ಪಿಎಸ್‌ಐ ಹಗರಣ: ನ್ಯಾಯಾಂಗ ಆಯೋಗಕ್ಕೆ ಸಿಗದ ಸಹಕಾರ; ತನಿಖೆ ಪೂರ್ಣಗೊಳ್ಳದ ಹೊರತು ನೇಮಕವಿಲ್ಲ ಎಂದ ಸರ್ಕಾರ!

ಬಿಜೆಪಿ ಆಡಳಿತಾವಧಿಯಲ್ಲಿ ಬಯಲಾದ ಪಿಎಸ್‌ಐ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ವೀರಪ್ಪ ನೇತೃತ್ವದ ಏಕಸದಸ್ಯ ತನಿಖಾ ಆಯೋಗಕ್ಕೆ ಪ್ರತಿವಾದಿಗಳಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ, ಹೀಗಾಗಿ ತನಿಖೆಗೆ ಅಡ್ಡಿಯಾಗಿದೆ.
ಪಿಎಸ್‌ಐ
ಪಿಎಸ್‌ಐ
Updated on

ಬೆಂಗಳೂರು: ಕಳೆದ ವರ್ಷ ಬಿಜೆಪಿ ಆಡಳಿತಾವಧಿಯಲ್ಲಿ ಬಯಲಾದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ನಿವೃತ್ತ ನ್ಯಾಯಮೂರ್ತಿ ವೀರಪ್ಪ ನೇತೃತ್ವದ ಏಕಸದಸ್ಯ ತನಿಖಾ ಆಯೋಗಕ್ಕೆ ಪ್ರತಿವಾದಿಗಳಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ, ಹೀಗಾಗಿ ತನಿಖೆಗೆ ಅಡ್ಡಿಯಾಗಿದೆ. ಇದರೊಂದಿಗೆ ಪೊಲೀಸ್ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಸರಕಾರ ನೇಮಕಾತಿ ಆರಂಭಿಸಲು ಹೆಚ್ಚು ಸಮಯ ಹಿಡಿಯಲಿದೆ.

ಈ ವರ್ಷದ ಜುಲೈನಲ್ಲಿ ಸರ್ಕಾರ ನಿವೃತ್ತ ನ್ಯಾಯಮೂರ್ತಿ ವೀರಪ್ಪ ಅವರ ನೇತೃತ್ವದಲ್ಲಿ ನ್ಯಾಯಾಂಗ ಆಯೋಗವನ್ನು ರಚಿಸಿತು ಮತ್ತು ತನಿಖೆಯನ್ನು ಪೂರ್ಣಗೊಳಿಸಲು ಸಮಿತಿಗೆ ಮೂರು ತಿಂಗಳ ಕಾಲಾವಕಾಶ ನೀಡಿತು.

ಜುಲೈನಲ್ಲಿ ಆಯೋಗವನ್ನು ರಚಿಸಲಾಗಿದ್ದರೂ, ಕಳೆದ ತಿಂಗಳಷ್ಟೇ ಅದಕ್ಕೆ ಕಚೇರಿ ಮತ್ತು ಸಿಬ್ಬಂದಿಯನ್ನು ನೀಡಲಾಗಿದ್ದು ಎಂದು ಸರ್ಕಾರದ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿವೆ. ಆಗಸ್ಟ್‌ನಲ್ಲಿ ಅಧಿಕಾರ ವಹಿಸಿಕೊಂಡ ಕೂಡಲೇ ಆಯೋಗವು ಅಧಿಸೂಚನೆಯನ್ನು ಹೊರಡಿಸಿ, 545 ಪಿಎಸ್‌ಐಗಳ ನೇಮಕಾತಿ ಕುರಿತು ಮಾಹಿತಿಯನ್ನು ಒದಗಿಸುವಂತೆ ಜನರನ್ನು ಆಹ್ವಾನಿಸಿತು.

