ಮಾಗಡಿ ರಸ್ತೆಯಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯದ ವೈಮಾನಿಕ ನೋಟ
ಮಾಗಡಿ ರಸ್ತೆಯಲ್ಲಿರುವ ತಿಪ್ಪಗೊಂಡನಹಳ್ಳಿ ಜಲಾಶಯದ ವೈಮಾನಿಕ ನೋಟ

ಅಕ್ಟೋಬರ್‌ನಲ್ಲಿ ಎತ್ತಿನಹೊಳೆ ನೀರಿಗೆ ಟಿ.ಜಿ.ಹಳ್ಳಿ ಜಲಾಶಯ ಸಿದ್ಧ: ಭೂ ಸ್ವಾಧೀನ ಪ್ರಕ್ರಿಯೆ ಸಮಸ್ಯೆಯಿಂದ ಪೈಪ್ ಲೈನ್ ವಿಳಂಬ

ಸಕಲೇಶಪುರ ತಾಲ್ಲೂಕಿನ ನೇತ್ರಾವತಿ ನದಿಯ ಉಪನದಿಯಾದ ಎತ್ತಿನಹೊಳೆಯಿಂದ ಬೆಂಗಳೂರಿಗೆ ಪ್ರತಿದಿನ 110 ಮಿಲಿಯನ್ ಲೀಟರ್ ಕುಡಿಯುವ ನೀರಿನ ಪೂರೈಕೆಯನ್ನು (MLD) ಮಾಡುವ ದೀರ್ಘಾವಧಿಯ ಯೋಜನೆ ಶೀಘ್ರದಲ್ಲಿಯೇ ಈಡೇರುವ ಭರವಸೆಯಿಲ್ಲ. 
Published on

ಬೆಂಗಳೂರು: ಸಕಲೇಶಪುರ ತಾಲ್ಲೂಕಿನ ನೇತ್ರಾವತಿ ನದಿಯ ಉಪನದಿಯಾದ ಎತ್ತಿನಹೊಳೆಯಿಂದ ಬೆಂಗಳೂರಿಗೆ ಪ್ರತಿದಿನ 110 ಮಿಲಿಯನ್ ಲೀಟರ್ ಕುಡಿಯುವ ನೀರಿನ ಪೂರೈಕೆಯನ್ನು (MLD) ಮಾಡುವ ದೀರ್ಘಾವಧಿಯ ಯೋಜನೆ ಶೀಘ್ರದಲ್ಲಿಯೇ ಈಡೇರುವ ಭರವಸೆಯಿಲ್ಲ. 

ಮಾಗಡಿ ರಸ್ತೆಯಲ್ಲಿರುವ ತಿಪ್ಪಗೊಂಡನಹಳ್ಳಿ (T G Halli) ಜಲಾಶಯವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮುಂದಿನ ತಿಂಗಳು ಪೂರ್ಣಗೊಳಿಸಲಿದೆಯಾದರೂ, ಭೂಸ್ವಾಧೀನ ಸಮಸ್ಯೆಯಿಂದ ನೀರು ಸರಬರಾಜು ಮಾಡಲು ಪೈಪ್‌ಲೈನ್ ಅಳವಡಿಕೆ ಕಾರ್ಯ ಪೂರ್ಣಗೊಂಡಿಲ್ಲ.

ತಿಪ್ಪಗೊಂಡನಹಳ್ಳಿ ಜಲಾಶಯ ಬೆಂಗಳೂರು ನಗರದಿಂದ 29 ಕಿ.ಮೀ ದೂರದಲ್ಲಿದ್ದು, 291.57 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಪೂರ್ಣವಾಗಿ ನವೀಕರಿಸಲಾಗಿದ್ದು, ಹೊಸ ನೀರು ಸಂಸ್ಕರಣಾ ಘಟಕ ಮತ್ತು ಒಳಚರಂಡಿ ಸಂಸ್ಕರಣಾ ಘಟಕವನ್ನು ಹೊಂದಿದೆ. 74 ಅಡಿಗಳ ಸಂಗ್ರಹಣಾ ಸಾಮರ್ಥ್ಯದೊಂದಿಗೆ, ಇದನ್ನು 1933 ರಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರು ನಿರ್ಮಿಸಿದ ನಂತರ ದಶಕಗಳವರೆಗೆ ಬೆಂಗಳೂರಿನ ನೀರಿನ ಜೀವನಾಡಿಯಾಗಿತ್ತು. ರಾಸಾಯನಿಕಗಳ ಸೇರ್ಪಡೆಯಿಂದ ಅದನ್ನು ಬಳಕೆಗೆ ಯೋಗ್ಯವಲ್ಲದ ಕಾರಣ ಡಿಸೆಂಬರ್ 2012 ರಲ್ಲಿ ಮುಚ್ಚಲಾಯಿತು.

