ಬೆಂಗಳೂರು: ಮೆಟ್ರೋ ಪಿಲ್ಲರ್ ದುರಂತಕ್ಕೆ ನಾಗಾರ್ಜುನ ಕನ್ಸ್ಟ್ರಕ್ಷನ್ ಕಂಪನಿ ನೌಕರರು ಹೊಣೆ

ಜನವರಿ 10ರಂದು  ಎಚ್.ಆರ್.ಬಿ.ಆರ್. ಲೇಔಟಿನ ರಿಂಗ್ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಮಹಿಳೆ ಮತ್ತು ಆಕೆಯ ಗಂಡು ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಮೆಟ್ರೊ ಯೋಜನೆಯ ಕಾಮಗಾರಿ ನಿರ್ವಹಿಸುತ್ತಿರುವ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ನೌಕರರು ಕಾರಣ ಎಂದು ಹೇಳಲಾಗಿದೆ.
ಮೆಟ್ರೋ ಪಿಲ್ಲರ್ ದುರಂತ
ಮೆಟ್ರೋ ಪಿಲ್ಲರ್ ದುರಂತ
Updated on

ಬೆಂಗಳೂರು: ಜನವರಿ 10ರಂದು  ಎಚ್.ಆರ್.ಬಿ.ಆರ್. ಲೇಔಟಿನ ರಿಂಗ್ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದು ಮಹಿಳೆ ಮತ್ತು ಆಕೆಯ ಗಂಡು ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಮೆಟ್ರೊ ಯೋಜನೆಯ ಕಾಮಗಾರಿ ನಿರ್ವಹಿಸುತ್ತಿರುವ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿ (ಎನ್‌ಸಿಸಿ) ನೌಕರರು ಕಾರಣ ಎಂದು ಹೇಳಲಾಗಿದೆ.

ಮೆಟ್ರೋ ಅಪಘಾತದ ಕುರಿತು ವಿಚಾರಣೆ ನಡೆಸಿದ ಮೆಟ್ರೋ ರೈಲು ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್) ಆಗಸ್ಟ್ ಮೊದಲ ವಾರದಲ್ಲಿ ತಮ್ಮ ವರದಿಯನ್ನು ಸಲ್ಲಿಸಿದ್ದಾರೆ ಎಂದು ಮೆಟ್ರೋ ಮೂಲಗಳು ತಿಳಿಸಿವೆ.

ವರದಿ ಸಲ್ಲಿಸಿದ ನಂತರ ಆರು ತಿಂಗಳ ಕಾಲ ಅಮಾನತುಗೊಂಡಿದ್ದ ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್‌) ಅಧಿಕಾರಿಗಳನ್ನು ಮರುಸೇರ್ಪಡೆ ಮಾಡಲಾಗಿದೆ. ತಮ್ಮ ವರದಿಯಲ್ಲಿ, ಆಯುಕ್ತರು ಸುರಕ್ಷತಾ ಅಂಶಗಳ ಬಗ್ಗೆ BMRCL ಅನ್ನು ಎಳೆದು ತಂದಿದ್ದಾರೆ. ಭವಿಷ್ಯದಲ್ಲಿ ಇಂತಹ ಅಪಘಾತಗಳನ್ನು ತಪ್ಪಿಸಲು, ದೇಶಾದ್ಯಂತ ಮೆಟ್ರೋ ನೆಟ್ವರ್ಕ್ಗಳಿಗೆ ಸಲಹೆಯನ್ನು ನೀಡಲಾಗಿದೆ.