ಆದರೆ ಅವರಿಗೆ ಕೇವಲ ಹತ್ತು ಪ್ರತಿಕ್ರಿಯೆಗಳು ಬರಲಿಲ್ಲ, ಅವ್ಯವಹಾರದಲ್ಲಿ ಭಾಗಿಯಾಗಿರುವ ಅಭ್ಯರ್ಥಿಗಳು, ಪರೀಕ್ಷೆ ನಡೆಸಿದ ಕಾಲೇಜು ಮತ್ತು ಶಾಲಾ ಮಾಲೀಕರು  ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ 113 ವ್ಯಕ್ತಿಗಳ ವಿರುದ್ಧ ಸಿಐಡಿ ಎಸ್ಪಿ ಅರ್ಜಿ ಸಲ್ಲಿಸಿದರು. ವೀರಪ್ಪ ಆಯೋಗವು 113 ವ್ಯಕ್ತಿಗಳಿಗೆ ಆಕ್ಷೇಪಣೆ ಸಲ್ಲಿಸಲು ನೋಟಿಸ್ ಕಳುಹಿಸಿದ್ದು, ಅವರಲ್ಲಿ 82 ಜನರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಅರ್ಜಿದಾರರು (ಎಸ್‌ಪಿ, ಸಿಐಡಿ) ಮತ್ತು ಪ್ರತಿವಾದಿಗಳಿಂದ ಅಫಿಡವಿಟ್ ಸಾಕ್ಷ್ಯವನ್ನು ದಾಖಲಿಸಿಕೊಳ್ಳುತ್ತಿದ್ದೇವೆ ಎಂದು ನ್ಯಾಯಮೂರ್ತಿ ವೀರಪ್ಪ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ  ತಿಳಿಸಿದರು. ಪ್ರತಿವಾದಿಗಳು ತಮ್ಮ ವಕೀಲರ ಮೂಲಕ ಸಲ್ಲಿಸುತ್ತಿದ್ದರೂ, ಅವರು ಸಾಕ್ಷ್ಯವನ್ನು ವಿಳಂಬ ಮಾಡುವ ಮೂಲಕ ಅಸಹಕಾರ ತೋರುತ್ತಿದ್ದಾರೆ ಎಂದು ಹೇಳಿದ್ದಾರೆ.  ಅಧಿಕಾರ ವಹಿಸಿಕೊಂಡ ಕೂಡಲೇ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದೇವ, ಆದರೆ ಎಲ್ಲವೂ ಸರಿಯಾಗಿ ನಡೆದರೆ ಮಾತ್ರ, ನಾವು ಬೇಗನೆ ತನಿಖೆ ಮುಗಿಸಬಹುದು ಎಂದು ಅವರು ಹೇಳಿದರು.

ಕೆಲವು ವಾರಗಳ ಹಿಂದೆ, ಗೃಹ ಸಚಿವ ಜಿ ಪರಮೇಶ್ವರ ಅವರು ತನಿಖೆ ಪೂರ್ಣಗೊಳ್ಳುವವರೆಗೆ ರಾಜ್ಯ ಸರ್ಕಾರ ಹೊಸ ನೇಮಕಾತಿಗಳನ್ನು ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದರು. 400 ಪಿಎಸ್‌ಐಗಳ ನೇಮಕಾತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ, ಆದರೆ  545 ಪಿಎಸ್‌ಐಗಳ ನೇಮಕಾತಿ ಬಾಕಿ ಇರುವವರೆಗೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ತನಿಖೆ ಪೂರ್ಣಗೊಂಡ ನಂತರ ನಾವು ಸಂಪೂರ್ಣವಾಗಿ ನೇಮಕ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

2021ರ ಅಕ್ಟೋಬರ್‌ನಲ್ಲಿ ಏಳು ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ನಡೆದಿತ್ತು. ಕಲಬುರಗಿಯ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಮಾಲೀಕತ್ವದ ಪರೀಕ್ಷಾ ಕೇಂದ್ರ (ಶಾಲೆ) ವಂಚನೆಗೆ ಅನುಕೂಲ ಮಾಡಿಕೊಟ್ಟಾಗ ಪ್ರಕರಣ ಬೆಳಕಿಗೆ ಬಂದಿದ್ದು, ಮಾಲೀಕರನ್ನು ಬಂಧಿಸಲಾಗಿದೆ. ಇದು ಕರ್ನಾಟಕದಲ್ಲಿ ರಾಜಕೀಯ ಪ್ರಕ್ಷುಬ್ಧತೆಗೆ ಕಾರಣವಾಯಿತು ಮತ್ತು ಕಾಂಗ್ರೆಸ್ ಸ್ವತಂತ್ರ ಸಂಸ್ಥೆ ತನಿಖೆಗೆ ಒತ್ತಾಯಿಸುತ್ತಿದ್ದರೂ ಆಗಿನ ಬಿಜೆಪಿ ಸರ್ಕಾರವು ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಿತು.

ಬೆಂಗಳೂರು, ಕಲಬುರಗಿ, ಹುಬ್ಬಳ್ಳಿ-ಧಾರವಾಡ ಮತ್ತು ತುಮಕೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು ಏಳು ಎಫ್‌ಐಆರ್‌ಗಳು ದಾಖಲಾಗಿವೆ. ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪಾಲ್ ಸೇರಿದಂತೆ ಹಲವರನ್ನು ಸಿಐಡಿ ಕಳೆದ ವರ್ಷ ಜುಲೈನಲ್ಲಿ ಬಂಧಿಸಿತ್ತು. ಸೋಮವಾರ ಅವರಿಗೆ ಜಾಮೀನು ಸಿಕ್ಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com