ಹುಲಿ ಉಗುರು ಬೇಟೆ: ನಟ ಜಗ್ಗೇಶ್, ದರ್ಶನ್, ರಾಕ್ ಲೈನ್ ವೆಂಕಟೇಶ್, ವಿನಯ್ ಗುರೂಜಿಗೆ ಕಾದಿದ್ಯಾ ಸಂಕಷ್ಟ?

ಕುತ್ತಿಗೆಯಲ್ಲಿ ಧರಿಸಿದ್ದ ಚೈನಿನ ಲಾಕೆಟ್ ನಲ್ಲಿ ಹುಲಿಯ ಒರಿಜಿನಲ್ ಉಗುರು ಹಾಕಿಕೊಂಡದ್ದಕ್ಕೆ ನೇರವಾಗಿ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾಗಿ ಜೈಲಿನ ಹಿಂದೆ ಕಂಬಿ ಎಣಿಸುತ್ತಿರುವ ಸಂದರ್ಭದಲ್ಲಿ ಹುಲಿ ಉಗುರು, ಹುಲಿ ಚರ್ಮ ಮತ್ತಷ್ಟು ಸೆಲೆಬ್ರಿಟಿಗಳಿಗೆ, ಪ್ರಮುಖ ವ್ಯಕ್ತಿಗಳಿಗೆ ಕಂಠಕವಾಗುವ ಸಾಧ್ಯತೆಯಿದೆ.
ಹುಲಿ ಉಗುರು
ಹುಲಿ ಉಗುರು

ಬೆಂಗಳೂರು: ಕುತ್ತಿಗೆಯಲ್ಲಿ ಧರಿಸಿದ್ದ ಚೈನಿನ ಲಾಕೆಟ್ ನಲ್ಲಿ ಹುಲಿಯ ಒರಿಜಿನಲ್ ಉಗುರು ಹಾಕಿಕೊಂಡದ್ದಕ್ಕೆ ನೇರವಾಗಿ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾಗಿ ಜೈಲಿನ ಹಿಂದೆ ಕಂಬಿ ಎಣಿಸುತ್ತಿರುವ ಸಂದರ್ಭದಲ್ಲಿ ಹುಲಿ ಉಗುರು, ಹುಲಿ ಚರ್ಮ ಮತ್ತಷ್ಟು ಸೆಲೆಬ್ರಿಟಿಗಳಿಗೆ, ಪ್ರಮುಖ ವ್ಯಕ್ತಿಗಳಿಗೆ ಕಂಠಕವಾಗುವ ಸಾಧ್ಯತೆಯಿದೆ.ಹುಲಿ ಉಗುರು ವಿಚಾರ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. 

ಹುಲಿ ಉಗುರಿನ ನೈಜತೆ ಬಗ್ಗೆ ವಿವರಣೆ ಕೋರಿ ಇವರೆಲ್ಲರಿಗೂ ನೊಟೀಸ್ ನೀಡಲು ಅರಣ್ಯ ಇಲಾಖೆ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ. 

ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬಿದನಗೆರೆಯ ಶನಿಮಹಾತ್ಮ ದೇವಾಲಯದ ಅರ್ಚಕ ಧನಂಜಯ ಗುರೂಜಿ ಈ ಹುಲಿ ಉಗುರಿನ ಸುಳಿಯಲ್ಲಿ ಸಿಲುಕಿದ್ದಾರೆ. ದೇವಾಲಯದ ಬಳಿ ಬಸವೇಶ್ವರ ಮಠ ಸ್ಥಾಪಿಸಿ ಗುರೂಜಿಯಾಗಿರುವ ಅರ್ಚಕ. ಮಠದ ಸ್ವಾಮೀಜಿಯಾದ ಬಳಿಕ ಮೈ ತುಂಬಾ ಬಂಗಾರದ ಓಡವೆ ಧರಿಸುತ್ತಿರುವ ಸ್ವಾಮೀಜಿ. ಒಡವೆಗಳ ಜೊತೆಗೆ ಕೊರಳಿಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಧನಂಜಯ ಗುರೂಜಿಯ ಫೋಟೊ ವೈರಲ್ ಆಗಿದೆ. ಇದರ ಬೆನ್ನಲ್ಲೇ ಇದೀಗ ಅರಣ್ಯ ಇಲಾಖೆ ಅಧಿಕಾರಿ, ಬಿದನಗೆರೆ ದೇವಾಲಯಕ್ಕೆ ತರೆಳಿ ಹುಲಿ ಉಗುರಿನ ಬಗ್ಗೆ ತನಿಖೆ ನಡೆಸಿದ್ದಾರೆ. ಕುಣಿಗಲ್ ವಲಯ ಅರಣ್ಯಾಧಿಕಾರಿ ಜಗದೀಶ್ ಅವರು ಧನಂಜಯಸ್ವಾಮಿಯ ಚಿನ್ನದ ಚೈನ್ ಗಳನ್ನ ಪರಿಶೀಲನೆ ನಡೆಸಿದ್ದಾರೆ.

