ನಮ್ಮ ಮೆಟ್ರೋದಲ್ಲಿ ಟಿಕೆಟ್ ರಹಿತ ಪ್ರಯಾಣ, ಅಪಾಯಕಾರಿ ಸ್ಟಂಟ್‌: ವಿದೇಶಿ ಯೂಟ್ಯೂಬರ್ ವಿರುದ್ಧ ದೂರು

ಟಿಕೆಟ್ ರಹಿತವಾಗಿ ಪ್ರಯಾಣಿಸಿ ಕೆಆರ್ ಮಾರ್ಕೆಟ್ ಮೆಟ್ರೋ ನಿಲ್ದಾಣದ ಎಎಫ್‌ಸಿ ಗೇಟ್ ಬಳಿ ಟರ್ನ್‌ಸ್ಟೈಲ್‌ನಿಂದ ಜಿಗಿದ ಸೈಪ್ರಸ್ ಮೂಲದ ಜನಪ್ರಿಯ ಯೂಟ್ಯೂಬರ್ ವಿರುದ್ಧ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದೆ. 
ಫಿಡಿಯಾಸ್ ಪನಾಯೊಟಸ್
ಫಿಡಿಯಾಸ್ ಪನಾಯೊಟಸ್

ಬೆಂಗಳೂರು: ಟಿಕೆಟ್ ರಹಿತವಾಗಿ ಪ್ರಯಾಣಿಸಿ ಕೆಆರ್ ಮಾರ್ಕೆಟ್ ಮೆಟ್ರೋ ನಿಲ್ದಾಣದ ಎಎಫ್‌ಸಿ ಗೇಟ್ ಬಳಿ ಟರ್ನ್‌ಸ್ಟೈಲ್‌ನಿಂದ ಜಿಗಿದ ಸೈಪ್ರಸ್ ಮೂಲದ ಜನಪ್ರಿಯ ಯೂಟ್ಯೂಬರ್ ವಿರುದ್ಧ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಕೆಆರ್ ಮಾರುಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದೆ. 

ಫಿಡಿಯಾಸ್ ಪನಾಯೊಟಸ್ ತನ್ನ 2.26 ಮಿಲಿಯನ್ ಅನುಯಾಯಿಗಳಿಗೆ, 'ಭಾರತದಲ್ಲಿ ಮೆಟ್ರೋವನ್ನು ಹೇಗೆ ಉಚಿತವಾಗಿ ಪಡೆಯುವುದು ಎಂದು ನಾನು ನಿಮಗೆ ಕಲಿಸುತ್ತೇನೆ ಎಂದು ಹೇಳಿ ಸ್ಟಂಟ್ ಮಾಡಿದ್ದನು. ಅಲ್ಲದೆ ರೈಲಿನೊಳಗೆ ಪುಷ್-ಅಪ್‌ಗಳನ್ನೂ ಸಹ ಮಾಡುತ್ತಾನೆ. ಈ ವಿಡಿಯೋ ವೈರಲ್ ಆಗಿದ್ದು ಅದರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. 

ಫಿಡಿಯಾಸ್ ಪನಾಯೊಟಸ್ ವಿರುದ್ಧ ಕೆಆರ್ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಿಸಲು ಕೆಎಸ್‌ಆರ್‌ಪಿ ಪೊಲೀಸರನ್ನು ಕೇಳಿದ್ದು ಆತನ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದೇವೆ. ಒಂದು ಅಥವಾ ಎರಡು ದಿನಗಳಲ್ಲಿ ಎಫ್‌ಐಆರ್ ದಾಖಲಿಸಲಾಗುವುದು ಎಂದು ಮೆಟ್ರೋ ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com