ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ವಿಮಾನ ಕಾರ್ಯಾಚರಣೆ ಆರಂಭ

ಅತ್ಯಂತ ಸುಂದರವಾಗಿ ನಿರ್ಮಿಸಲಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿ ವಿಮಾನಗಳ ಕಾರ್ಯಾಚರಣೆ ಇಂದಿನಿಂದ ಆರಂಭಗೊಂಡಿದೆ. 
ಟರ್ಮಿನಲ್ 2
ಟರ್ಮಿನಲ್ 2

ಬೆಂಗಳೂರು: ಅತ್ಯಂತ ಸುಂದರವಾಗಿ ನಿರ್ಮಿಸಲಾಗಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2 ನಲ್ಲಿ ವಿಮಾನಗಳ ಕಾರ್ಯಾಚರಣೆ ಇಂದಿನಿಂದ ಆರಂಭಗೊಂಡಿದೆ. 

13,000 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಟರ್ಮಿನಲ್ ಮೂಲಕ ಇಂದಿನಿಂದ ಅಂತಾರಾಷ್ಟ್ರೀಯ ವಿಮಾನಗಳು ಕಾರ್ಯಾಚರಣೆ ಆರಂಭಿಸಿವೆ. ಟರ್ಮಿನಲ್-2 ರಿಂದ ಟೇಕ್ ಆಫ್ ಲ್ಯಾಂಡ್ ಆಗುವ ವಿಮಾನಗಳು ಬೆಳಿಗ್ಗೆ 10.45 ರಿಂದ ಕಾರ್ಯಾಚರಣೆ ಆರಂಭಿಸಿದ್ದು, ಪ್ರಯಾಣಿಕರಿಗೆ ವಿಮಾನಗಳ ಮಾಹಿತಿ, ಸರತಿ ಸಾಲುಗಳ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಪ್ರಯಾಣಿಕರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಪ್ರಧಾನಿ ಮೋದಿ ಕಳೆದ ವರ್ಷ ನವೆಂಬರ್ 11 ರಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನ್ನು ಉದ್ಘಾಟಿಸಿದ್ದರು.ಈ ಟರ್ಮಿನಲ್ ಹೆಚ್ಚುವರಿಯಾಗಿ 2.5 ಕೋಟಿ ವೈಮಾನಿಕ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದು, ಏಷ್ಯಾದಲ್ಲೇ ಮೊದಲ ಹ್ಯಾಂಗಿಂಗ್ ಗಾರ್ಡನ್ ಇರುವ ಈ ಟರ್ಮಿನಲ್ ವಿಶ್ವದ ಅತಿ ದೊಡ್ಡ ಟರ್ಮಿನಲ್ ಗಳ ಪೈಕಿ ಒಂದಾಗಿದೆ.

ಮಾ.24, 2008 ರಂದು ದೇವನಹಳ್ಳಿ ಬಳಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಯಾಚರಣೆ ಆರಂಭಿಸಿತ್ತು. 2019 ರಲ್ಲಿ 33 ಮಿಲಿಯನ್ ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದ್ದರು. ವಿಶ್ವದಲ್ಲೇ ಇದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಮಾನ ನಿಲ್ದಾಣವಾಗಿದೆ. ದಕ್ಷಿಣ ಭಾರತದಲ್ಲಿ ಇದು ಅತಿ ಹೆಚ್ಚು ವ್ಯಸ್ತವಾಗಿರುವ ವಿಮಾನ ನಿಲ್ದಾಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com