ವಿದ್ಯೆ ಇಲ್ಲದೆ ಇದ್ದರೂ ಪ್ರಜ್ಞಾವಂತಿಕೆ ಬೇಕು, ಕಾಮನ್ ಸೆನ್ಸ್ ಇರಬೇಕು: ಬೆಂಗಳೂರು ನಮ್ಮದು; ಎಚ್ ಡಿಕೆಗೆ ಶಿವಕುಮಾರ್ ತಿರುಗೇಟು!

ವಿದ್ಯೆ ಇಲ್ಲದೆ ಇದ್ದರೂ ಪ್ರಜ್ಞಾವಂತಿಕೆ ಬೇಕು. ಸಾಮಾನ್ಯ ಜ್ಞಾನವಿರಬೇಕು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ರಾಮನಗರದ ಇತಿಹಾಸವನ್ನು ತಂದೆ ಎಚ್‌.ಡಿ. ದೇವೇಗೌಡರನ್ನು ಕೇಳಿ ತಿಳಿದುಕೊಳ್ಳಲಿ.
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
Updated on

ಮೈಸೂರು: ವಿದ್ಯೆ ಇಲ್ಲದೆ ಇದ್ದರೂ ಪ್ರಜ್ಞಾವಂತಿಕೆ ಬೇಕು. ಸಾಮಾನ್ಯ ಜ್ಞಾನವಿರಬೇಕು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ರಾಮನಗರದ ಇತಿಹಾಸವನ್ನು ತಂದೆ ಎಚ್‌.ಡಿ. ದೇವೇಗೌಡರನ್ನು ಕೇಳಿ ತಿಳಿದುಕೊಳ್ಳಲಿ  ಎಂದು  ಡಿಸಿಎಂ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ

ಮಾಧ್ಯಮ ಪ್ರತಿನಿಧಿಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ‘ಆದಿಚುಂಚನಗಿರಿ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿ ಹಾಗೂ ಕೆಂಪೇಗೌಡರು ಜನಿಸಿದ್ದು ರಾಮನಗರದಲ್ಲಿ. ನಾವೆಲ್ಲರೂ ಬೆಂಗಳೂರಿನವರು. ಮಂಡ್ಯಕ್ಕೆ ಪ್ರತ್ಯೇಕ ವಿಶ್ವವಿದ್ಯಾಲಯ ಮಾಡಿದರೂ ಮೈಸೂರು ವಿಶ್ವವಿದ್ಯಾಲಯವೇ ಬಹಳ ಮುಖ್ಯ. ಇದೂ ಅದೇ ರೀತಿಯೇ’ ಎಂದು ಪ್ರತಿಪಾದಿಸಿದರು.

ಮಾಗಡಿ, ರಾಮನಗರ, ಚನ್ನಪಟ್ಟಣದ ಬಹಳ ಜನರು ಆಸ್ತಿ ಮಾರುತ್ತಿದ್ದಾರೆ. ಆಸ್ತಿ ಮಾರಿಕೊಳ್ಳಬೇಡಿ, ಉಳಿಸಿಕೊಳ್ಳಿ ಎಂದು ಹೇಳಿದ್ದೇನೆ. ನಾನು ಕನಕಪುರ ಪ್ರವೇಶಿಸಿದ ಮೇಲೆ ಭೂಮಿ ಬೆಲೆ ಏನಾಯಿತು ಎಂಬುದು ಜನರಿಗೆ ಗೊತ್ತಿದೆ. ಇಡೀ ರಾಮನಗರ ಜಿಲ್ಲೆಯೇ ಬೆಂಗಳೂರಿಗೆ ಸೇರಿದ್ದು. ಮಾಗಡಿ, ಚನ್ನಪಟ್ಟಣ ಸೇರಿ ಎಲ್ಲವೂ ಬೆಂಗಳೂರಿನದ್ದೇ. ಈ ವಿಚಾರದಲ್ಲಿ ನನಗೇನೂ ಆತುರವಿಲ್ಲ. ಕುಮಾರಸ್ವಾಮಿ ಹೇಳಿಕೆಗೆ ತಲೆಕೆಡಿಸಿಕೊಳ್ಳುವುದಿಲ್ಲ. ನಾನು ಮತ್ತು ನಮ್ಮ ಸರ್ಕಾರದಿಂದ ಏನು ಮಾಡುತ್ತೇವೆಯೋ ಅದು ಮುಖ್ಯ’ ಎಂದು ಪ್ರತಿಕ್ರಿಯಿಸಿದರು.

