BMRDA ಮಾರ್ಗಸೂಚಿ ದರ ಶೇ.30 ರವರೆಗೆ ಹೆಚ್ಚಳಕ್ಕೆ ಪ್ರಸ್ತಾಪ!

ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರದೇಶಗಾಗಿ (ಬಿಎಂಆರ್‌ಡಿಎ) ಪರಿಷ್ಕೃತ ಮಾರ್ಗಸೂಚಿ ದರ ಕುರಿತು ರಾಜ್ಯ ಸರ್ಕಾರ ಪ್ರಾಥಮಿಕ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಬೆಂಗಳೂರು ಮಹಾನಗರ ಪ್ರದೇಶ ಅಭಿವೃದ್ಧಿ ಪ್ರದೇಶಗಾಗಿ (ಬಿಎಂಆರ್‌ಡಿಎ) ಪರಿಷ್ಕೃತ ಮಾರ್ಗಸೂಚಿ ದರ  ಕುರಿತು ರಾಜ್ಯ ಸರ್ಕಾರ ಪ್ರಾಥಮಿಕ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಪ್ರದೇಶ ಆಧಾರದ ಮೇಲೆ ಶೇ. 30ರವರೆಗೆ ದರವನ್ನು ಹೆಚ್ಚಿಸಲಾಗುತ್ತಿದೆ. ಇದು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಬೆಂಗಳೂರು ನಗರ ಮತ್ತು ಗ್ರಾಮಾಂತರದ ಏಳು ನೋಂದಣಿ ಜಿಲ್ಲೆಗಳಿಗೆ ಪ್ರತ್ಯೇಕ ಕರಡುಗಳನ್ನು ಸೆಪ್ಟೆಂಬರ್ 8 ರಂದು ನೀಡಲಾಗಿದೆ. ಜನರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಸೆಪ್ಟೆಂಬರ್ 23 ಗಡುವು ನೀಡಲಾಗಿದೆ. ಆ ಬಳಿಕ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಗರ ನೋಂದಣಿ ಜಿಲ್ಲೆಗಳಾದ ಬಸವನಗುಡಿ, ಜಯನಗರ, ಆರ್ ಆರ್ ನಗರ, ಶಿವಾಜಿ ನಗರ ಮತ್ತು ಗಾಂಧಿ ನಗರ ಮತ್ತು ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಗ್ರಾಮಾಂತರ ಜಿಲ್ಲೆಗಳಿಗೆ ಪ್ರಸ್ತಾವಿತ ಮಾರ್ಗದರ್ಶಿ ಮೌಲ್ಯವನ್ನು ಸೂಚಿಸಲಾಗಿದೆ.

ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಹೆಚ್ಚಳ: ನೋಂದಣಿಗಾಗಿ ನಿಗದಿಪಡಿಸಲಾದ ಸ್ಟ್ಯಾಂಪ್ ಸುಂಕವು ಮಾರ್ಗಸೂಚಿ ದರ ಶೇ. 5 ರಷ್ಟು ಹೆಚ್ಚಾಗುವುದರಿಂದ ಇದು ಯಾವುದೇ ಆಸ್ತಿ ಹೊಂದಿರುವವರ ಮೇಲೆ ಪರಿಣಾಮ ಬೀರುತ್ತದೆ. ಮತ್ತು  ಈ ಸ್ಟಾಂಪ್ ಸುಂಕದ ಶೇ. 2 ರಷ್ಟನ್ನು ಆಸ್ತಿ ತೆರಿಗೆಯಾಗಿ ಪಾವತಿಸಲಾಗುತ್ತದೆ. ಹಾಗಾಗಿ, ನೇರವಾಗಿ ಪಾವತಿಸಬೇಕಾದ ಆಸ್ತಿ ತೆರಿಗೆಯಲ್ಲಿ ಹೆಚ್ಚಳವಾಗಲಿದೆ ಎಂದು ಅವರು ಹೇಳಿದರು. ಮಾರುಕಟ್ಟೆ ಮೌಲ್ಯಕ್ಕೆ ಸಮನಾಗಿ ತರಲು ಸರ್ಕಾರವು ಇದನ್ನು ಅಸಂಗತ ತಿದ್ದುಪಡಿ ಎಂದು ಕರೆಯಲು ಆದ್ಯತೆ ನೀಡುತ್ತದೆ.

