಂಗ್ರಹದಿಂದ ಬಂದಿವೆ. 1950-60ರ ದಶಕದಲ್ಲಿ ಮೈಸೂರಿನಲ್ಲಿ ದಸರಾಗೆ ಹೆಚ್ಚು ಬೇಡಿಕೆಯಿರುವ ಛಾಯಾಗ್ರಾಹಕರಲ್ಲಿ ಸುಬ್ಬರಾವ್ ಒಬ್ಬರು. ಅವರು ತೆಗೆದ ಕೆಲವು ಫೋಟೋಗಳನ್ನು ಅವರು ಸಂರಕ್ಷಿಸಿದ್ದಾರೆ, ಅದು ನಮಗೆ ವಿಶೇಷ ಸಂಗ್ರಹವಾಗಿದೆ ಎಂದು ಪ್ರದರ್ಶನದ ಮೇಲ್ವಿಚಾರಕ ಮತ್ತು ಮಾಯಾ ಫಿಲ್ಮ್ಸ್ ಸಂಸ್ಥಾಪಕ-ನಿರ್ದೇಶಕ ಮಾಯಾ ಚಂದ್ರ ಹೇಳುತ್ತಾರೆ.

ಚಂದ್ರ ಅವರು ಅನೇಕ ವರ್ಷಗಳಿಂದ ರಾಜಮನೆತನದ ಜನಜೀವನವನ್ನು ಫೋಟೋಗಳಲ್ಲಿ ದಾಖಲಿಸುತ್ತಿದ್ದಾರೆ, ಈ ಸಮಯದಲ್ಲಿ ಅವರು 1950 ರ ದಶಕದಲ್ಲಿ ಪ್ರಸಿದ್ಧ ಫೋಟೋ ಸ್ಟುಡಿಯೋ, ಫೋಟೋ ಫ್ಲ್ಯಾಶ್ ನ್ನು ನಡೆಸುತ್ತಿದ್ದ ಪ್ರಸಿದ್ಧ ಛಾಯಾಗ್ರಾಹಕರನ್ನು ಭೇಟಿ ಮಾಡಿದ್ದರು. ಪ್ರದರ್ಶನಕ್ಕೆ ಭೇಟಿ ನೀಡಿದ 93 ವರ್ಷದ ಛಾಯಾಗ್ರಾಹಕ ಕೆ ವಿ ಸುಬ್ಬ ರಾವ್ ಅವರ ಸೋದರಳಿಯ ಕೇಶವಂ, ನನ್ನ ಬಾಲ್ಯ ದಿನಗಳಲ್ಲಿ ನಾನು ದಸರಾ ಸಮಯದಲ್ಲಿ ನನ್ನ ಚಿಕ್ಕಪ್ಪನ ಬಳಿ ಹೋಗಿ ಇರುತ್ತಿದ್ದೆ. ಈ ಛಾಯಾಚಿತ್ರಗಳನ್ನು ತೆಗೆಯುವಾಗ ನಾನಿಲ್ಲದಿದ್ದರೂ, ಆ ಭವ್ಯ ಆಚರಣೆಗಳ ದಿನಗಳಿಗೆ ಇದು ನನ್ನನ್ನು ಹಿಂದಕ್ಕೆ ಕೊಂಡೊಯ್ಯುತ್ತದೆ, ಅಂದಿನ ದಸರಾ ವೈಭವವನ್ನು ನಾವು ಫೋಟೋಗಳಲ್ಲಿ ನೋಡಬಹುದಾಗಿದೆ ಎನ್ನುತ್ತಾರೆ. 

<strong>ಛಾಯಾಚಿತ್ರ ಪ್ರದರ್ಶನ ವೀಕ್ಷಿಸುತ್ತಿರುವ ವೀಕ್ಷಕರು </strong>
ಛಾಯಾಚಿತ್ರ ಪ್ರದರ್ಶನ ವೀಕ್ಷಿಸುತ್ತಿರುವ ವೀಕ್ಷಕರು 

