ಹಿರಿಯನಾಗರಿಕರ ಸಹಾಯವಾಣಿಗೆ ಸಿಬ್ಬಂದಿ ಕೊರತೆ!

ಎಲ್ಡರ್ ಲೈನ್- ಕರ್ನಾಟಕ ಸಹಾಯವಾಣಿ (14567) ಆರಂಭವಾಗಿ 2 ವರ್ಷಗಳಾಗಿದ್ದು ಈಗ ಇದರ ಸಿಬ್ಬಂದಿಗಳ ಸಂಖ್ಯೆ ತೀವ್ರವಾಗಿ ಕುಸಿತ ಕಂಡಿದೆ. ಜೂನ್ ನಿಂದ ರಾಜ್ಯಾದ್ಯಂತ ಕೇವಲ 7 ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 
ಹಿರಿಯನಾಗರಿಕರ ಸಹಾಯವಾಣಿಗೆ ಸಿಬ್ಬಂದಿ ಕೊರತೆ!
ಹಿರಿಯನಾಗರಿಕರ ಸಹಾಯವಾಣಿಗೆ ಸಿಬ್ಬಂದಿ ಕೊರತೆ!

ಬೆಂಗಳೂರು: ಎಲ್ಡರ್ ಲೈನ್- ಕರ್ನಾಟಕ ಸಹಾಯವಾಣಿ (14567) ಆರಂಭವಾಗಿ 2 ವರ್ಷಗಳಾಗಿದ್ದು ಈಗ ಇದರ ಸಿಬ್ಬಂದಿಗಳ ಸಂಖ್ಯೆ ತೀವ್ರವಾಗಿ ಕುಸಿತ ಕಂಡಿದೆ. ಜೂನ್ ನಿಂದ ರಾಜ್ಯಾದ್ಯಂತ ಕೇವಲ 7 ಸಿಬ್ಬಂದಿಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. 

ಕೇಂದ್ರ ಸರ್ಕಾರ ಇದನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿರುವ ಎನ್ ಜಿಒಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಪುನಾರಂಭ ಮಾಡಲು ನಿರ್ಧರಿಸಿದೆ. ಬೆಂಗಳೂರು ಮೂಲದ ನೈಟಿಂಗೆಲ್ ವೈದ್ಯಕೀಯ ಟ್ರಸ್ಟ್ ನ್ನು ಕರ್ನಾಟಕದಲ್ಲಿ ಹಿರಿಯನಾಗರಿಕರ ಸಹಾಯವಾಣಿ ನಡೆಸುವುದಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಈಗ ಈ ಸಂಸ್ಥೆ ಸಹಾಯವಾಣಿ ನಡೆಸುವುದಕ್ಕೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಸ್ಥೆಗೆ ಏಪ್ರಿಲ್ ನಿಂದ ಕೇಂದ್ರ ಸರ್ಕಾರದಿಂದ ಅನುದಾನ ಸಿಕ್ಕಿಲ್ಲ. ಪರಿಣಾಮ ಇದು ಶೀಘ್ರವೇ ನಿಷ್ಕ್ರಿಯವಾಯಿತು.

ನೈಟಿಂಗೆಲ್ ಮೆಡಿಕಲ್ ಟ್ರಸ್ಟ್ ನ ಸಹ ಸಂಸ್ಥಾಪಕರಾದ ಪ್ರೇಮ್ ಕುಮಾರ್ ರಾಜ ಈ ಬಗ್ಗೆ ಮಾತನಾಡಿದ್ದು ಕೇಂದ್ರ ಸರ್ಕಾರ ಏಪ್ರಿಲ್ ನಲ್ಲಿ ಇನ್ನೂ ಮೂರು ತಿಂಗಳ ಕಾಲ (ಜೂನ್) ವರೆಗೂ ಕಾರ್ಯನಿರ್ವಹಿಸುವಂತೆ ಸೂಚಿಸಿತ್ತು ಆ ಬಳಿಕ ಯೋಜನೆಯಡಿ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸೂಚಿಸಿತು. ಜೂನ್ ನಿಂದ ಸರ್ಕಾರದಿಂದ ಯಾವುದೇ ಮಾಹಿತಿಯೂ ನಮಗೆ ಬಂದಿಲ್ಲ ಎಂದು ಹೇಳಿದ್ದಾರೆ. 

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಡಿಫೆನ್ಸ್ ಈ ಯೋಜನೆಯನ್ನು ದೇಶಾದ್ಯಂತ ರಾಜ್ಯಗಳ ಸಹಯೋಗದೊಂದಿಗೆ ಪ್ರಾರಂಭಿಸಿದ್ದವು.

ಸಹಾಯವಾಣಿ ಯೋಜನೆಯು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯದ ಜಂಟಿ ನಿರ್ದೇಶಕ ಶೇಷಪ್ಪ ಆರ್ ಒಪ್ಪಿಕೊಂಡಿದ್ದಾರೆ. ಆಯ್ಕೆ ಪ್ರಕ್ರಿಯೆ ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಮಾಹಿತಿ ಇಲ್ಲ ಎಂದೂ ಅವರು ಹೇಳಿದ್ದಾರೆ. 

ಜೂನ್ ವರೆಗೆ, ಯೋಜನೆಯು 15 ಕ್ಷೇತ್ರ ಪ್ರತಿಕ್ರಿಯೆ ಅಧಿಕಾರಿಗಳನ್ನು ಒಳಗೊಂಡಂತೆ ಸುಮಾರು 30 ಉದ್ಯೋಗಿಗಳನ್ನು ಹೊಂದಿತ್ತು, ಅವರು ಪ್ರಾಥಮಿಕ ಮಟ್ಟದಲ್ಲಿ ಹಿರಿಯ ನಾಗರಿಕರ ಅಗತ್ಯಗಳನ್ನು ಪೂರೈಸುತ್ತಾರೆ ಮತ್ತು ರಕ್ಷಣಾ ಕಾರ್ಯಾಚರಣೆಗಳೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಈಗ ಯಾವುದೇ ಕ್ಷೇತ್ರಾಧಿಕಾರಿಗಳಿಲ್ಲದೆ, ಸಹಾಯವಾಣಿ ಕರೆ ಸೇವೆಗಳನ್ನು ಮಾತ್ರ ಒದಗಿಸುತ್ತಿದೆ ಎಂದು ಪ್ರೇಮ್ ಕುಮಾರ್ ರಾಜ ಪ್ರೇಮ್ ಕುಮಾರ್ ರಾಜ ಹೇಳಿದ್ದಾರೆ.

ಹಿರಿಯ ನಾಗರಿಕರಿಗೆ ಪಿಂಚಣಿ ವಿಷಯ, ನಿಂದನೆ, ರಕ್ಷಣೆ ಅಥವಾ ವಿಚಾರಣೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಣಿಯನ್ನು ಪ್ರಾರಂಭಿಸಲಾಗಿತ್ತು. 2021 ರಲ್ಲಿ ಪ್ರಾರಂಭವಾದಾಗಿನಿಂದ, ಸಹಾಯವಾಣಿಯು ಹಿರಿಯ ನಾಗರಿಕರಿಂದ 1 ಲಕ್ಷಕ್ಕೂ ಹೆಚ್ಚು ಕರೆಗಳನ್ನು ಸ್ವೀಕರಿಸಿದೆ. ಹಿರಿಯ ನಾಗರಿಕರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com