ಕೃಷಿ ಭೂಮಿಗೆ ಮಾರ್ಗಸೂಚಿ ದರವನ್ನು ಪ್ರಸ್ತುತ ಮೌಲ್ಯಕ್ಕಿಂತ ಶೇ. 50 ರಷ್ಟು ಹೆಚ್ಚಿಸಲಾಗಿದೆ. ಸೈಟ್‌ಗಳಿಗೆ, ಪ್ರದೇಶವನ್ನು ಅವಲಂಬಿಸಿ ಶೇ. 30 ರಷ್ಟು ಹೆಚ್ಚಿಸಲಾಗಿದೆ. ಅಪಾರ್ಟ್‌ಮೆಂಟ್‌ಗಳ ಮಾರ್ಗದರ್ಶಿ ಮೌಲ್ಯವನ್ನು ಶೇ. 5 ರಿಂದ ಶೇ. 20 ರಷ್ಟು ಹೆಚ್ಚಿಸಲಾಗಿದೆ. ಈ ಹೆಚ್ಚಳವನ್ನು ಮೂಲ ಮೌಲ್ಯವಾಗಿ ತೆಗೆದುಕೊಳ್ಳಲಾಗುತ್ತದೆ ಮತ್ತು ವಾಣಿಜ್ಯ ಸಂಕೀರ್ಣಗಳ ಹೆಚ್ಚಳವು ವಸತಿ ಆಸ್ತಿಗಳಿಗೆ ನಿಗದಿಪಡಿಸಿದ ಶೇ. 40 ರಷ್ಟು ಹೆಚ್ಚಾಗಿರುತ್ತದೆ" ಎಂದು ಅಧಿಕಾರಿ ಹೇಳಿದರು.

ಇತರ ಜಿಲ್ಲೆಗಳಿಗೆ ಪರಿಷ್ಕೃತ ಮಾರ್ಗಸೂಚಿ ದರವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಉಪಸಮಿತಿಯು ಕೃಷಿ ಭೂಮಿಗೆ ಶೇ. 90 ರಷ್ಟು ಹೆಚ್ಚಳವನ್ನು ಪ್ರಸ್ತಾಪಿಸಿದೆ, ಏಕೆಂದರೆ ಪ್ರಸ್ತುತ ಮೌಲ್ಯವು ಲಕ್ಷಗಳಲ್ಲಿದೆ ಮತ್ತು ಮಾರುಕಟ್ಟೆ ಮೌಲ್ಯವು ಕೋಟಿಗಳಲ್ಲಿದೆ" ಎಂದು ಅವರು ಹೇಳಿದರು.

ನಗರದಲ್ಲಿನ ಮಾರ್ಗಸೂಚಿ ಮೌಲ್ಯದ ಕುರಿತು ವಿವರಿಸಿದ ಅಧಿಕಾರಿ, ''ಜಯನಗರ 4ನೇ ಟಿ ಬ್ಲಾಕ್‌ನಲ್ಲಿರುವ ವಾಣಿಜ್ಯ ಸಂಕೀರ್ಣಗಳಿಗೆ ಪ್ರತಿ ಚದರ ಮೀಟರ್‌ಗೆ 4,63,000 ರೂ.ಗಳನ್ನು ನಿಗದಿಪಡಿಸಲಾಗಿದೆ. ಇದೇ ಮೌಲ್ಯ ಮಾರೇನಹಳ್ಳಿ 100 ಅಡಿ ರಸ್ತೆಗೂ ಅನ್ವಯಿಸುತ್ತದೆ ಎಂದು ತಿಳಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com