ಪ್ರದರ್ಶನದ ಮಹತ್ವದ ಬಗ್ಗೆ ಮಾತನಾಡಿದ ಚಂದ್ರು, “ಆಧುನಿಕ ದಸರಾ ಆಚರಣೆಗೆ ಇಂಟರ್ನೆಟ್ ನ್ನು ಜನರು ಅವಲಂಬಿಸಬಹುದು. ಹಿಂದೆ ರಾಜ ಪರಂಪರೆ ದಸರಾ ಆಚರಣೆ ಮಾಡುತ್ತಿದ್ದ ರೀತಿ ಹೇಗಿದ್ದವು ಎಂದು ತಿಳಿದುಕೊಳ್ಳಲು ಇದು ಸಹಾಯ ಮಾಡುತ್ತದೆ. ಅಂದಿನ ದಸರಾ ಆಚರಣೆಯಲ್ಲಿ ಉಲ್ಲಾಸವಿತ್ತು. ಒಡೆಯರ್ ಕುಟುಂಬವು ರಾಜ್ಯದ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿರುವುದರಿಂದ ಮತ್ತು ಹೊಸ ಪೀಳಿಗೆಗೆ ಅವರ ಮತ್ತು ಅವರ ಪರಂಪರೆಯ ಬಗ್ಗೆ ಅಷ್ಟೇನೂ ತಿಳಿದಿಲ್ಲವಾದ್ದರಿಂದ ಈ ಛಾಯಾಚಿತ್ರಗಳು ನಮಗೆ ಅನೇಕ ಮಾಹಿತಿ ನೀಡುತ್ತವೆ  ಎಂದು ನಾನು ಭಾವಿಸುತ್ತೇನೆ. ನಾವು ಇಂದು ಎಲ್ಲಿದ್ದೇವೆ ಎಂದು ತಿಳಿಯಲು ನಮ್ಮ ಇತಿಹಾಸವನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.

ರಾಜಮನೆತನದ ಅಪರೂಪದ ಸಂಗ್ರಹಗಳ ಛಾಯಾಚಿತ್ರಗಳು ಮೂರು ತಲೆಮಾರುಗಳ ಮಹಾರಾಜರಿಗೆ ಸೇವೆ ಸಲ್ಲಿಸಿದ ಪ್ರಸಿದ್ಧ ಆನೆಗಳಾದ ಚಾಮುಂಡಿ ಪ್ರಸಾದ್ ಮತ್ತು 12 ಅಡಿ ಎತ್ತರದ ಭವ್ಯವಾದ ಬಿಳಿಗಿರಿರಂಗ ಚಿತ್ರಗಳನ್ನು ಒಳಗೊಂಡಿವೆ. 1939 ರ ಮತ್ತೊಂದು ವಿಶೇಷ ಛಾಯಾಚಿತ್ರವು ಅಂದಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊನೆಯ ದಸರಾವನ್ನು ಅವರ ಉತ್ತರಾಧಿಕಾರಿ ಜಯಚಾಮರಾಜ ಒಡೆಯರ್ ಅವರೊಂದಿಗೆ ಚಿನ್ನದ ಸಿಂಹಾಸನದ ಮೇಲೆ ಪ್ರದರ್ಶಿಸುತ್ತದೆ.

ಕಳೆದ ಅಕ್ಟೋಬರ್ 21 ರಂದು ಹೆಚ್.ಹೆಚ್.ಜಯ ಚಾಮರಾಜೇಂದ್ರ ಒಡೆಯರ್ ಅವರ ಪುತ್ರಿಯರಾದ ಕಾಮಾಕ್ಷಿ ದೇವಿ ಮತ್ತು ಇಂದ್ರಾಕ್ಷಿ ದೇವಿ ಅವರು ಪ್ರದರ್ಶನವನ್ನು ಉದ್ಘಾಟಿಸಿದರು. ನಾಳೆ ಹಿರಿಯ ಛಾಯಾಗ್ರಾಹಕ ಸುಬ್ಬ ರಾವ್ ಅವರ ಜೀವನಚರಿತ್ರೆಯ ಪ್ರದರ್ಶನದೊಂದಿಗೆ ಮುಕ್ತಾಯಗೊಳ್ಳಲಿದೆ. ಛಾಯಾಚಿತ್ರ ಪ್ರದರ್ಶನದ ಜೊತೆಗೆ ಬಸವನಗುಡಿ ಪ್ರದೇಶದ ಮಹಿಳೆಯರ ತಂಡ ನೀಡಿದ ಗೊಂಬೆಗಳ ಪ್ರದರ್ಶನ ಮತ್ತು ದಿವಂಗತ ಎನ್.ಎಸ್.ಶೇಷಾದ್ರಿ ಅವರಿಂದ ಸಾಬೂನು ಶಿಲ್ಪಗಳ ಪ್ರದರ್ಶನ ಕೂಡ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com