15 ವರ್ಷಕ್ಕಿಂತ ಹಳೆಯ 10 ಸಾವಿರ ಸರ್ಕಾರಿ ವಾಹನಗಳು ರದ್ದಿಗೆ: ಹಂತ ಹಂತವಾಗಿ ಕ್ರಷರ್ ಗೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 15 ವರ್ಷ ಮೇಲ್ಪಟ್ಟ ಎಲ್ಲಾ ವಾಹನಗಳನ್ನು ರದ್ದುಗೊಳಿಸಬೇಕು ಎಂಬ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ಕನಿಷ್ಠ 10,000 ವಾಹನಗಳು ರದ್ದಿಗೆ ಒಳಗಾಗಲಿವೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 15 ವರ್ಷ ಮೇಲ್ಪಟ್ಟ ಎಲ್ಲಾ ವಾಹನಗಳನ್ನು ರದ್ದುಗೊಳಿಸಬೇಕು ಎಂಬ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ಕನಿಷ್ಠ 10,000 ವಾಹನಗಳು ರದ್ದಿಗೆ ಒಳಗಾಗಲಿವೆ. 

ಆದಾಗ್ಯೂ, ಅಗ್ನಿಶಾಮಕ ಮತ್ತು ತುರ್ತು ವಿಭಾಗ, ಜಲಮಂಡಳಿ ಮತ್ತು ಪೊಲೀಸ್‌ನಂತಹ ಏಜೆನ್ಸಿಗಳು ಮೊದಲು ಅವುಗಳ ಬದಲಿಯನ್ನು ಪಡೆಯಬೇಕಾಗಿರುವುದರಿಂದ ಈ ವಾಹನಗಳನ್ನು ಒಂದೇ ಬಾರಿಗೆ ಸ್ಕ್ರ್ಯಾಪ್ ಗೆ ಹಾಕಲು ಸಾಧ್ಯವಿಲ್ಲ.

ಬಿಳಿ ಹಲಗೆಯ ಸರ್ಕಾರಿ ವಾಹನಗಳಲ್ಲೂ ಇದೇ ರೀತಿ ಆಗಿದ್ದು, ರಾಜ್ಯದ ಬೊಕ್ಕಸಕ್ಕೆ ಭಾರಿ ಆರ್ಥಿಕ ಹೊರೆಯಾಗುವುದರಿಂದ ವಾಹನಗಳಿಗೆ ಹಂತ ಹಂತವಾಗಿ ಟೆಂಡರ್ ಕರೆಯಬೇಕಾಗುತ್ತದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಸಾರಿಗೆ ಇಲಾಖೆ (Enforcement South) ಹೆಚ್ಚುವರಿ ಆಯುಕ್ತ ಮಲ್ಲಿಕಾರ್ಜುನ ಸಿ, ರಾಜ್ಯದಲ್ಲಿ 10,000 ಕ್ಕೂ ಹೆಚ್ಚು ಸರ್ಕಾರಿ ವಾಹನಗಳು ಸ್ಕ್ರ್ಯಾಪಿಂಗ್‌ಗೆ ಒಳಗಾಗಬೇಕಾಗಿದೆ. ಅಗ್ನಿಶಾಮಕ ಸೇವೆ, ಪೊಲೀಸ್ ಇಲಾಖೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಂತಹ ಇಲಾಖೆಗಳಲ್ಲಿ ವಾಹನಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಅವುಗಳನ್ನು ಒಂದೇ ಬಾರಿಗೆ ಸ್ಕ್ರ್ಯಾಪ್ ಮಾಡುವುದು ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಹಂತ ಹಂತವಾಗಿ ಸರ್ಕಾರಿ ವಾಹನಗಳ ಸ್ಕ್ರ್ಯಾಪಿಂಗ್‌ ಮಾಡಬೇಕು.

ಸರ್ಕಾರಿ ಅಧಿಕಾರಿಗಳು ಬಳಸುವಂತಹ ಇತರ ಸರ್ಕಾರಿ ವಾಹನಗಳಿಗೂ ಒಂದೇ ಬಾರಿಗೆ ಎಲ್ಲವನ್ನೂ ರದ್ದುಗೊಳಿಸುವುದರಿಂದ ಸರ್ಕಾರಿ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದರು.

ಹೊಸ ವಾಹನಗಳನ್ನು ಖರೀದಿಸಲು ಸರ್ಕಾರವು ಆದೇಶವನ್ನು ನೀಡಿದರೆ, ಖಾಸಗಿ ಕಂಪನಿಗಳು ತಕ್ಷಣವೇ ಎಲ್ಲವನ್ನೂ ಪೂರೈಸಲು ಸಾಧ್ಯವಿಲ್ಲ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ 15 ವರ್ಷ ದಾಟಿದ ಸರ್ಕಾರಿ ವಾಹನಗಳನ್ನು ಹಂತ ಹಂತವಾಗಿ ರದ್ದುಪಡಿಸುವವರೆಗೆ ಸಂಚಾರಕ್ಕೆ ಅನುಮತಿ ನೀಡುವಂತೆ ರಾಜ್ಯ ಸಾರಿಗೆ ಇಲಾಖೆ ಸಚಿವಾಲಯಕ್ಕೆ ಮನವಿ ಮಾಡಲಿದೆ. 

ದೇವನಹಳ್ಳಿ ತಾಲೂಕಿನ ವಿಜಯಪುರದಲ್ಲಿ ಮೊದಲ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯ (RVSF) ಸ್ಥಾಪಿಸಲು ಸಾರಿಗೆ ಇಲಾಖೆ ಖಾಸಗಿ ಕಂಪನಿಗೆ ಅನುಮತಿ ನೀಡಿದ್ದು, ಜನರು ಸ್ವಯಂ ಪ್ರೇರಿತವಾಗಿ ತಮ್ಮ ಹಳೆಯ ವಾಹನಗಳನ್ನು ಸ್ಕ್ರ್ಯಾಪ್ ಮಾಡಲು ಕೇಂದ್ರವನ್ನು ಬಳಸಿಕೊಳ್ಳುವಂತೆ ಮನವಿ ಮಾಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com