ದಶಕಗಳೇ ಕಳೆದರೂ ಕೊಡಗಿನ ಜೇನು ಕುರುಬ ಬಡಾವಣೆಗೆ ಮೂಲ ಸೌಕರ್ಯ ಇನ್ನೂ ಮರೀಚಿಕೆ

ಕೊಡಗಿನಲ್ಲಿ 12,000 ಕ್ಕೂ ಹೆಚ್ಚು ಜೇನುಕುರುಬ ಬುಡಕಟ್ಟು ಜನಾಂಗದವರು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿದ್ದು, ದಶಕಗಳೇ ಕಳೆದರೂ ಈ ಬುಡಕಟ್ಟು ಜನಾಂಗದವರಿಗೆ ಮೂಲ ಸೌಕರ್ಯಗಳು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.
ಹುಣಸೆಪರೆಯಲ್ಲಿ ಜೇನುಕುರುಬ ಜನಾಂಗದವರ ಮನೆ. (ಫೋಟೋ | ಎಕ್ಸ್‌ಪ್ರೆಸ್)
ಹುಣಸೆಪರೆಯಲ್ಲಿ ಜೇನುಕುರುಬ ಜನಾಂಗದವರ ಮನೆ. (ಫೋಟೋ | ಎಕ್ಸ್‌ಪ್ರೆಸ್)

ಮಡಿಕೇರಿ: ಕೊಡಗಿನಲ್ಲಿ 12,000 ಕ್ಕೂ ಹೆಚ್ಚು ಜೇನುಕುರುಬ ಬುಡಕಟ್ಟು ಜನಾಂಗದವರು ಅರಣ್ಯದ ಅಂಚಿನಲ್ಲಿ ವಾಸಿಸುತ್ತಿದ್ದು, ದಶಕಗಳೇ ಕಳೆದರೂ ಈ ಬುಡಕಟ್ಟು ಜನಾಂಗದವರಿಗೆ ಮೂಲ ಸೌಕರ್ಯಗಳು ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ.

ಸೋಮವಾರಪೇಟೆ ತಾಲೂಕಿನ ಹುಣಸೆಪಾರೆಯಲ್ಲಿನ ಗಿರಿಜನರ ಬಡಾವಣೆ ಜೇನುಕುರುಬ ಜನಾಂಗದವರ ಸಂಕಷ್ಟವನ್ನು ಎತ್ತಿ ತೋರಿಸುತ್ತಿದೆ.

ಸುಮಾರು ಮೂರು ದಶಕಗಳ ಹಿಂದೆ ಯಡವನಾಡು-ಹುಡುಗಾರು ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿರುವ ಹುಣಸೆಪಾರೆಯಲ್ಲಿ 12 ಜೇನುಕುರುಬ ಕುಟುಂಬಗಳು ಭೂಮಿ ಹಕ್ಕು ಪಡೆದಿವೆ. ಆಗ ನಿರ್ಮಿಸಿದ ಹುಲ್ಲಿನ ಮನೆಗಳಿಗೆ ಇಂದಿಗೂ ಸೂಕ್ತ ಸೌಲಭ್ಯಗಳಿಲ್ಲ. ಮೂರು ದಶಕಗಳಿಂದ ವಿದ್ಯುತ್, ಶೌಚಾಲಯ ವ್ಯವಸ್ಥೆ ಇಲ್ಲ. ಈ ಸಂಬಂಧ ಇಲ್ಲಿನ ನಿವಾಸಿಗಳಾದ ರಘು, ಯಶೋಧ ಮತ್ತಿತರರು ಹಲವು ಮನವಿ ಮಾಡಿದರೂ ಅಧಿಕಾರಿಗಳು ಮಾತ್ರ ಆ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಬುಡಕಟ್ಟು ಜನಾಂಗದವರು ಶೌಚಾಲಯ ಇಲ್ಲದೆ ಕಾಡುಗಳಲ್ಲಿ ಮಲವಿಸರ್ಜನೆ ಮಾಡುತ್ತಾರೆ ಮತ್ತು ಅವರು ತಮ್ಮ ಮೊಬೈಲ್ ಫೋನ್‌ಗಳನ್ನು ಚಾರ್ಜ್ ಮಾಡಲು ಹಲವಾರು ಅಂಗಡಿಯವರಿಗೆ ಮನವಿ ಮಾಡುತ್ತಾರೆ. 

''ಹಲವು ಜೇನುಕುರುಬ ಬಡಾವಣೆಗಳಲ್ಲಿ ಮೂಲ ಸೌಕರ್ಯಗಳಿಲ್ಲ. ಸಮುದಾಯಕ್ಕೆ ನಾಯಕತ್ವ ಮತ್ತು ಧ್ವನಿ ಎತ್ತುವ ಕೊರತೆಯಿದೆ. ನಮ್ಮ ದನಿ ಅಧಿಕಾರಿಗಳಿಗೆ ತಲುಪುತ್ತಿಲ್ಲ’ ಎಂದು ಬುಡಕಟ್ಟು ಮುಖಂಡರಲ್ಲಿ ಒಬ್ಬರಾದ ಜೇನುಕುರುಬರ ಟಿ ಕಾಳಿಂಗ ಅವರು ಹೇಳಿದ್ದಾರೆ.

ಜೇನುಕುರುಬರ ಸಂಘ ಈಗ ಸಮುದಾಯದ ಸಮಸ್ಯೆಗಳಿಗೆ ಧ್ವನಿಗೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಶೀಘ್ರದಲ್ಲೇ, ನಾವು ಅರಣ್ಯ ಇಲಾಖೆಯ ಸಿಸಿಎಫ್ ಮತ್ತು ಇತರ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡುತ್ತೇವೆ ಮತ್ತು ಜೇನು ಕುರುಬ ಬಡಾವಣೆಗಳಾದ್ಯಂತ ಗಣತಿ ನಡೆಸುವಂತೆ ಒತ್ತಾಯಿಸುತ್ತೇವೆ. ಜನಗಣತಿಯು ಈ ಬಡಾವಣೆಗಳಲ್ಲಿ ಸೌಲಭ್ಯಗಳ ಕೊರತೆಯನ್ನು ನಿರ್ಧರಿಸುತ್ತದೆ ಮತ್ತು ಮೂಲ ಸೌಕರ್ಯಗಳನ್ನು ನೀಡಲು ನಾವು ಅಧಿಕಾರಿಗಳನ್ನು ಒತ್ತಾಯಿಸುತ್ತೇವೆ ಎಂದು ಕಾಳಿಂಗ ಅವರು ತಿಳಿಸಿದ್ದಾರೆ.

‘ಬಹುತೇಕ ಬಡಾವಣೆಗಳಲ್ಲಿ ವಿದ್ಯುತ್‌ ಮತ್ತಿತರ ಸೌಲಭ್ಯಗಳಿವೆ. ಆದರೆ, ಕೆಲವು ಬಡಾವಣೆಗಳಲ್ಲಿ ಎನ್‌ಆರ್‌ಇಜಿಎ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಿಸಬೇಕಾಗಿದ್ದು, ಇದನ್ನು ಸಂಬಂಧಿಸಿದ ಪಂಚಾಯಿತಿಯಿಂದ ಹಂತ ಹಂತವಾಗಿ ಮಾಡಲಾಗುವುದು. ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಾಗಿರುವುದರಿಂದ ಕೆಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ನೀಡಲು ಅಡಚಣೆಯಾಗುತ್ತಿದೆ. ಇದನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಜಿಲ್ಲಾ ಐಟಿಡಿಪಿ ಅಧಿಕಾರಿ ಹೊನ್ನೇಗೌಡ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com