ಘಟನೆಯಲ್ಲಿ ತೇಜಸ್ವಿನಿ ಸುಲಾಖೆ ಮತ್ತು ವಿಹಾನ್ ಸುಲಾಖೆ ಮೃತಪಟ್ಟರೆ, ಲೋಹಿತ್ ಕುಮಾರ್ ಸುಲಾಖೆ ಮತ್ತು  ಮಗಳು ವಿಸ್ಮಿತಾ ಬದುಕುಳಿದರು. ಲೋಹಿತ್ ಅವರು ಜುಲೈನಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ತಮ್ಮ ಕುಟುಂಬ ಅನುಭವಿಸಿದ ನಷ್ಟಕ್ಕೆ  10 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಅಪಘಾತದ ನಂತರ, ಪ್ರಕರಣದ ತನಿಖೆ ಕೈಗೊಂಡಿದ್ದ ಗೋವಿಂದಪುರ ಠಾಣಾ ಪೊಲೀಸರು ಘಟನೆ ನಡೆದು ಐದು ತಿಂಗಳುಗಳ ಬಳಿಕ ಕನ್ಸ್ಟ್ರಕ್ಷನ್ ಕಂಪನಿ ಇಂಜಿನಿಯರ್ಸ್ ಹಾಗೂ ಬಿಎಂಆರ್​​​ಸಿಎಲ್ ಇಂಜಿನಿಯರ್ಸ್ ಸೇರಿದಂತೆ ಹನ್ನೊಂದು ಜನರ ವಿರುದ್ಧ ನ್ಯಾಯಾಲಯಕ್ಕೆ ಬರೋಬ್ಬರಿ 1,100 ಪುಟಗಳ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಅಪಘಾತ ಸಂಭವಿಸಿದ (ಕೆಆರ್ ಪುರಂ-ವಿಮಾನ ನಿಲ್ದಾಣ ಮಾರ್ಗದ ಪ್ಯಾಕೇಜ್ 1) ಜ್ಯೂನಿಯರ್ ಎಂಜಿನಿಯರ್ ಜೀವನ್ ಕುಮಾರ್ ಅವರನ್ನು ಸೇವೆಯಿಂದ ಬಿಎಂಆರ್‌ಸಿಎಲ್ ವಜಾಗೊಳಿಸಿದೆ ಮತ್ತು ಎನ್‌ಸಿಸಿಗೆ ದಂಡವಾಗಿ 10 ಲಕ್ಷ ರೂ.ವಿಧಿಸಿದೆ.

ಉಪ ಮುಖ್ಯ ಎಂಜಿನಿಯರ್ ವೆಂಕಟೇಶ್ ಶೆಟ್ಟಿ, ಕಾರ್ಯನಿರ್ವಾಹಕ ಎಂಜಿನಿಯರ್ ಮಹೇಶ್ ಬೆಂಡೆಕರಿ, ಸೆಕ್ಷನ್ ಎಂಜಿನಿಯರ್ ಜಾಫರ್ ಸಾದಿಕ್ ಮತ್ತು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಅವರನ್ನು ಕಳೆದ ತಿಂಗಳು ಸಿಎಂಆರ್‌ಎಸ್ ತಪ್ಪಿತಸ್ಥರಲ್ಲ ಎಂದು  ತಿಳಿಸಿದ ನಂತರ ಅವರನ್ನು ಮರುನೇಮಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಿಎಂಆರ್‌ಸಿಎಲ್ ಸುಖಾಲೆ ಕುಟುಂಬ ಸದಸ್ಯರಿಗೆ 20 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದೆ ಮತ್ತು ಹಣವನ್ನು ಠೇವಣಿ ಮಾಡಲು ಅವರ ಬ್ಯಾಂಕ್ ಖಾತೆಯ ವಿವರಗಳನ್ನು ಕೋರಿ ಹಲವು ಮನವಿ ಕಳುಹಿಸಿದೆ, ಆದರೆ ಅವರು ಇಂದಿಗೂ ಪ್ರತಿಕ್ರಿಯಿಸಲಿಲ್ಲ ಎಂದು ಮತ್ತೊಬ್ಬ ಉನ್ನತ ಅಧಿಕಾರಿ ತಿಳಿಸಿದ್ದಾರೆ, "ಕುಟುಂಬವು ಗುತ್ತಿಗೆದಾರರಿಂದ ಸುಮಾರು 1 ಕೋಟಿ ರೂಪಾಯಿಗಳ ವಿಮೆ ಪರಿಹಾರಕ್ಕೆ ಅರ್ಹವಾಗಿದೆ" ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com