ಎತ್ತಿನಹೊಳೆ ಯೋಜನೆಯು ಈ ಜಲಾಶಯಕ್ಕೆ 1.7 ಟ್ರಿಲಿಯನ್ ಮಿಲಿಯನ್ ಕ್ಯೂಬಿಕ್ (TMC) ಅಡಿ ನೀರನ್ನು ಪೂರೈಸುತ್ತದೆ. ಬೆಂಗಳೂರಿನ ಯಲಹಂಕ, ದಾಸರಹಳ್ಳಿ, ರಾಜರಾಜೇಶ್ವರಿ ನಗರ ಮತ್ತು ಯಶವಂತಪುರ ಭಾಗಗಳಿಗೆ ಹೆಚ್ಚುವರಿ ನೀರು ಬರಲಿದೆ. ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ರಾಮನಗರ, ಚಿತ್ರದುರ್ಗ ಮತ್ತು ತುಮಕೂರು ಇತರ ಜಿಲ್ಲೆಗಳು ಇದರ ಪ್ರಯೋಜನ ಪಡೆಯಲಿವೆ.

'ತಿಪ್ಪಗೊಂಡನಹಳ್ಳಿ ನೀರು ಸರಬರಾಜು ಯೋಜನೆಯ ಪುನರುಜ್ಜೀವನ / ನವೀಕರಣ' ಕುರಿತು ಕೆಲಸ ಮಾಡುವ ಉನ್ನತ BWSSB ಅಧಿಕಾರಿಯೊಬ್ಬರು TNIE ಗೆ ಮಾಹಿತಿ ನೀಡಿದ್ದಾರೆ.ಅಕ್ಟೋಬರ್ ಅಂತ್ಯಕ್ಕೆ ನೀರು ಸರಬರಾಜು ಆರಂಭವಾಗಬಹುದು. ಕೆಲವು ಸಲಕರಣೆಗಳನ್ನು ಅಳವಡಿಸಬೇಕಾಗಿದೆ - ಫಿಲ್ಟರ್ ಬೆಡ್, ಸಂಕೋಚಕ, ಸ್ಥಿರ ಮಿಕ್ಸರ್ ಮತ್ತು ಓಝೋನೈಸೇಶನ್ ಸಿಸ್ಟಮ್ ಗಳನ್ನು ಅಳವಡಿಸಬೇಕಿದೆ. ಫಿಲ್ಟರ್ ಬೆಡ್ ಈಗಷ್ಟೇ ಪೂರ್ಣಗೊಂಡಿದೆ. ಬೆಸ್ಕಾಂ ಮತ್ತು ಕೆಪಿಟಿಸಿಎಲ್‌ನಿಂದಲೂ ವಿದ್ಯುತ್ ಪೂರೈಕೆಗೆ ಅರ್ಜಿ ಸಲ್ಲಿಸಿದ್ದು, ಈ ತಿಂಗಳ ಅಂತ್ಯದೊಳಗೆ ವಿದ್ಯುತ್ ಪೂರೈಕೆಯಾಗಲಿದೆ ಎಂದು ಭಾವಿಸುತ್ತೇವೆ.

2019 ರಲ್ಲಿ ಪ್ರಾರಂಭವಾದ BWSSB ಯೋಜನೆಗೆ ಪರಿಷ್ಕೃತ ಗಡುವು ಮಾರ್ಚ್ 2023 ಆಗಿತ್ತು. “ಜಲಾಶಯವು ಸಿದ್ಧವಾಗಲಿದೆ. ಆದರೆ ನಾವು ನೀರನ್ನು ಸ್ವೀಕರಿಸದ ಹೊರತು ಅದನ್ನು ಬಳಸಿಕೊಳ್ಳಲಾಗುವುದಿಲ್ಲ. ಪೈಪ್‌ಲೈನ್‌ನ ಒಂದು ಭಾಗವು ಕೆಲಸ ಮಾಡುತ್ತಿಲ್ಲ ಎಂದು ಅವರು ಹೇಳಿದರು. ಎತ್ತಿನಹೊಳೆ ಯೋಜನೆಯ ಹಿರಿಯ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿಗೆ ಮಾಹಿತಿ ನೀಡಿ,  261.69 ಕಿಮೀ ವರೆಗೆ ಗುರುತ್ವಾಕರ್ಷಣೆಯ ಫೀಡರ್ ಚಾನಲ್ ಮೂಲಕ ನೀರು ಹೆಚ್ಚಾಗಿ ಹರಿಯುತ್ತದೆ.

ಟಿ.ಜಿ.ಹಳ್ಳಿಗೆ ನೀರು ಪೂರೈಸಲು ಪೈಪ್‌ಲೈನ್ 42 ಕಿಮೀ ಉದ್ದಕ್ಕೆ ಮಾತ್ರ ಹಾಕಬೇಕಿದೆ. ಅವುಗಳು 2-ಮೀಟರ್ ವ್ಯಾಸದ ಬೃಹತ್ ಪೈಪ್ ಲೈನ್ ಗಳಾಗಿವೆ. ಇದರಲ್ಲಿ ತುಮಕೂರು ಮತ್ತು ರಾಮನಗರದ ರೈತರಿಗೆ ಪೈಪ್‌ಲೈನ್ ಹಾಕಲು ಜಮೀನು ನೀಡಲು ಸಮಸ್ಯೆ ಇದ್ದ ಕಾರಣ 11 ಗ್ರಾಮಗಳ ಮೂಲಕ ಹಾದು ಹೋಗುವ 10 ಕಿಮೀ ಪೈಪ್‌ಲೈನ್ ಕಾಮಗಾರಿ ಬಾಕಿ ಉಳಿದಿದೆ. ಇನ್ನು 15 ದಿನಗಳಲ್ಲಿ ಭೂಮಿ ಸಿಗುವ ಭರವಸೆಯಿದೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com