ದ್ವೇಷ-ಅಸೂಯೆ ಅಳಿದು, ಸತ್ಯ-ಪ್ರೀತಿ ವಿಜೃಂಭಿಸಲಿ: ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಶುಭ ಹಾರೈಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಡಿನ ಜನತೆಗೆ ವಿಜಯದಶಮಿ ಶುಭಾಶಯ ಕೋರಿದ್ದಾರೆ.
ಸಿದ್ದರಾಮಯ್ಯ ಶುಭಾಶಯ
ಸಿದ್ದರಾಮಯ್ಯ ಶುಭಾಶಯ
Updated on

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಾಡಿನ ಜನತೆಗೆ ವಿಜಯದಶಮಿ ಶುಭಾಶಯ ಕೋರಿದ್ದಾರೆ.

ಈ ಕುರಿತು ಟ್ವಿಟ್ಚರ್ ನಲ್ಲಿ  ಪೋಸ್ಟ್ ಮಾಡಿರುವ ಸಿಎಂ, ಅಧರ್ಮದ ವಿರುದ್ಧ ಧರ್ಮವು ಜಯಿಸಿದ ಈ ವಿಜಯದಶಮಿಯ ದಿನದಂದು ನಮ್ಮ ನಡುವಿನ ದ್ವೇಷ, ಅಸೂಯೆ, ಅಸತ್ಯಗಳು ಅಳಿದು, ಸತ್ಯ, ಪ್ರೀತಿ, ಸೌಹಾರ್ದತೆಗಳು ವಿಜೃಂಭಿಸಲಿ ಎಂದು ಹಾರೈಸುತ್ತೇನೆ. ಕರುನಾಡು ಸುಖ, ಸಮೃದ್ಧಿಯನ್ನೊಳಗೊಂಡ ಸರ್ವಜನಾಂಗದ ಶಾಂತಿಯ ತೋಟವಾಗಲಿ ಎಂದು ಆಶಿಸುತ್ತಾ, ನಾಡಬಂಧುಗಳಿಗೆ ವಿಜಯದಶಮಿಯ ಶುಭ ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪೋಸ್ಟ್ ಮಾಡಿದ್ದು, ನಾಡಿನ ಸಮಸ್ತ ಜನತೆಗೆ ವಿಜಯದಶಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡದೇವತೆ ತಾಯಿ ಶ್ರೀ ಚಾಮುಂಡೇಶ್ವರಿಯ ಅನುಗ್ರಹದಿಂದ ನಾಡಿನೆಲ್ಲೆಡೆ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಹಾಗೂ ಒಳ್ಳೆ ಮಳೆ-ಬೆಳೆಯಿಂದ ರೈತರ ಬಾಳು ಹಸನಾಗಲಿ ಎಂದು ಶುಭ ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com