ದೊಡ್ಡಬಳ್ಳಾಪುರ: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಲೆಯರಹಳ್ಳಿ ಬಳಿ ಕಳೆದ ರಾತ್ರಿ ನಡೆದಿದೆ.
ದೊಡ್ಡಬಳ್ಳಾಪುರದ ಬಳಿ ಕೋಳಿಫಾರಂನಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳದ ಅಲ್ಲಿಪುರ ಮೂಲದ 60 ವರ್ಷದ ಕಾಲೇ ಸರೇರಾ, 50 ವರ್ಷದ ಲಕ್ಷ್ಮಿ ಸರೇರಾ, 40 ವರ್ಷದ ಉಷಾ ಸರೇರಾ ಮತ್ತು 16 ವರ್ಷದ ಪೂಲ್ ಸರೇರಾ ಮೃತದೇಹ ಶೇಡ್ ನಲ್ಲಿ ಪತ್ತೆಯಾಗಿದೆ.
ಕಳೆದ ರಾತ್ರಿ ಚಳಿಯಿಂದ ತಪ್ಪಿಸಿಕೊಳ್ಳಲು ಇದ್ದಿಲಿನ ಪೆಟ್ಟಿಗೆಗೆ ಬೆಂಕಿ ಹಚ್ಚಿ ಮಲಗಿದ್ದಾರೆ. ನಂತರ ಹೊಗೆ ಹೆಚ್ಚಾಗಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಕಳೆದ 10 ದಿನಗಳ ಹಿಂದಷ್ಟೇ ಕಾಲೇ ಸರೇರಾ ಕುಟುಂಬ ಮೋಹನ್ ಎಂಬುವರಿಗೆ ಸೇರಿದ ಕೋಳಿಫಾರಂನಲ್ಲಿ ಕೆಲಸಕ್ಕೆ ಸೇರಿದ್ದರು ಎಂದು ತಿಳಿದುಬಂದಿದ್ದು ದೊಡ್ಡಬೆಳವಂಗಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement