24 ಗಂಟೆಗಳಲ್ಲಿ 3,797 ಉಚಿತ ಇಸಿಜಿ: ಗಿನ್ನೆಸ್ ದಾಖಲೆ ನಿರ್ಮಿಸಿದ ನಾರಾಯಣ ಹೆಲ್ತ್

ಹೃದಯ ಸಂಬಂಧಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆ ಮೊನ್ನೆ ಗುರುವಾರ 24 ಗಂಟೆಗಳಲ್ಲಿ 3,797 ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಮಾಡಿ ಗಿನ್ನೆಸ್ ದಾಖಲೆ ನಿರ್ಮಿಸಿದೆ.
ನಾರಾಯಣ ಹೆಲ್ತ್ ಒಂದು ದಿನದಲ್ಲಿ 3,797 ಇಸಿಜಿಗಳನ್ನು ನಡೆಸಿ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ
ನಾರಾಯಣ ಹೆಲ್ತ್ ಒಂದು ದಿನದಲ್ಲಿ 3,797 ಇಸಿಜಿಗಳನ್ನು ನಡೆಸಿ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ

ಬೆಂಗಳೂರು: ಹೃದಯ ಸಂಬಂಧಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಿ ಬೆಂಗಳೂರಿನ ನಾರಾಯಣ ಹೆಲ್ತ್ ಸಂಸ್ಥೆ ಮೊನ್ನೆ ಗುರುವಾರ 24 ಗಂಟೆಗಳಲ್ಲಿ 3,797 ಎಲೆಕ್ಟ್ರೋಕಾರ್ಡಿಯೋಗ್ರಾಮ್ (ECG) ಮಾಡಿ ಗಿನ್ನೆಸ್ ದಾಖಲೆ ನಿರ್ಮಿಸಿದೆ.

ನಾರಾಯಣ ಹೆಲ್ತ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷ ಡಾ ದೇವಿ ಶೆಟ್ಟಿ, ಆರೋಗ್ಯ ತಪಾಸಣೆ ಮತ್ತು ಹೃದ್ರೋಗಗಳನ್ನು ತಡೆಗಟ್ಟಲು ನಿಯಮಿತ ತಪಾಸಣೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಏಕೈಕ ಉದ್ದೇಶದಿಂದ ಈ ಪ್ರಯತ್ನ ಮಾಡಲಾಗಿದೆ. ಇದು ನಮ್ಮ ತಂಡದ ಕೌಶಲ್ಯ ಮತ್ತು ಸಮರ್ಪಣೆಯನ್ನು ಪ್ರದರ್ಶಿಸುತ್ತದೆ ಎಂದರು. 

ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನ ಆಚರಣೆಯಿದೆ. ಹೃದ್ರೋಗ ತಜ್ಞರು ಭಾರತದಲ್ಲಿ ಹೆಚ್ಚುತ್ತಿರುವ ಹೃದಯರಕ್ತನಾಳದ ಕಾಯಿಲೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದಾರೆ. 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಉಚಿತ ಇಸಿಜಿಗಳನ್ನು ಮಾಡಲು ಆಸ್ಪತ್ರೆಯಲ್ಲಿ ಶಿಬಿರ ಆಯೋಜಿಸಲಾಗಿದೆ. 

ಈ ಹಿಂದೆ ಯಾವುದೇ ಆಸ್ಪತ್ರೆಯು ಒಂದೇ ಸೌಲಭ್ಯದಲ್ಲಿ ಇಂತಹ ದಾಖಲೆಯನ್ನು ಪ್ರಯತ್ನಿಸಿಲ್ಲ ಎಂದು ವೈದ್ಯರು ವಿವರಿಸಿದರು. ದಾಖಲೆ ನಿರ್ಮಿಸಲು ದಿನದಲ್ಲಿ 250 ಇಸಿಜಿಗಳನ್ನು ಮಾಡಬೇಕಾಗುತ್ತದೆ, ಇದು ದಿನದ ಮೊದಲ ಕೆಲವು ಗಂಟೆಗಳಲ್ಲಿ ಸಾಧಿಸಲಾಯಿತು.

ವ್ಯಕ್ತಿಯ ಹೃದಯದ ಆರೋಗ್ಯವನ್ನು ಅಧ್ಯಯನ ಮಾಡಲು ಇಸಿಜಿ ಒಂದು ಸರಳ ಹಂತವಾಗಿದೆ. ವೈದ್ಯರು ಹೆಚ್ಚಿನ ತನಿಖೆ ಮಾಡಲು ಮತ್ತು ಅದಕ್ಕೆ ಅನುಗುಣವಾಗಿ ಚಿಕಿತ್ಸೆಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ ಎಂದು ನಾರಾಯಣ ಹೆಲ್ತ್ ಸಿಟಿಯ ವಯಸ್ಕ ಹೃದ್ರೋಗಶಾಸ್ತ್ರದ ಸಲಹೆಗಾರ ಡಾ.ಪ್ರವೀಣ್ ಸದರ್ಮಿನ್ ವಿವರಿಸಿದರು. "ಭಾರತವನ್ನು ಈಗಾಗಲೇ ವಿಶ್ವದ ಮಧುಮೇಹ ರಾಜಧಾನಿ ಎಂದು ಕರೆಯಲಾಗುತ್ತದೆ ಮತ್ತು ಹೃದಯರಕ್ತನಾಳದ ಕಾಯಿಲೆಗಳಿಗೆ ರಾಜಧಾನಿಯಾಗುವ ಸಾಧ್ಯತೆಯಿದೆ, ಅದಕ್ಕೆ ಮೊದಲು ಜನರು ಎಚ್ಚೆತ್ತುಕೊಳ್ಳಬೇಕು ಎಂದರು. 

ಮಾದಕ ವ್ಯಸನ ಮತ್ತು ಉತ್ತಮ ಜೀವನ ಶೈಲಿಯ ಕೊರತೆ ಒತ್ತಡವು ಹೃದಯ ಕಾಯಿಲೆಗಳಿಗೆ ಪ್ರಮುಖ ಅಂಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com