ಸರ್ಕಾರದ ಹೊಸ ನಿಯಮ: ಗುತ್ತಿಗೆದಾರರಿಂದಲೇ 5 ವರ್ಷ ರಸ್ತೆ ನಿರ್ವಹಣೆ; ಸತೀಶ್‌ ಜಾರಕಿಹೊಳಿ ಘೋಷಣೆ

ಇನ್ನು ಮುಂದೆ ನಮ್ಮ ರಾಜ್ಯದ ರಸ್ತೆಗಳನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರೇ  ಐದು ವರ್ಷದವರೆಗೆ ನಿರ್ವಹಣೆ ಮಾಡಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರುತ್ತಿದ್ದೇವೆ. ಇಲ್ಲಿಯವರೆಗೆ ಈ ರೂಲ್ಸ್ ಇರಲಿಲ್ಲ.
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ

ಬೆಂಗಳೂರು: ಇನ್ನು ಮುಂದೆ ನಮ್ಮ ರಾಜ್ಯದ ರಸ್ತೆಗಳನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರೇ ಐದು ವರ್ಷದವರೆಗೆ ನಿರ್ವಹಣೆ ಮಾಡಬೇಕು ಎಂಬ ಹೊಸ ನಿಯಮವನ್ನು ಜಾರಿಗೆ ತರುತ್ತಿದ್ದೇವೆ. ಇಲ್ಲಿಯವರೆಗೆ ಈ ರೂಲ್ಸ್ ಇರಲಿಲ್ಲ. ಹೊಸದಾಗಿ ಜಾರಿ ಮಾಡುತ್ತಾ ಇದ್ದೇವೆ. ಗುತ್ತಿಗೆದಾರರಿಗೆ ಆ ಹೊಣೆ ನೀಡಲಾಗುವುದು. ಇನ್ನು ಟೆಂಡರ್ ಕರೆಯುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆಯಲ್ಲಿ ಸುಧಾರಣೆ ‌ಮಾಡುವುದಕ್ಕೆ ಕ್ರಮ ಕೈಗೊಂಡಿದ್ದೇವೆ. ಈ ನಿಟ್ಟಿನಲ್ಲಿಯೇ ನಿರ್ವಹಣೆಯ ಜವಾಬ್ದಾರಿಯನ್ನು ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರಿಗೇ ನೀಡಲಾಗಿದೆ ಎಂದು ತಿಳಿಸಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಆ್ಯಪ್ ಸಿದ್ಧವಾಗುತ್ತಿದೆ. ಟ್ರಯಲ್‌ನಲ್ಲಿದೆ. ಇದು ಬಿಡುಗಡೆಯಾದರೆ ಅನುಕೂಲ ಆಗಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದು, ಇದು ಹೇಗೆ ಕಾರ್ಯನಿರ್ವಹಣೆ ಮಾಡಲಿದೆ? ಇದು ಯಾವುದಕ್ಕೆಲ್ಲ ಉಪಯೋಗವಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

ನಮ್ಮ ಐಬಿಗಳ ನಿರ್ವಹಣೆ ಮಾಡಲು ಇಬ್ಬರು, ಮೂವರು ಜನ ಸೇವೆಗೆ ಗುತ್ತಿಗೆದಾರ ಆಧಾರಿತವಾಗಿ ನೇಮಕ ಮಾಡುತ್ತೇವೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಇದೇ ವೇಳೆ ತಿಳಿಸಿದರು. ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಮಾಡುವಾಗ ಕಳಪೆಯಾಗಿ ಮಾಡುತ್ತಾರೆ ಎಂಬ ಆರೋಪಗಳು ಹೆಚ್ಚಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ರಸ್ತೆಗಳನ್ನು ಅಭಿವೃದ್ಧಿ ಮಾಡಿದ ಗುತ್ತಿಗೆದಾರರೇ 5 ವರ್ಷಗಳ ಕಾಲ ತಾವು ಅಭಿವೃದ್ಧಿ ಮಾಡಿದ ರಸ್ತೆಗಳನ್ನು ನಿರ್ವಹಣೆ ಮಾಡಬೇಕು.

ರಾಜ್ಯದಲ್ಲಿ ಇಲ್ಲಿಯವರೆಗೆ  ಈ ನಿಯಮ ಜಾರಿಯಲ್ಲಿರಲಿಲ್ಲ. ಈಗ ಹೊಸದಾಗಿ ಈ ನಿಯಮ ಜಾರಿ ಮಾಡುತ್ತಾ ಇದ್ದೇವೆ. ಹಾಗಾಗಿ, ರಸ್ತೆಗಳ ನಿರ್ವಹಣೆಗಾಗಿ ಇನ್ನುಮುಂದೆ ಟೆಂಡರ್ ಕರೆಯುವ ಅವಶ್ಯಕತೆಯೂ ಇರುವುದಿಲ್ಲ. ಆದಾಯ ಬರುವ ಕಡೆ ಇನ್ವೆಸ್ಟ್ ಮಾಡಲು ಅವಕಾಶ ಇದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com