ಮತದಾನದಲ್ಲಿ ಪಾಲ್ಗೊಳ್ಳಲು ಪ್ರತಿಜ್ಞೆ ಮಾಡಿ, ನೇತಾರರನ್ನು ಹೊಣೆಗಾರರನ್ನಾಗಿ ಮಾಡಿ: ಪ್ರಜಾಪ್ರಭುತ್ವ ದಿನಕ್ಕೆ ತಜ್ಞರ ಮನವಿ

ಸೆಪ್ಟೆಂಬರ್ 15 ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದ್ದು, ರಾಜಕೀಯ ತಜ್ಞರು, ನೇತಾರರು, ಎನ್‌ಜಿಒಗಳು ಮತ್ತು ವಾರ್ಡ್ ಸಮಿತಿಗಳ ಸದಸ್ಯರು ಈ ದಿನವನ್ನು ಮಾತ್ರ ಪ್ರಜಾಪ್ರಭುತ್ವ ದಿನ ಎಂದು ಪರಿಗಣಿಸಬೇಡಿ ಎನ್ನುತ್ತಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸೆಪ್ಟೆಂಬರ್ 15 ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸಲಾಗುತ್ತಿದ್ದು, ರಾಜಕೀಯ ತಜ್ಞರು, ನೇತಾರರು, ಎನ್‌ಜಿಒಗಳು ಮತ್ತು ವಾರ್ಡ್ ಸಮಿತಿಗಳ ಸದಸ್ಯರು ಈ ದಿನವನ್ನು ಮಾತ್ರ ಪ್ರಜಾಪ್ರಭುತ್ವ ದಿನ ಎಂದು ಪರಿಗಣಿಸಬೇಡಿ ಎನ್ನುತ್ತಾರೆ. 

ಜನರು ಪ್ರತಿ ಚುನಾವಣೆಗಳಲ್ಲಿ ಭಾಗವಹಿಸಿ ಆಡಳಿತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎನ್ನುತ್ತಾರೆ. 2007 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ ಎಂದು ಘೋಷಿಸಿತು.

ಕಲಬುರಗಿ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಅಧ್ಯಕ್ಷ ಪ್ರೊ.ಗೂರು ಶ್ರೀರಾಮುಲು ಮತ್ತು ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರತಿನಿತ್ಯ ಪ್ರಜಾಪ್ರಭುತ್ವ ವಿಚಾರ ಸಂಕಿರಣದಲ್ಲಿ ಪ್ರಜಾಪ್ರಭುತ್ವದ ಸಾರವನ್ನು ಅರ್ಥಮಾಡಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. 

ಪ್ರಜಾಪ್ರಭುತ್ವದ ದೇಶವು ಸರ್ಕಾರದ ವ್ಯವಸ್ಥೆಯನ್ನು ಹೊಂದಿದೆ, ಇದರಲ್ಲಿ ಜನರು ನಿರ್ಧಾರ ತೆಗೆದುಕೊಳ್ಳುವಲ್ಲಿ ಭಾಗವಹಿಸುವ ಮತ್ತು ನಿರ್ಧಾರ ತೆಗೆದುಕೊಳ್ಳುವವರನ್ನು ಹೊಣೆಗಾರರನ್ನಾಗಿ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಪ್ರಜಾಪ್ರಭುತ್ವವು ನಿರ್ಧಾರ ತೆಗೆದುಕೊಳ್ಳುವ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆಡಳಿತದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ನಾಗರಿಕರಿಗೆ ಘನತೆಯನ್ನು ನೀಡುತ್ತದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವ ಎಂದರೆ ಕೇವಲ ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣರಾಜ್ಯೋತ್ಸವ ಆಚರಿಸುವುದಲ್ಲ, ಐದು ವರ್ಷಕ್ಕೊಮ್ಮೆ ಮತದಾನ ಮಾಡುವುದಲ್ಲ, ನಾಗರಿಕರು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳೊಂದಿಗೆ ಸಕ್ರಿಯವಾಗಿ ಪಾಲ್ಗೊಳ್ಳುವ ನಿರಂತರ ಪ್ರಕ್ರಿಯೆ ಇದಾಗಿದೆ ಎಂದು ಜನಾಗ್ರಹದ ನಾಗರಿಕ ಸಹಭಾಗಿತ್ವದ ಮುಖ್ಯಸ್ಥ ಸಂತೋಷ ನರಗುಂದ ಹೇಳಿದರು. 

ಸಕ್ರಿಯ ಪೌರತ್ವವು ಜಾಗತಿಕ ಸಮಸ್ಯೆಗಳಾದ ಪರಿಸರ ಸುಸ್ಥಿರತೆ ಮತ್ತು ಹವಾಮಾನ ಬದಲಾವಣೆ ಮತ್ತು ಸಾರ್ವಜನಿಕ ಆರೋಗ್ಯ, ನಾಗರಿಕ ಮೂಲಸೌಕರ್ಯ ಮತ್ತು ಸೇವೆಗಳಂತಹ ಆಡಳಿತದ ಪ್ರಮುಖ ಅಂಶಗಳಿಗೆ ಸ್ಥಳೀಯ ಪರಿಹಾರಗಳನ್ನು ಕಂಡುಹಿಡಿಯುವುದು ಮತ್ತು ಕಾರ್ಯನಿರ್ವಹಿಸುವುದು, ಇದು ನಮ್ಮ ನಗರಗಳು, ಪಟ್ಟಣಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಕೊಡುಗೆ ನೀಡುತ್ತದೆ ಎಂದು ಸಂತೋಷ್ ನರಗುಂದ ಹೇಳುತ್ತಾರೆ. 

ಹುಬ್ಬಳ್ಳಿಯ ಕೆಎಲ್‌ಇ ಸೊಸೈಟಿಯ ಗುರುಸಿದ್ದಪ್ಪ ಕೋತಂಬ್ರಿ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಶಾರದ ಬಿ.ಪಾಟೀಲ, ಪ್ರಜಾಪ್ರಭುತ್ವ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ನಾವು, ಭಾರತದ ಜನರು, ಸರ್ವೋಚ್ಚ ಕಾನೂನನ್ನು ಅಂಗೀಕರಿಸಿದ್ದೇವೆ, ಅಂದರೆ ಸಂವಿಧಾನ, ಅದರ ಅಡಿಯಲ್ಲಿ ನಮ್ಮಿಂದ ಆಯ್ಕೆಯಾದ ಸರ್ಕಾರವು ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಗುರಿಗಳನ್ನು ಸಾಧಿಸಲು ಕಾರ್ಯನಿರ್ವಹಿಸಬೇಕು. ನಮ್ಮ ಪ್ರತಿನಿಧಿಗಳು ಸಹ ಅದೇ ರೀತಿಯಲ್ಲಿ ಕೆಲಸ ಮಾಡಲು ನಾವು ಪ್ರತಿದಿನ ಆ ಗುರಿಯತ್ತ ಕೆಲಸ ಮಾಡಬೇಕು ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com