ಇಲ್ಲಿ ಯಾರು ಯಾರದ್ದನ್ನೂ ಕಸಿದುಕೊಳ್ಳಲು ಹೋಗುವುದಿಲ್ಲ. ರಾಮನಗರ ಮಾಡಿದ್ದ ಕ್ರೆಡಿಟ್ ಅನ್ನು ಕುಮಾರಸ್ವಾಮಿ ಅವರೇ ಇಟ್ಟುಕೊಳ್ಳಲಿ. ಇನ್ನೊಬ್ಬ ತಲೆ ಕೆಟ್ಟ ಬಿಜೆಪಿ ಎಂಎಲ್‌ಸಿ ಏನೇನೋ ಮಾತನಾಡುತ್ತಾನೆ. ಏಕೆ ಅಷ್ಟು ಆತುರ? ವಿಜಯದಶಮಿಯ ದಿನ ಶುಭ ಮುಹೂರ್ತ ಹಾಗೂ ಶುಭ ಗಳಿಗೆಯಲ್ಲಿ ಈ ಮಾತು ಹೇಳಿದ್ದೇನೆ ಎಂದರು.

ಮೈಸೂರು ದಸರಾ ಗೆ ರೀ ಲುಕ್ ಕೊಡಬೇಕಾಗಿದೆ ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದ ಅವರು ಹಿಂದೆ ಬಂಗಾರಪ್ಪ, ಕೃಷ್ಣ ಮಂತ್ರಿ ಮಂಡಲದಲ್ಲಿ ದಸರಾ ನೋಡಿದ್ದೇ. ಆ ಕಾಲದಲ್ಲಿ ಟಾರ್ಚ್ ಲೈಟ್ ಪರೇಡ್ ತುಂಬಾ ಚೆನ್ನಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡುವ ರೀತಿ ಕಾರ್ಯಕ್ರಮಗಳು ನಡೆದಿದೆ ಎಂದರು.

ಈ ಬಾರಿ ದಸರಾಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಂದಿದ್ದರು ಹಾಗಾಗಿ ಮುಂದಿನ ದಿನಗಳಲ್ಲಿ ದಸರಾ ಥೀಮ್ ಚೇಂಚ್ ಆಗಬೇಕು. ಆದರೆ ಹಿಂದಿನ ಪರಂಪರೆ ಉಳಿಸಿಕೊಂಡು ಬಂದಿದ್ದೇವೆ‌ ಎಂದ ಅವರು ಸ್ತಬ್ಧ ಚಿತ್ರ ಕಾಂಪಿಟೇಷನ್ ಗೆ ಪ್ರತಿ ಜಿಲ್ಲೆಯಲ್ಲೂ ಸ್ಪರ್ಧೆ ನಡೆಯಬೇಕು. 400 ವರ್ಷಗಳ ಇತಿಹಾಸ ಇದೆ, ಇತಿಹಾಸ ಉಳಿಸಿಕೊಂಡು ನ್ಯೂ ಲುಕ್ ಕೊಡಬೇಕಾಗಿದೆ.

ಹೊಸ ರೀತಿ ಹಾಗೂ ಟೂರಿಸಂಗೆ ಹೆಚ್ಚು ಒತ್ತು ಕೊಡಬೇಕು. ಮೈಸೂರಿಗೆ ಬರುವ ಗೆಸ್ಟ್ ಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಏಕೆಂದರೆ ದುಡ್ಡು ಕೊಟ್ಟು ಬಂದಿರುತ್ತಾರೆ ಅವರಿಗೆಲ್ಲಾ ಪ್ರತ್ಯೇಕವಾದ ವ್ಯವಸ್ಥೆ ಮಾಡಬೇಕು. ದಸರಾವನ್ನ ಮೈಸೂರಿಗೆ ಮಾತ್ರ ಸೀಮಿತವಾಗಲು ಬಿಡಲು ಸಾಧ್ಯವಿಲ್ಲ ರಾಜ್ಯಮಟ್ಟದ ಅಧಿಕಾರಿಗಳನ್ನ ದಸರಾಗೆ ಬಳಸಿಕೊಳ್ಳಬೇಕು. ಈ ಬಾರಿ ಮೈಸೂರು ಅಧಿಕಾರಿಗಳು ಕಷ್ಟ ಪಟ್ಟು ಕೆಲಸ ಮಾಡಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com