ನವೆಂಬರ್ 2 ರಂದು 15 ಸದಸ್ಯರ SEP ಸಮಿತಿಯ ಮೊದಲ ಸಭೆ

ರಾಜ್ಯ ಶಿಕ್ಷಣ ನೀತಿಯ(ಎಸ್‌ಇಪಿ) ರೂಪಿಸಲು ರಾಜ್ಯ ಸರ್ಕಾರ ರಚಿಸಿರುವ 15 ಸದಸ್ಯರ ಸಮಿತಿಯು ನವೆಂಬರ್ 2 ರಂದು ತನ್ನ ಚೊಚ್ಚಲ ಸಭೆ ನಡೆಸಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯ ಶಿಕ್ಷಣ ನೀತಿಯ(ಎಸ್‌ಇಪಿ) ರೂಪಿಸಲು ರಾಜ್ಯ ಸರ್ಕಾರ ರಚಿಸಿರುವ 15 ಸದಸ್ಯರ ಸಮಿತಿಯು ನವೆಂಬರ್ 2 ರಂದು ತನ್ನ ಚೊಚ್ಚಲ ಸಭೆ ನಡೆಸಲಿದೆ.

ನವೆಂಬರ್ 3 ರಂದು ಎಂಟು ಸದಸ್ಯರ ತಜ್ಞರು/ಸಲಹೆಗಾರರ ಸಮಿತಿಯ ಸಭೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.

“ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸದಸ್ಯರೊಂದಿಗೆ ಉಪ ಸಮಿತಿಗಳನ್ನು ರಚಿಸುವುದು ಸಭೆಯ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿದೆ. ಏಕೆಂದರೆ ಯಾವುದೇ ಸರ್ಕಾರಿ ಅಧಿಕಾರಿಗಳನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಿಸಿಲ್ಲ. ಉಪ ಸಮಿತಿಗಳ ನಿಯಮಗಳು ಮತ್ತು ಷರತ್ತುಗಳನ್ನು ಸಹ ಚರ್ಚಿಸಲಾಗುವುದು. ಸಮಿತಿಗಳ ಕಾರ್ಯವನ್ನು ಇನ್ನೂ ನಿರ್ಧರಿಸಲಾಗಿಲ್ಲ” ಎಂದು ಮೂಲಗಳು ತಿಳಿಸಿವೆ.

ರಚಿಸಲಾಗುವ ಉಪಸಮಿತಿಗಳಿಗೆ ವರದಿ ಸಿದ್ಧಪಡಿಸಲು ಮತ್ತು ವರದಿ ಸಲ್ಲಿಸಲು ಗಡುವು ನೀಡಲಾಗುವುದು. 15 ಸದಸ್ಯರ ಸಮಿತಿ ಸದಸ್ಯರು ರಾಜ್ಯ ಶಿಕ್ಷಣ ನೀತಿ ಆಯೋಗದ ಕಾರ್ಯಗಳ ಬಗ್ಗೆಯೂ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಶಿಕ್ಷಣ ನೀತಿ ಪರಿಚಯಸಲು ಸಮಯ ತೆಗೆದುಕೊಳ್ಳುತ್ತದೆ. ಎಸ್ ಇಪಿ ಅಂತಿಮಗೊಳಿಸಿದ ನಂತರವೇ ಅಧ್ಯಾಯಗಳನ್ನು ಸೇರಿಸಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ) ಯಲ್ಲಿರುವಂತೆ ಸಮಿತಿಯ ಪ್ರತಿ ಸದಸ್ಯರಿಗೂ ಒಂದೊಂದು ವಿಷಯವನ್ನು ನಿರ್ವಹಿಸಲು ಸೂಚಿಸಲಾಗುತ್ತದೆ. ಆದರೆ ಈ ಬಗ್ಗೆ ಇನ್ನೂ ಅಂತಿಮ ನಿರ್ಧರವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಅಕ್ಟೋಬರ್ 11 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೊ. ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ 15 ಸದಸ್ಯರ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ಉನ್ನತ ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಡಾ.ಭಾಗ್ಯವಾನ ಎಸ್.ಮುದಿಗೌಡ್ರ ಅವರನ್ನು ನೇಮಕ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com