ಅದು ಅರ್ಟಿಫಿಶಿಯಲ್ ತುಂಬಾ ದಿನಗಳಿಂದ ಹಾಕಿದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ ಅದನ್ನ ಎಸೆದಿದ್ದೇನೆ ಎಂದು ಧನಂಜಯಸ್ವಾಮಿ ಅರಣ್ಯಾಧಿಕಾರಿ ಮುಂದೆ ಹೇಳಿಕೆ ನೀಡಿದ್ದಾರೆ. ಆದರೆ, ಧನಂಜಯಸ್ವಾಮಿ ಹೇಳಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಜಿಲ್ಲಾ ಅರಣ್ಯಾಧಿಕಾರಿ ಅನುಪಮಾ, ಎಸೆದಿರುವ ಉಗುರಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಅರ್ಟಿಫಿಶಿಯಲ್ ಉಗುರನ್ನು ಅವರಿಂದ ಪಡೆದು ಎಫ್ಎಸ್ಎಲ್ ಪರೀಕ್ಷೆಗೆ ಕಳಿಸಲಾಗುವುದು. ಒಂದು ವೇಳೆ ಇಂದು ಉಗುರು ಸಿಗದಿದ್ದರೆ, ಸರ್ಚ್ ವಾರಂಟ್ ಪಡೆದು ಹುಡುಕಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನಟ, ರಾಜಕಾರಣಿ ಜಗ್ಗೇಶ್ ಗೂ ಕಂಟಕ?: ಈಗ ನಟ, ರಾಜಕಾರಣಿ ಜಗ್ಗೇಶ್ ಕತ್ತಲ್ಲೂ ಹುಲಿ ಉಗುರು ಇರುವುದು ಅವರ ವಿರುದ್ಧವೂ ದೂರು ಸಲ್ಲಿಕೆಯಾಗಿ ವಿಚಾರಣೆಯಾಗುತ್ತದೆಯೇ ಎಂಬ ಪ್ರಶ್ನೆ ಉಂಟಾಗಿದೆ.  ಖಾಸಗಿ ಸುದ್ದಿ ಸಂಸ್ಥೆ ಒಂದಕ್ಕೆ ಈ ಹಿಂದೆ ಸಂದರ್ಶನ ನೀಡು  ವೇಳೆ ನಟ ಜಗ್ಗೇಶ್, ನನಗೆ 20 ವರ್ಷ ತುಂಬಿದಾಗ ಅಮ್ಮ ಈ ಲಾಕೆಟ್ ನೀಡಿದ್ದರು. ಮಗ ಹುಲಿ ಇದ್ದಾಂಗೆ ಇರಬೇಕು ಎಂದು ಅಮ್ಮ ಒರಿಜಿನಲ್ ಹುಲಿ ಉಗುರಿನ ಲಾಕೆಟ್​ನ ಹಾಕಿದ್ದರು’ ಎಂದು ಸಂದರ್ಶನದಲ್ಲಿ ಜಗ್ಗೇಶ್ ಹೇಳಿದ್ದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಅನೇಕರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ.

ಜಗ್ಗೇಶ್ ವಿರುದ್ಧ ಮಾಜಿ ಎಂಎಲ್​ಸಿ ಪಿಆರ್ ರಮೇಶ್ ಅವರು ದೂರು ನೀಡಿದ್ದಾರೆ. ಜಗ್ಗೇಶ್ ಹೇಳಿಕೆಯ ವೀಡಿಯೋವನ್ನು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ರವಾನೆ ಮಾಡಲಾಗಿದೆ. ನಟ ಜಗ್ಗೇಶ್ ಅವರನ್ನು ಇಲಾಖೆ ಅಧಿಕಾರಿಗಳು ಪ್ರಶ್ನೆ ಮಾಡುವ ಸಾಧ್ಯತೆ ಇದೆ.

ನಟ ದರ್ಶನ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹುಲಿ ಉಗುರು ಧರಿಸಿದ್ದಾರೆ. ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎನ್ನಲಾಗಿದೆ. ಇವರುಗಳ ವಿರುದ್ಧ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com