ಬಿಎಂಟಿಸಿಯ ಶೇ. 40-50 ರಷ್ಟು ಚಾಲಕರಿಗೆ ಹೃದ್ರೋಗದ ಅಪಾಯವಿದೆ!

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಶೇ. 40-50 ರಷ್ಟು ಚಾಲಕರು ಹೃದ್ರೋಗದ ಅಪಾಯದಲ್ಲಿದ್ದಾರೆ ಎಂದು ಗಮನಿಸಲಾಗಿದ್ದು, ಅವರು ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಶೇ. 40-50 ರಷ್ಟು ಚಾಲಕರು ಹೃದ್ರೋಗದ ಅಪಾಯದಲ್ಲಿದ್ದಾರೆ ಎಂದು ಗಮನಿಸಲಾಗಿದ್ದು, ಅವರು ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ.

ಈ ಕುರಿತು ಮಾತನಾಡಿರುವ ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅವರು, ಕಳೆದ 12 ರಿಂದ 13 ತಿಂಗಳಲ್ಲಿ ನಮ್ಮ ಆಸ್ಪತ್ರೆಯು 8,200 ಬಿಎಂಟಿಸಿ ಚಾಲಕರಿಗೆ ಹೃದಯ ಸಂಬಂಧಿ ಕಾಯಿಲೆಗಳ ತಪಾಸಣೆ ಮಾಡಿದೆ. ಹೃದಯ ಸಂಬಂಧಿ ಸಮಸ್ಯೆಗಳಿಗಾಗಿ ಚಾಲಕರ ತಪಾಸಣೆ ನಡೆಸಲು ಆಸ್ಪತ್ರೆಯು ಆಗಸ್ಟ್ 2022ರಲ್ಲಿ BMTC ಯೊಂದಿಗೆ ಒಪ್ಪಂದವೊಂದಕ್ಕೆ ಸಹಿ ಹಾಕಿತ್ತು ಎಂದು ತಿಳಿಸಿದ್ದಾರೆ.

ಎಲ್ಲಾ ಚಾಲಕರಿಗೂ ರಕ್ತ ಪರೀಕ್ಷೆ ಸೇರಿದಂತೆ ಹೃದಯದ ಒತ್ತಡ(ಟ್ರೆಡ್‌ಮಿಲ್) ಪರೀಕ್ಷೆ, ಇಸಿಜಿ ಮತ್ತು ಎಕೋಕಾರ್ಡಿಯೋಗ್ರಾಮ್‌ಗಳೊಂದಿಗೆ (ಇಕೋ) ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗಿದೆ. 8,200 ಚಾಲಕರಿಗೆ ಆರೋಗ್ಯ ತಪಾಸಣೆ ಮಾಡಿದ್ದು, ಅವರಲ್ಲಿ ಶೇ. 40 ರಷ್ಟು ಚಾಲಕರು ಮಧುಮೇಹಿಗಳಾಗಿದ್ದಾರೆ ಮತ್ತು ಶೇ. 40 ರಷ್ಟು ಚಾಲಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅಲ್ಲದೆ ಶೇ. 62 ರಷ್ಟು ಚಾಲಕರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂದು ತಪಾಸಣೆಯಲ್ಲಿ ದೃಢಪಟ್ಟಿದೆ.

ಈಗಾಗಲೇ ಹೃದಯದಲ್ಲಿ ಬ್ಲಾಕೇಜ್ ನಂತಹ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಶೇಕಡಾ 5 ರಷ್ಟು ಚಾಲಕರಿಗೆ ವೈದ್ಯರಿಗೆ ಎಚ್ಚರಿಕೆ ನೀಡಿದ್ದಾರೆ. ಸುಮಾರು ಶೇ. 35 ರಷ್ಟು ಚಾಲಕರು ಧೂಮಪಾನಿಗಳಾಗಿರುವುದು ಎಂದು ಕಂಡುಬಂದಿದೆ.

ಚಾಲಕರು ಅನಿಯಮಿತ ಕೆಲಸದ ಸಮಯ, ಅಸಮರ್ಪಕ ಆಹಾರ ಸೇವನೆ, ವ್ಯಾಯಾಮದ ಕೊರತೆ ಮತ್ತು ದೂರದ ಪ್ರಯಾಣದ ಸಮಯದಲ್ಲಿ ನಿರಂತರವಾಗಿ ಕುಳಿತುಕೊಳ್ಳುವುದರಿಂದ ಆಯಾಸದಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ಗುರಿಯಾಗುತ್ತಿದ್ದಾರೆ ಎಂದು ಡಾ. ಸಿ.ಎನ್ ಮಂಜುನಾಥ್ ಅವರು ವಿವರಿಸಿದ್ದಾರೆ.

ಇದೇ ರೀತಿಯ ಸಮಗ್ರ ಆರೋಗ್ಯ ತಪಾಸಣೆಗಳನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಮತ್ತು ಪೊಲೀಸ್ ಸಿಬ್ಬಂದಿಗಳಿಗೂ ನಡೆಸುವ ಪ್ರಸ್ತಾಪ ಮಾಡಲಾಗಿದೆ. ಏಕೆಂದರೆ ಅವರು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯದಲ್ಲಿದ್ದಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com